ಬೆಂಗಳೂರು
ಹಳೇ ದ್ವೇಷದ ಹಿನ್ನೆಲೆಯಲ್ಲಿ ರೌಡಿ ಸುನೀಲ್ ಕುಮಾರ್‍ನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗೆ ಚೆನ್ನಪಟ್ಟಣ ಪೊಲೀಸರ ವಿಶೇಷ ತಂಡ ರಚಿಸಲಾಗಿದೆ.
ಚನ್ನಪಟ್ಟಣದ ರಾಂಪುರದ ರೌಡಿ ಸುನೀಲ್‍ಕುಮಾರ್(26)ನನ್ನು ಗ್ರಾಮದ ಹೊರವಲಯದ ತೆಂಗಿನ ತೋಟದಲ್ಲಿ ಕಳೆದ ಮಂಗಳವಾರ ರಾತ್ರಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿರುವ ದುಷ್ಕರ್ಮಿಗಳ ಸುಳಿವು ಪತ್ತೆಯಾಗಿದ್ದು ಶೀಘ್ರದಲ್ಲಿಯೇ ಬಂಧಿಸುವುದಾಗಿ ರಾಮನಗರದ ಎಸ್‍ಪಿ ರಮೇಶ್ ಬನ್ನೋತ್ ತಿಳಿಸಿದ್ದಾರೆ.
ಕೊಲೆ,ಕೊಲೆಯತ್ನ,ಸುಲಿಗೆ,ಬೆದರಿಕೆ ಇನ್ನಿತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದ ಸುನೀಲ್‍ಕುಮಾರ್ ಗ್ರಾಮ ತೊರೆದು ಹಲವು ದಿನಗಳ ನಂತರ ಆಗಮಿಸಿ ಮಂಗಳವಾರ ರಾತ್ರಿ ಸುನೀಲ್ ಮನೆಯಲ್ಲಿದ್ದಾಗ ಬಂದ ದುಷ್ಕರ್ಮಿಗಳು ಪಾರ್ಟಿ ಮಾಡಲೆಂದು ತೆಂಗಿನ ತೋಟಕ್ಕೆ ಕರೆದುಕೊಂಡು ಹೋಗಿದ್ದಾರೆ.
ಪಾರ್ಟಿಯಲ್ಲಿ ಮದ್ಯಪಾನ ಮಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆಯ ಮೇಲೆ ಕಲ್ಲು ಎತ್ತು ಹಾಕಿ ಕೊಲೆ ಪರಾರಿಯಾಗಿದ್ದು ಮರುದಿನ. ಬೆಳಗ್ಗೆ ತೋಟದ ಮಾಲೀಕ ಮರಿಯಪ್ಪ ಜಮೀನಿಗೆ ಹೋದಾಗ ಕೊಲೆಯಾಗಿರುವುದು ಕಂಡು ಬಂದಿದೆ.
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಧಾವಿಸಿದ ಚನ್ನಪಟ್ಟಣ ಗ್ರಾಮಾಂತರ ಠಾಣೆಯ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಪತ್ತೆಗೆ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು.
ಖತರ್ನಾಕ್ ಸುನೀಲ್
ಕ್ಯಾಬ್ ಡ್ರೈವರ್ ಆಗಿದ್ದ ಸುನೀಲ್ ಮೈಸೂರಿನಲ್ಲಿ ಜ್ಯುವೆಲ್ಲರಿ ಅಂಗಡಿ ಮಾಲೀಕನ ಪತ್ನಿಯ ಪರಿಚಯ ಮಾಡಿಕೊಂಡು ಡ್ರೈವಿಂಗ್ ಹೇಳಿಕೊಡುವ ನೆಪದಲ್ಲಿ ಅನೈತಿಕ ಸಂಬಂಧ ಬೆಳೆಸಿದ್ದನು. ಗೃಹಿಣಿಯ ಮನೆಯವರಿಗೆ ವಿಷಯ ತಿಳಿದು ರಂಪಾಟವಾಗಿದ್ದರಿಂದ ಆಕೆಯು ಸುನೀಲ್ ಸಂಪರ್ಕ ಬಿಟ್ಟಿದ್ದಳು.
ಇದರಿಂದ ರೊಚ್ಚಿಗೆದ್ದಿದ್ದ ಸುನೀಲ್ ಆಕೆಯ ಮನೆಗೆ ನುಗ್ಗಿ ಕೊಲೆ ಮಾಡಿ ಸೂಟ್‍ಕೇಸ್‍ನಲ್ಲಿ ಮೃತದೇಹವನ್ನು ತುಂಬಿಕೊಂಡು ಬಂದು ಚನ್ನಪಟ್ಟಣದ ಮೆಣಸಿಗನಹಳ್ಳಿ ಬಳಿಯ ಕಾಡಿನ ಜಾಡಿನಲ್ಲಿ ಸುಟ್ಟು ಜೈಲುಪಾಲಾಗಿದ್ದ ಕುಖ್ಯಾತಿ ಹೊಂದಿದ್ದಾನೆ.
ಈತನ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ಸಹ ಪ್ರಕರಣಗಳು ದಾಖಲಾಗಿವೆ. ಈ ಮಧ್ಯೆ ಧಾರಾವಾಹಿಗಳಲ್ಲಿ ನಟಿಸುವ ತನ್ನ ಅತ್ತೆ ಮಗಳಿಗೂ ಕೂಡ ಕೊಲೆ ಬೆದರಿಕೆ ಹಾಕಿದ್ದು ಹಲವರ ದ್ವೇಷವನ್ನು ಸಹ ಕಟ್ಟಿಕೊಂಡಿದ್ದನು. ಈ ಹಿನ್ನೆಲೆಯಲ್ಲಿಯೇ ಹತ್ಯೆ ನಡೆದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳಾ ಶೌಚಾಲಯಕ್ಕೆ ನುಗ್ಗಿದವನ ಸೆರೆ
ಬುರ್ಕಾ ಧರಿಸಿ ಮಹಿಳಾ ಶೌಚಾಲಯಕ್ಕೆ ನುಗ್ಗಿದ ಖತರ್ನಾಕ್ ಕಾಮುಕನನ್ನು ಸಾರ್ವಜನಿಕರು ಹಿಡಿದು ಧರ್ಮದೇಟು ಕೊಟ್ಟು ಕಾಟನ್‍ಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತ ಕಾಮುಕನನ್ನು ಮದನ್ ಕುಮಾರ್ ಎಂದು ಗುರುತಿಸಲಾಗಿದೆ ಸಿಟಿ ರೈಲ್ವೆ ನಿಲ್ದಾಣದ ಮಹಿಳಾ ಶೌಚಾಲಯಕ್ಕೆ ಬುರ್ಕಾ ಧರಿಸಿ ನುಗ್ಗಿದ ಕುಮಾರ್‍ನನ್ನು ಕಂಡ ಮಹಿಳೆಯರು ಜೋರಾಗಿ ಕಿರುಚಿದ್ದಾರೆ.
ಮಹಿಳೆಯರ ಕಿರುಚಾಟ ಕೇಳಿದ ಸ್ಥಳೀಯರು ಕುಮಾರ್‍ನನ್ನು ಹಿಡಿದು ಧರ್ಮದೇಟು ಕೊಟ್ಟು ಒಪ್ಪಿಸಿದ ಕುಮಾರ್‍ನನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
