ತಾಲ್ಲೂಕು ಆಡಳಿತದಿಂದ ಪರಿಸರ ದಿನಾಚರಣೆ…!!!

ತುರುವೇಕೆರೆ:

      ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು ಕೇವಲ ಪರಿಸರ ದಿನಾಚರಣೆಯಲ್ಲಿ ಮಾತ್ರ ಗಿಡ ನೆಟ್ಟರೆ ಸಾಲದು, ಗಿಡವನ್ನು ಪೋಷಿಸಿ ಬೆಳೆಸುವ ಬಗ್ಗೆಯೂ ಸಹಾ ಕಾಳಜಿ ಮೂಡಿಸುವಂತಹ ಕಾರ್ಯಕ್ರಮಗಳಾಗಬೇಕು ಎಂದು ತಾ.ಪಂ ಅಧ್ತಕ್ಷೆ ನಾಗರತ್ನರವೀಂದ್ರ ತಿಳಿಸಿದರು.

      ತಾಲೂಕಿನ ಅರಳಿಕೆರೆ ಶ್ರೀ ಬೊಮ್ಮಲಿಂಗೇಶ್ವರ ಸಮುದಾಯ ಭವನದ ಆವರಣದಲ್ಲಿ ತಾಲೂಕು ಪಂಚಾಯ್ತಿ, ಅರಣ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ಮರಗಳನ್ನು ಬೆಳಸುವುದಕಿಂತ ಕಡಿಯುವವರೇ ಹೆಚ್ಚಾಗಿದ್ದಾರೆ. ಒಂದು ಮರ ಕಡಿಯುವ ಮುನ್ನಾ ಇನ್ನೆರಡು ಮರಗಳನ್ನು ಬೆಳಸಬೇಕಿದೆ ಎಂದರು.

      ತಾ.ಪಂಚಾಯ್ತಿ ಉಪಾದ್ಯಕ್ಷ ನಂಜೇಗೌಡ ಮಾತನಾಡಿ ಪರಿಸರವನ್ನು ಕಾಪಾಡುವ ದೃಷ್ಟಿಯಿಂದ ಪ್ರತಿಯೊಬ್ಬರು ಪರಿಸರ ರಕ್ಷಣೆಗೆ ಗಿಡ ನೆಡುವುದರ ಜೊತೆಗೆ ಭೂಮಿ, ನೀರು ಗಾಳಿ, ಗಿಡ ಮತ್ತು ಮರಗಳನ್ನು ಒಳಗೊಂಡಂತೆ ಪರಿಸರದ ಶುದ್ಧವಾಗಿ ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಕುಟುಂಬದ ಸದಸ್ಯರು ಮನೆಗೊಂದು ಗಿಡ ನೆಡುವ ಮೂಲಕ ಪರಿಸರ ಕಾಪಾಡಿ ಎಂದರು.

      ಇ.ಓ ಜಯಕುಮಾರ್ ಮಾತನಾಡಿ ಮಕ್ಕಳಿಗೆ ಗಿಡ ನೆಟ್ಟು ಪೋಷಿಸುವ ಬಗ್ಗೆ ಪ್ರೇರಣೆಯನ್ನು ನೀಡಿ ಸಹಕಾರ ನೀಡುವ ಕಾರ್ಯವನ್ನು ಪೋಷಕರು ಹಾಗೂ ಶಿಕ್ಷಕರು ಮಾಡಬೇಕು ಎಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ತಾ.ಪಂಚಾಯ್ತಿ ಸದಸ್ಯರಾದ ಸ್ವಾಮಿ, ತೀರ್ಥಕುಮಾರಿರವಿಕುಮಾರ್, ಟಿ.ಬೈರಪ್ಪ, ಮಂಜುನಾಥ್, ಉಪ ತಹಶೀಲ್ದಾರ್ ಸಿದ್ದಗಂಗಯ್ಯ, ಗ್ರಾಮ ಪಂಚಾಯ್ತಿ ಅದ್ಯಕ್ಷೆ ಮಾಳಮ್ಮ, ಉಪಾಧ್ಯಕ್ಷೆ ಕವಿತರವೀಶ್, ಸದಸ್ಯರಾದ ಬೊಮ್ಮಲಿಂಗಯ್ಯ, ಮೋಹನ್, ಶಿವಶಂಕರ್, ಮಂಜುನಾಥ್, ಚಂದ್ರಶೇಖರ್, ಬಿಇಓ ರಂಗದಾಮಯ್ಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಶ್ಯಾಮಲ, ಪ್ರಹ್ಲಾದ್, ಸಮಾಜಿಕ ಅರಣ್ಯಾಧಿಕಾರಿ ನಿಸಾರ್‍ಅಹಮದ್, ಬಿಆರ್ಸಿ ವಸಂತ್ ಕುಮಾರ್, ಗ್ರಾಮ ಪಂಚಾಯ್ತಿ ಪಿಡಿಓ ಜಗದೀಶಾಚಾರ್, ಲೆಕ್ಕಾಧಿಕಾರಿ ನರೇಂದ್ರ, ಮಾದಿಹಳ್ಳಿ ಪ್ರೌಡ ಶಾಲೆ ಶಿಕ್ಷಕರು, ಮಕ್ಕಳು ಹಾಗೂ ಅರಳೀಕೆರೆ ಸರ್ಕಾರಿ ಕಿರಿಯ ಪಾಠಶಾಲೆ ಶಿಕ್ಷಕರು, ಮಕ್ಕಳು ಸೇರಿದಂತೆ ಗ್ರಾಮಸ್ಥರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link