ತಾಲ್ಲೂಕು ಪಂಚಾಯತಿ ಸಾಮಾನ್ಯ ಸಭೆ

ಮಧುಗಿರಿ:

           ತಾಲ್ಲೂಕಿನಲ್ಲಿ ಬೇಸಿಗೆಯ ಆರಂಭಕ್ಕೂ ಮುನ್ನವೇ ನೀರಿನ ಸಮಸ್ಯೆ ಎದುರಾಗುತ್ತಿದ್ದು ಅಧಿಕಾರಿಗಳು ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಇಂದಿರಾ ದೇನಾನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.

         ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೆರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ತಾಲ್ಲೂಕಿನಾದ್ಯಂತ ನೀರಿನ ಸಮಸ್ಯೆ ಉಂಟಾಗುತ್ತಿದೆ. ಜನಸಾಮಾನ್ಯರಿಗೆ ತೊಂದರೆಯಾಗದಂತೆ ಸಂಭಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.

         ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಶುದ್ಧ ನೀರಿನ ಘಟಕವನ್ನು ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯನ್ನು ಶಾಸಕರ ಕುಮ್ಮಕ್ಕಿನಿಂದ ಕೆಲಸದಿಂದ ತೆಗೆದು ಆ ಜಾಗಕ್ಕೆ ಬೇರೆಯವರನ್ನು ನಿಯೋಜಿಸಿರುವುದರಿಂದ ಶುದ್ಧ ನೀರಿನ ಘಟಕ್ಕೆ ಬೀಗ ಜಡಿಯಲಾಗಿದೆ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಸಾರ್ವಜನಿಕರು ಪರಿದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರಾಮಣ್ಣ ಸಭೆಯ ಗಮನಕ್ಕೆ ತಂದರು. ತಕ್ಷಣ ಸಂಭಂಧಪಟ್ಟ ಅಧಿಕಾರಿಗಳು ಶುದ್ಧ ಕುಡಿಯುವ ನೀರಿನ ಘಟಕ್ಕೆ ಹಾಕಿರುವ ಬೀಗವನ್ನು ತೆಗೆದು ಗ್ರಾಮ ಪಂಚಾಯಾತಿಯವರೆ ನಿರ್ವಹಣೆ ಮಾಡಬೇಕೆಂದು ತಿಳಿಸಿದರು.

       ತಾಲ್ಲೂಕಿನ ಮಿಡಿಗೇಶಿ, ಕಸಿನಾಯಕನಹಳ್ಳಿ, ವೆಂಕಟಾಪುರ, ತೊಂಡೋಟಿ, ಚಿಕ್ಕದಾಳವಟ್ಟ, ಕಾರ್ಪೆನಹಳ್ಳಿ ಸೇರಿದಂತೆ ಇನ್ನೂ ಹಲವು ಕಡೆ ಶುದ್ಧ ನೀರಿನ ಘಟಕಗಳು ಕೆಟ್ಟು ನಿಂತಿವೆ ಎಂದು ಸದಸ್ಯರು ಸಭೆಗೆ ತಿಳಿಸಿದಾಗ ಗ್ರಾಮೀಣ ಮತ್ತು ಕುಡಿಯುವ ನೀರಿನ ಇಲಾಖೆಯ ಜೆ.ಇ ಮಾತನಾಡಿ ಒಟ್ಟು 55 ಗ್ರಾಮಗಳನ್ನು ಗುರುತಿಸಲಾಗಿದೆ ಅದಷ್ಟೂ ಬೇಗಾ ಘಟಕಗಳನ್ನು ಹಂತ ಹಂತವಾಗಿ ಗುರುತಿಸಿ ರೀಪೇರಿ ಮಾಡಲಾಗುವುದು ಎಂದು ಭರವಸೆ ನೀಡಿದರು.

      ಈ ಬಾರಿ ನಮ್ಮ ತಾಲ್ಲೂಕಿನಲ್ಲಿ ಶೇ.60ರಷ್ಟು ಮಳೆ ಕುಂಟಿತವಾಗಿದೆ ಶೇ.80ರಷ್ಟು ಬೆಳೆ ನಷ್ಟ ಉಂಟಾಗಿದೆ ಈ ಬಗ್ಗೆ ಸರಕಾರಕ್ಕೆ ಮಾಹಿತಿ ಒದಗಿಸಲಾಗಿದೆ ಕೃಷಿ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಇಲಾಖೆಯ ವತಿಯಿಂದ ಫಲಾನುಭವಿಗಳಿಗೆ ಒದಗಿಸುತ್ತಿರುವ ಟಾರ್ ಪಾಲ್‍ಗಳು ಗುಣಮಟ್ಟದಿಂದ ಕೂಡಿಲ್ಲ ಅಂಗಡಿಗಳಲ್ಲಿ ದರ ಕಡಿಮೆ ಇರುವ ಟಾರ್ಪಾಲ್ ಗಳು ದೊರಕುತ್ತಿವೆ ಆದಷ್ಟು ದರ ಕಡಿಮೆ ಇರುವ ಗುಣಮಟ್ಟದ ಟಾರ್ ಫಾಲ್ ತರಿಸುವಂತೆ, ಕೃಷಿ ಹೊಂಡಗಳನ್ನು ಸರಿಯಾದ ಜಾಗಗಳಲ್ಲಿ ನಿರ್ಮಿಸುವಂತೆ ಅಧಿಕಾರಿಗೆ ಸೂಚಿಸಿದರು.

