ಹೊಸಪೇಟೆ :
ಇದೇ ಜ.26ರಂದು ಹೊಸಪೇಟೆ ತಾಲೂಕು ನೇಕಾರರ ಸಂಘದ ಉದ್ಘಾಟನೆ ನಗರದ ಮಾರ್ಕಂಡೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ತಾಲೂಕು ನೇಕಾರರ ಸಂಘದ ಅಧ್ಯಕ್ಷ ಬಸವರಾಜ ನಾಲತವಾಡ ತಿಳಿಸಿದರು.
ಇಲ್ಲಿನ ಮಾರ್ಕಂಡೇಶ್ವರ ಕಲ್ಯಾಣ ಮಂಟಪದಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇಕಾರ ಸಮುದಾಯಗಳಾದ ಪದ್ಮಸಾಲಿ, ಕುರುಹೀನಶೆಟ್ಟಿ, ದೇವಾಂಗ, ಪಟ್ಟಸಾಲಿ, ಸ್ವಕುಳಸಾಲಿ, ತೆಲುಗು ದೇವಾಂಗ, ಹಾಗು ತೊಗಟವೀರ ಸಮಾಜದವರೆಲ್ಲರನ್ನು ಒಂದೇ ವೇದಿಕೆಯಡಿ ತರಬೇಕು ಎಂಬ ಉದ್ದೇಶದಿಂದ ಜ.26ರಂದು ಸಂಘದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ತುಮ್ಮಿನಕಟ್ಟಿ ಪದ್ಮಶಾಲಿ ಗುರುಪೀಠದ ಪ್ರಭುಲಿಂಗ ಮಹಾಸ್ವಾಮಿಗಳು, ಹಂಪಿ ಗಾಯಿತ್ರಿಪೀಠದ ದಯಾನಂದಪುರಿ ಮಹಾಸ್ವಾಮಿಗಳು, ಗದಗ ಬೆಟಗೇರಿಯ ನೀಲಕಂಠ ಪಟ್ಟದಾರಿ ಮಹಾಸ್ವಾಮಿಗಳು, ಹಳೇ ಹುಬ್ಬಳ್ಳಿಯ ಶಿವಶಂಕರಸ್ವಾಮಿಗಳು, ದೊಡ್ಡಬಳ್ಳಾಪುರದ ದಿವ್ಯಜ್ಞಾನಾನಂದಗಿರಿ ಮಹಾಸ್ವಾಮಿಗಳು, ಗುಳೇದಗುಡ್ಡದ ಬಸವರಾಜ ಪಟ್ಟಾದಾರ್ಯ ಮಹಾಸ್ವಾಮಿಗಳು ವಹಿಸುವರು.
ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ ಕಾರ್ಯಕ್ರಮ ಉದ್ಘಾಟಿಸುವರು.ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ, ಶಾಸಕ ಆನಂದಸಿಂಗ್, ಸಾಹಿತಿ ವಿಠ್ಠಪ್ಪ ಗೋರಂಟ್ಲ, ತಹಶೀಲ್ದಾರ್ ಎಚ್.ವಿಶ್ವನಾಥ, ನೇಕಾರ ಸಮಾಜದ ಜಿಲ್ಲಾಧ್ಯಕ್ಷ ದಯಾನಂದ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಬೋಡಾ ರಾಮಪ್ಪ, ಮಹೇಶ ಮಾಚಲ್, ಅಗಳಿ ಭಾಸ್ಕರ್, ಕೊಳಗದ ಗಣಪತಿ, ಕೆಂಚೆ ಮಹೇಶಕುಮಾರ್, ಕೆ.ಎಂ.ಗುರುರಾಜ, ಬುದ್ದಿ ರಾಮಕೃಷ್ಣ, ಎನ್. ಆಂಜನೇಯ, ಪುಲಿಪಾಟಿ ನಾಗರಾಜ, ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
