ಗುತ್ತಲ:
ಪಟ್ಟಣದ ಹೊರವಲಯದಲ್ಲಿರುವ ದೊಡ್ಡ ಹೊಂಡ ಹಾಗೂ ರಾಣೇಬೆನ್ನೂರು ರಸ್ತೆಯ ಮುಖಾಂತರವಾಗಿ ಐತಿಹಾಸಿಕ ಚಂದ್ರಶೇಖರ ದೇವಸ್ಥಾನಕ್ಕೆ ಸಪರ್ಕವನ್ನು ಕಲ್ಪಿಸುವ ರಸ್ತೆಯನ್ನು ಪಟ್ಟಣ ಪಂಚಾಯಿತಿ ವತಿಯಿಂದ ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ.
ಸುಮಾರು ವರ್ಷಗಳಿಂದ ಪಟ್ಟಣದ ರಾಶಿ ರಾಶಿ ಕಸವನ್ನು ಹೊಡಂದ ಏರಿಯ ಮೇಲೆ ತಂದು ಹಾಕಿ ರಾಣೇಬೆನ್ನೂರು ರಸ್ತೆಯ ಮುಖಾಂತರ ದೇವಸ್ಥಾನಕ್ಕೆ ತೆರಳಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗುವಷ್ಟು ಕಸದ ರಾಶಿ ಇತ್ತು. ಇದನ್ನು ಕಂಡು ಶಾಸಕ ನೆಹರು ಓಲೇಕಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯನ್ನು ಕರೆಯಿಸಿ ತಕ್ಷಣದಿಂದಲೇ ಈ ರಸ್ತೆಯು ಸೂಕ್ತ ರೀತಿಯಲ್ಲಿ ಸ್ವಚ್ಛಗೊಳಿಸಿ ಹೊಂಡದ ಅಕ್ಕ ಪಕ್ಕ ಇರುವ ಮುಳ್ಳಿ ಕಂಟೆಯನ್ನು ಕಿತ್ತು ಹೊಂಡದ ನೀರಿಗೆ ಕಸ ಮಿಶ್ರಣವಾಗದಂತೆ ನೋಡಿಕೊಳ್ಳಬೇಕು ಹಾಗೂ ದೇವಸ್ಥಾನಕ್ಕೆ ತೆರಳುವ ದಾರಿ ಸ್ವಚ್ಛಂದವಾಗಿ ಕಾಣುವಂತೆ ಮಾಡಬೇಕು ಎಂದು ಅಧಿಕಾರಿಗೆ ಸೂಚಿಸಿದ್ದಾರೆ. ಇದರಿಂದ ಪಟ್ಟಣ ಪಂಚಾಯಿತಿಯವರು ಸ್ವಚ್ಛಗೊಳಿಸಲು ಮಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಮಾಧ್ಯಮದೊಂದಿಗೆ ಪ.ಪಂ ಮುಖ್ಯಾಧಿಕಾರಿ ಎಮ್.ಕೆ ಮುಗಳಿ ಮಾತನಾಡಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ರಸ್ತೆಯ ಅಕ್ಕ ಪಕ್ಕದಲ್ಲಿರುವ ಕಸದ ರಾಶಿ ಹಾಗೂ ಮುಳ್ಳಿನ ಕಟ್ಟೆಯನ್ನು ಸ್ವಚ್ಛಗೊಳಿಸಿ ದೇವಸ್ಥಾನಕ್ಕೆ ತೆರಳುವ ದಾರಿಯನ್ನು ಸುಂದರವಾಗಿ ಕಾಣುವಂತೆ ಮಾಡಲಾಗುವುದು ಹಾಗೂ ಮುಂದೆ ಈ ರೀತಿಯ ಕಸದ ರಾಶಿ ಈ ರಸ್ತೆಯ ಮೇಲೆ ಶೇಖರಣೆಯಾಗದಂತೆ ಕ್ರಮವಹಿಸಲಾಗುವುದು, ಹಾಗೂ ಹೊಂಡದ ನೀರಿಗೆ ಯಾವುದೆ ರೀತಿಯ ಕಸ ಮಿಶ್ರಣವಾದಂತೆ ಕ್ರಮಕೈಗೊಳ್ಳಲಾಗುದು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
