ಕನ್ನಡ ಜಾನಪದ ಪರಿಷತ್ ತಾಲೂಕು ಘಟಕ ಉದ್ಘಾಟನೆ

ಹಗರಿಬೊಮ್ಮನಹಳ್ಳಿ:  
 
       ಜಾನಪದ ಮೂಲೆಗುಂಪಾದರೆ ಮಾನವ ಜನಾಂಗ ಮುಕ್ಕಾದಂತೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ||ಎಸ್.ಬಾಲಾಜಿ ಅಭಿಪ್ರಾಯ ವ್ಯಕ್ತಪಡಿಸಿದರು.
         ಅವರು ಪಟ್ಟಣದ ಶ್ರೀರೇಣುಕ ಸಮನ್ವಯ ಸಂಯುಕ್ತ ಪ.ಪೂ.ಕಾಲೇಜ್ ಆವರಣದ ಸಭಾಂಗಣದಲ್ಲಿ ಬುಧವಾರ ಜರುಗಿದ ಕನ್ನಡ ಜಾನಪದ ಪರಿಷತ್ ತಾಲೂಕು ಘಟಕ ಉದ್ಘಾಟನಾ ಸಮಾರಂಭವನ್ನು ರಾಗಿ ಬೀಸುವ ಮೂಲಕ ನೆರವೇರಿಸಿ ಮಾತನಾಡಿದರು. ಕೃಷಿ ಸಂಸ್ಕøತಿಯಿಂದ ಬೆಳೆದು ಬಂದ ಜಾನಪದ ಸಂಸ್ಕøತಿಯಾಗಿದ್ದು, ಮುಂದೆ ಜಾನಪದ ಸಾಹಿತ್ಯವಾಗಿ ಹುಟ್ಟಿಕೊಂಡಿತು. ಜಾನಪದ ಕಲೆಯು ಎಂದಿಗೂ ಗಟ್ಟಿಯಾದುದ್ದು, ಇದು ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ.
 
         ಯಾವುದೇ ತಂತ್ರಿಕಾಯುಗವೇ ಬರಲಿ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕøತಿ ನಾಶವಾಗಲು, ಮೂಲೆ ಗುಂಪಾಗಲು ಸಧ್ಯವೇ ಇಲ್ಲವೆಂದರು. ಜಾನಪದ ಅಧ್ಯಾಯನ ಮತ್ತು ತರಬೇತಿ ಕೇಂದ್ರವನ್ನು ಬೆಂಗಳೂರಿನಲ್ಲಿ ತೆರೆಯುವ ಮಹತ್ವ ಆಕಾಂಕ್ಷಿ ಸಂಘನೆಯದಾಗಿದೆ. ಜಾನಪದ ಪರಿಷತ್‍ನತ್ತ ಯುವಜನತೆಯನ್ನು ಆಕರ್ಷಿಸಲು ಇಂದಿನ ತಾಂತ್ರಿಕತೆಯನ್ನು ಬಳಸಿಕೊಳ್ಳಲಾಗುವುದು ಎಂದ ಅವರು, ಇದು 173ನೇ ತಾಲೂಕು ಘಟಕವಾಗಿದೆ, ರಾಜ್ಯದಲ್ಲಿ 1343ಕ್ಕೂ ಹೆಚ್ಚು ಗ್ರಾಮ ಘಟಕಗಳು ಇವೆ. ಮುಂದೊಂದು ದಿನ ಮನೆಮನೆಯ ಕಾರ್ಯಕ್ರಮ ಇದಾಗಲಿದ್ದು ಕನ್ನಡ ಜಾನಪದ ರಾಜ್ಯದಲ್ಲಿ ಮುಂದೆ ಕನ್ನಡನಾಡಿನಲ್ಲಿ ಮೆರೆಯುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
      ಹಂಪಿ ವಿಶ್ವವಿದ್ಯಾಲಯದ ಜಾನಪದ ವಿದ್ವಾಂಸರಾದ ಡಾ||ಚೆಲುವರಾಜು ಮಾತನಾಡಿ, ಜಾನಪದ ಎಂಬುದು ತೊಟ್ಟಿಲಿನಿಂದ ಹಿಡಿದು ಚಟ್ಟದವರೆಗೂ, ನಮ್ಮ ಜೀವನದ ಎಲ್ಲಾ ಮಗ್ಗಲುಗಳನ್ನು ಹೇಳಿಕೊಂಡು ಹೋಗುವ ಕಲೆಯೇ ಜಾನಪದ ಕಲೆಯಾಗಿದೆ ಎಂದರು.
       ರೇಣುಕಾ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಕೆ.ಎಂ.ತಿಪ್ಪೇಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪುಸ್ತಕದಲ್ಲಿನ ವಿಷಯಗಳನ್ನು ಓದಿ ತಿಳಿದುಕೊಳ್ಳುವುದರ ಜೊತೆಗೆ, ಜಾನಪದ ಸಾಹಿತ್ಯ, ಕಲೆ, ಸಂಸ್ಕøತಿಗಳ ಬಗ್ಗೆ ವಿದ್ಯಾರ್ಥಿಗಳು ಅಧ್ಯಾಯನ ಮಾಡಬೇಕು ಎಂದರು.ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್‍ನ ಮುಖ್ಯಸ್ಥೆಯಾದ ಎಂ.ಪಿ.ಪ್ರಕಾಶ್‍ರವರ ಪುತ್ರಿ ಸಿ.ವೀಣಾ ಮಹಾಂತೇಶ್ ಅಧ್ಯಕ್ಷತೆವಹಿಸಿ, ಜಾನಪದ ಸಾಹಿತ್ಯ ಎನ್ನುವುದು ಅದರ ಹುಟ್ಟು ಗ್ರಾಮೀಣ ಸೊಗಡಿನಿಂದ ಬಂದುದ್ದಾಗಿದೆ.
       ಇದು ಜನರ ಬಾಯಿಂದ ಬಾಯಿಗೆ ಹರಡುತ್ತಾ ಜಾನಪದವಾಗಿದೆ. ಇದು ಪೌರಾಣಿಕ ಯುಗದಿಂದ ಇಂದಿನ ಮೊಬೈಲ್ ಯುಗದಲ್ಲೂ ಜಾನಪದ ಸಾಹಿತ್ಯಕ್ಕೆ ಮಹತ್ವ ಇದೆ. ಇದರ ಪ್ರಭಾವ ಎಂದುಗೂ ಕಡಿಮೆಯಾಗುವುದಿಲ್ಲ ಆದ್ದರಿಂದ ಜಾನಪದ ವಿಷಯದ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ನಮ್ಮ ತಂದೆಯವರಾದ ಮಾಜಿ ಉಪಮುಖ್ಯಮಂತ್ರಿಗಳು ದಿ.ಎಂ.ಪಿ.ಪ್ರಕಾಶ್‍ರವರ ಕನ್ನಡ ನಾಡು, ನುಡಿ, ಜಲ, ಭಾಷೆ ಮತ್ತು ಕಲೆ, ಸಂಸ್ಕøತಿಗಳಿಗೆ ಮಹತ್ವ ನೀಡುತ್ತ ಅವರು ಕಂಡ ಆಶಯವೇ ಬೇರೆಯಾಗಿತ್ತು. ಆ ನಿಟ್ಟಿನಲ್ಲಿ ನಾವು ಈಡೇರಿಸುವ ಪ್ರಯತ್ನ ಮಾಡುತ್ತೇವೆ.
 
       ಈ ವೇದಿಕೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕೋಗಳಿ ಪಂಪಣ್ಣನವರಿಗೆ ಜಾನಪದ ಪರಿಷತ್ ತಾಲೂಕು ಘಟಕದಿಂದ ಸನ್ಮಾನ ಮಾಡಲಾಯಿತು. ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಟಿ.ಮಹೇಂದ್ರ ಮತ್ತು ಕ.ಜಾ.ಪ ಶಿವಮೊಗ್ಗ ಜಿಲ್ಲಾಧ್ಯಕ್ಷ ಮಹೇಂದ್ರ ಗೋರೆ ಮಾತನಾಡಿದರು. ಕನ್ನಡ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎ.ಕೇಶವ ಮೂರ್ತಿ, ಜಿ.ಪಂ.ಮಾಜಿ ಉಪಾಧ್ಯಕ್ಷೆ ಮಮತಾಸುರೇಶ್, ರೇಣುಕಾ ಸಂಸ್ಥೆಯ ಕಾರ್ಯದರ್ಶಿ ಇಂದುಮತಿ ತಿಪ್ಪೇಸ್ವಾಮಿ, ಎಂ.ಪಿ.ಕೊಟ್ರೇಶ್, ಎಲೆಗಾರ್ ಕುಬೇರಪ್ಪ, ಕಲಾವಿದ ಜಿ.ತಿಮಣ್ಣ, ಮಾಲವಿ ಕಿಟ್ಟಪ್ಪ, ಅಭಿಷೇಕ್ ಭಾರ್ಗವ, ಪ್ರಶಾಂತ್ ಬ್ಯಾಲಾಳ್, ಅಕ್ಷಯ್, ಮುಟುಗನಹಳ್ಳಿ ದೊಡ್ಡಬಸಪ್ಪ, ತೊಗರಿ ಹನುಮಂತಪ್ಪ ಇದ್ದರು.
        ಯುವ ಮುಖಂಡ ಪತ್ರೇಶ್ ಹಿರೇಮಠ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೊಂದಲಿಗರ ರಾಮಣ್ಣ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಹಲಗಾಪುರದ ಪಂಪಾಪತಿ ಹಾಗೂ ಎಸ್.ಮಂಜುನಾಥ ನಿರ್ವಹಿಸಿದರು.
  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link