ತಾಲ್ಲೂಕಿಗೆ 77.22%ರಷ್ಟು ಫಲಿತಾಂಶ

ಚಿಕ್ಕನಾಯಕನಹಳ್ಳಿ

      ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕು ಜಿಲ್ಲೆಯಲ್ಲೇ 3ನೇ ಸ್ಥಾನ ಪಡೆದಿದ್ದು ಒಟ್ಟಾರೆ ಶೇ.77.22%ರಷ್ಟು ಫಲಿತಾಂಶ ದೊರೆತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಾತ್ಯಾಯಿನಿ ತಿಳಿಸಿದರು.

     ಪಟ್ಟಣದ ಬಿಇಓ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಈ ಬಾರಿ 2349 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಿದ್ದು, ಇದರಲ್ಲಿ 1885 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 1139 ಗಂಡುಮಕ್ಕಳು ಪರೀಕ್ಷೆಗೆ ಕುಳಿತಿದ್ದು ಇವರಲ್ಲಿ 873 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 1210 ಹೆಣ್ಣುಮಕ್ಕಳು ಪರೀಕ್ಷೆ ಬರೆದಿದ್ದು ಇವರಲ್ಲಿ 1012 ಜನ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

     ತಾಲ್ಲೂಕಿನಲ್ಲಿ 6 ಪ್ರ್ರೌಢಶಾಲೆಗಳಿಗೆ ಶೇಕಡ100% ರಷ್ಟು ಫಲಿತಾಂಶ ಬಂದಿದೆ. ಸಾಸಲು ಸರ್ಕಾರಿ ಪ್ರೌಢಶಾಲೆ, ಮೂರಾರ್ಜಿ ಶಾಲೆ, ನವೋದಯ ಶಾಲೆ, ಕೌಶಲ್ಯ ಅಕಾಡಮಿ, ಹುಳಿಯಾರಿನ ವಾಸವಿ ಪ್ರೌಢಶಾಲೆ ಹಾಗೂ ಜ್ಞಾನಜ್ಯೋತಿ ಪ್ರ್ರೌಢಶಾಲೆಗಳು ಶೇಕಡ 100ರಷ್ಟು ಫಲಿತಾಂಶ ಪಡೆದಿವೆ.

    ಪಟ್ಟಣದ ರೋಟರಿ ಶಾಲೆಯ ಮೂರು ವಿದ್ಯಾರ್ಥಿಗಳು ಅತಿ ಹೆಚ್ಚಿನ ಅಂಕ ಪಡೆದಿದ್ದು, ಜಿ.ಎಂ.ಶರಧಿ 622 ಅಂಕ, ಕೆ.ಬಿ.ವಿನಯ್ 616, ಎಸ್.ಶ್ರೇಯಾ 610 ಅಂಕ ಗಳಿಸಿದ್ದಾರೆ. ಹುಳಿಯಾರಿನ ಜಿ.ಪಿ.ಎಸ್ ಪ್ರ್ರೌಢಶಾಲೆ ಕೆ.ಎಸ್ ಸಿಂಚನ 609, ಚಿಕ್ಕನಾಯಕನಹಳ್ಳಿ ಸರ್ಕಾರಿ ಪ್ರ್ರೌಢಶಾಲೆಯ ಎಮ್.ಎಮ್ ಮಧನ್ 609 ಅಂಕ ಪಡೆದಿದ್ದಾರೆ.

     ತಾಲ್ಲೂಕಿನ ಅನುದಾನ ರಹಿತ ಫ್ರೌಢಶಾಲೆಗಳು ಶೇಕಡ 95.17ರಷ್ಟು ಹಾಗೂ ಸರ್ಕಾರಿ ಪ್ರ್ರೌಢಶಾಲೆಗಳು ಶೇಕಡ 82ರಷ್ಟು, ಅನುದಾನಿತ ಶಾಲೆಗಳು ಶೇಕಡ 74 ರಷ್ಟು ಫಲಿತಾಂಶ ಪಡೆದಿವೆ. ಮುದ್ದೇನಹಳ್ಳೀಯ ಪ್ರ್ರೌಢಶಾಲೆಯು ಶೇಕಡ 10 ರಷ್ಟು ಫಲಿತಾಂಶ ಪಡೆದು ಕೊನೆಯ ಸ್ಥಾನದಲ್ಲಿದೆ.

     ಕೌಶಲ್ಯ ಅಕಾಡೆಮಿ : ಪಟ್ಟಣದ ಕೌಶಲ್ಯ ಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆಗೆ ಶೇ.100%ರಷ್ಟು ಅಂಕ ಪಡೆದು ಶಾಲೆಗೆ ಕೀರ್ತಿ ತಂದಿರುವುದಕ್ಕೆ ಶಾಲಾ ಮುಖ್ಯೋಪಾಧ್ಯಾಯರಾದ ಶಿಲ್ಪರವರು ಹರ್ಷ ವ್ಯಕ್ತಪಡಿಸಿದ್ದಾರೆ. ಶಾಲಾ ವಿದ್ಯಾರ್ಥಿಗಳಾದ ಕೀರ್ತಿನ-89%, ಮಧುರ-82% ರಷ್ಟು ಅಂಕ ಪಡೆದಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