        ಪಟ್ಟಣದಲ್ಲಿ ನಡೆದ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಗಳ ಆಮಂತ್ರಣ ಪತ್ರಿಕೆ ಸೇರಿದಂತೆ ಕೆಲವು ಸಭೆ ಸಮಾರಂಭಗಳಲ್ಲಿ ಜನಪ್ರತಿನಿಧಿಗಳ ಹೆಸರುಗಳನ್ನು ಅಧಿಕಾರಿಗಳು ಕೈ ಬಿಟ್ಟು ಶಿಷ್ಟಾಚಾರ ಉಲ್ಘಂಘಿಸಿದ್ದಾರೆ ಹಲವು ಬಾರಿ ಹೇಳಿದರೂ ಏನೂ ಪ್ರಯೋಜನಕ್ಕೆ ಬರುತ್ತಿಲ್ಲ ಕೆಲ ಶಿಕ್ಷಕರು ಶಾಲೆಗಳನ್ನು ಬಿಟ್ಟು ಪಾಠ ಪ್ರವಚನಗಳಲ್ಲಿ ತೊಡಗಿಸಿಕೊಳ್ಳದೆ ತಾವೇ ಸ್ಪರ್ಧಿಗಳಂತೆ ರಾಜಕೀಯ ಮಾಡುತ್ತಿದ್ದಾರೆ ಅಂತಹವರನ್ನು ಹೆಸರುಗಳನ್ನು ನಾವೇ ಪಟ್ಟಿ ಮಾಡಿ ಕೊಡುತ್ತೇವೆ ಹಾಗೂ ನಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡಲು ಸಿದ್ಧವಿದ್ದು ಅವರನ್ನೇ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹೇಳಿ ಇಲ್ಲವಾದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಸದಸ್ಯರಾದ ರಾಜು ಹಾಗೂ ಸೊಸೈಟಿ ರಾಮಣ್ಣ ಬಿಇಓ ವಿರುದ್ಧ ಕಿಡಿಕಾರಿದರೂ.

       2017ರಲ್ಲಿ ಮಳೆ ಇಲ್ಲದೆ 15,200 ಮರಗಳು ಒಣಗಿ ಹೋಗಿದ್ದು ಒಂದು ತೆಂಗಿನ ಮರಕ್ಕೆ 400 ರೂಪಾಯಿ ನಿಗಧಿಪಡಿಸಲಾಗಿದೆ ಹಾಗೂ ಸರಕಾರ ಮರು ಸರ್ವೇ ಕಾರ್ಯ ನಡೆಸಲು ಮತ್ತೆ ಸೂಚಿಸಿದೆ ಪಟ್ಟಿಯಲ್ಲಿ ಹೆಸರು ಕೈಬಿಟ್ಟಿದಲ್ಲಿ ಮತ್ತೆ ಅವಕಾಶವಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿ ಸಭೆಗೆ ತಿಳಿಸಿದರು.

          ಬಿಜವಾರ ಸದಸ್ಯ ರಂಗನಾಥ್ ಮಾತನಾಡಿ ಬರಗಾಲವಿದ್ದು ಅದಷ್ಟು ಬೇಗಾ ಪಶು ಇಲಾಖೆ ವತಿಯಿಂದ ಗೋ ಶಾಲೆಗಳನ್ನು ತೆರೆಯಬೇಕಾಗಿದ್ದು ಹೋಬಳಿ ಕೇಂದ್ರಗಳ ಸಮೀಪವೇ ಗೋ ಶಾಲೆ ತೆರೆಯ ಬೇಕು ಹಾಗೂ ಅಧಿಕಾರಿಗಳೂ ಮೂಲಭೂತ ಸೌಕರ್ಯಗಳಿರುವ ಕಡೆ ಗೋ ಶಾಲೆಗಳನ್ನು ತೆರೆಯುವಂತೆ ಮುಂದಾಗ ಬೇಕು ಎಂದರು.

         ಪಶು ಇಲಾಖೆಯ ವತಿಯಿಂದ ಎಸ್ ಸಿ ಮತ್ತು ಎಸ್ ಟಿ ಸಮೂದಾಯದವರಿಗೆ ಒಬ್ಬರಿಗೆ 10 ಗಿರಿರಾಜ ಕೋಳಿ ಮರಿಗಳನ್ನು ಉಚಿತವಾಗಿ ನೀಡಲಾಗುವುದು ಇತರೆ ಸಮೂದಾಯದವರು 2.5 ರೂಗಳನ್ನು ನೀಡಬೇಕಾಗಿದೆ ರೈತರು ಎತ್ತು ಎಮ್ಮೆ ಹೋರಿ, ಹಸು, ಕೋಣಗಳನ್ನು ಹೊಂದಿದ್ದರೆ ಅವುಗಳಿಗೂ ಸಹ ವಿಮೆ ಮಾಡಿಸುವ ಅವಕಾಶವನ್ನು ಈ ಬಾರಿ ಸರಕಾರ ನೀಡಿದೆ ರೈತರು ಬಳಸಿಕೊಳ್ಳಬೇಕೆಂದು ತಿಳಿಸಿದರು. ಸಭೆಯಲ್ಲಿ ಇಒ ಮೋಹನ್ ಕುಮಾರ್, ಉಪಾಧ್ಯಕ್ಷ ಲಕ್ಷ್ಮೀ ನರಸಯ್ಯ, ತಾಪಂ ಸದಸ್ಯರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link