ಕುಡಿಯುವ ನೀರು ಒದಗಿಸುವಂತೆ ಗ್ರಾಮಸ್ಥರಿಂದ ತಾಲೂಕು ಪಂಚಾಯಿತಿಗೆ ಮುತ್ತಿಗೆ

ಜಗಳೂರು :

          ಕಳೆದ ನಾಲ್ಕು ತಿಂಗಳಿನಿಂದ ಕುಡಿಯುವ ನೀರಿಲ್ಲ. ಬಳಕೆಗೂ ನೀರು ಒದಗಿಸುವಂತೆ ರೊಚ್ಚಿಗೆದ್ದ ಹನುಮಂತಾಪುರ ಗ್ರಾಮ ಪಂಚಾಯಿತಿಯ ಕಸವನಹಳ್ಳಿ ಕೊರಚರಹಟ್ಟಿ ಗ್ರಾಮಸ್ಥರು ತಾಲೂಕು ಪಂಚಾಯಿತಿಗೆÉ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.

          ಸೋಮವಾರ ಪಟ್ಟಣದ ತಾಲೂಕು ಪಂಚಾಯಿತಿಗೆ ಮುಂಭಾಗ ಹನುಮಂತಪುರ ಗ್ರಾಮ ಪಂಚಾಯಿತಿಯ ಕಸವನಹಳ್ಳಿ ಕೊರಚರಹಟ್ಟಿ ಗ್ರಾಮದ ಮಾಹಿಳೆಯರು ,ಮಕ್ಕಳು ವೃದ್ದರು ನೀರು ಕೊಡಿ ಎಂದು ತಾಲೂಕು ಪಂಚಾಯಿತಿ ಮುಂಭಾಗದಲ್ಲಿ ಬೆಳಗ್ಗೆಯಿಂದ ಪ್ರತಿಭಟನೆ ನಡೆಸಿದರು. ಇವರ ಸಮಸ್ಯೆ ಏನೆಂದು ಒಬ್ಬ ಅಧಿಕಾರಿಯಾಗಲಿ ಬಂದು ಕೇಳಲಿಲ್ಲ ಇದು ತಾಲ್ಲೂಕು ಅಧಿಕಾರಿಗಳ ಕಾರ್ಯ ವೈಖರಿಗೆ ಎಂದು ಗ್ರಾಮಸ್ಥರು ಆಸಮಾದಾನ ವ್ಯಕ್ತಪಡಿಸಿದರು.

          ಈ ವೇಳೆ ಗ್ರಾಮದ ಮುಖಂಡ ಸೋಮಶೇಖರ್ ಮಾತನಾಡಿ ಗ್ರಾಮದಲ್ಲಿ 60ಕ್ಕೂ ಅಧಿಕ ಕುಟುಂಬಗಳು ವಾಸಮಾಡುತ್ತಿದ್ದು ಸುಮಾರ 250ಕ್ಕೂ ಹೆಚ್ಚು ಜನ ವಾಸ ಮಾಡುತ್ತಿದ್ದೇವೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಳೆದ ನಾಲ್ಕು ತಿಂಗಳಿನಿಂದ ಉದ್ಬವಿಸಿದೆ ಸಮಸ್ಯೆ ಸರಿಪಡಿಸುವಂತೆ ಗ್ರಾಮ ಪಂಚಾಯಿತಿಗೆ ತೆರಳಿದರೆ ಪಿಡಿಓ ಕಛೆರಿಗೆ ಬಾರುವುದಿಲ್ಲ ಹಲವಾರು ಬಾರಿ ಅಲೆದಾಡಿದರು ಪ್ರಯೋಜನವಾಗಲಿಲ್ಲ. ಸಮಸ್ಯೆ ನೀಗಿಸುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಕಾಧಿಕಾರಿಗೆ ಮನವಿಸಲ್ಲಿಸಿದರು ಪ್ರಯೋಜನವಾಗಿಲ್ಲ . ವಿಧಿ ಇಲ್ಲದೇ ಇಂದು ಪ್ರತಿಭಟನೆ ನಡೆಸುತ್ತಿದ್ದೆ ಎಂದು ಹೇಳಿದರು.

         ಗ್ರಾಮದಲ್ಲಿ ಈಗಾಗಲೇ ಕೊಳಬಾವಿಯನ್ನು ಕೊರೆಸಿ ಮೂರು ತಿಂಗಳಾಗಿದೆ. ಅದಕ್ಕೆ ಮೋಟಾರ್ ಆಳವಾಡಿಸಿಲ್ಲ ಕಾರಣ ನೀರಿನ ಕೃತಕ ಆಭಾವ ಸೃಷ್ಟಿಸಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ಸುಳ್ಳು ಲೆಕ್ಕ ತೋರಿಸಿ ಹಣ ಹೊಡೆಯುವ ಯೋಜನೆ ಗ್ರಾಮ ಪಂಚಾಯಿತಿ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವರು ಉನ್ನಾರ ನಡೆಸುತ್ತಿದ್ದಾರೆ ಇದಕ್ಕೆ ಎಂದು ಗ್ರಾಮದ ಸುನಿತ , ನಿಲಮ್ಮ ,ಜಯಕ್ಕ , ಗೊವಿಂದಪ್ಪ, ರವಿ, ನವಿನಾ, ಸಾಕಮ್ಮ ಆರೋಪಿಸಿದರು.

        ಪ್ರತಿಭಟನೆ ನಡೆಸುತ್ತಿದ್ದರು ಸಹ ಇವರ ಸಮಸ್ಯೆಯನ್ನು ಯಾರು ಕೇಳದೆ ಇರುವುದರಿಂದ ಜಿಲ್ಲಾಧಿಕಾರಿಗಳ ಹತ್ತಿರ ತೆರಳುತ್ತೆವೆ. ಕ್ಷೇತ್ರದ ಶಾಸಕರಾದ ಎಸ್.ವಿ.ರಾಮಚಂದ್ರ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವ ಮೂಲಕ ಕುಡಿಯುವ ನೀರು ಒದಗಿಸಬೇಕೆಂದು ಎಂದು ಅವರು ಮನವಿ ಮಾಡಿದರು.ಪ್ರತಿಭಟನೆಯಲ್ಲಿ ಕಸವನಹಳ್ಳಿ ಕೊರಚರಹಟ್ಟಿ ಗ್ರಾಮಸ್ಥರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap