ಹುಳಿಯಾರು:
ಹುಳಿಯಾರು ಗ್ರಾಮ ಪಂಚಾಯ್ತಿಯು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದ ವರ್ಷದ ನಂತರ ಮೊದಲ ಕಂದಾಯ ಪರಿಷ್ಕರಣೆ ಏಪ್ರಿಲ್ 1 ರಿಂದ ಆಗಲಿದ್ದು ಈಗಾಗಲೇ ಪರಿಷ್ಕರಣಾ ಕಾರ್ಯ ಭರದಿಂದ ಸಾಗುತ್ತಿದೆ.ಮನೆ ಕಂದಾಯ, ನಿವೇಶನ ಕಂದಾಯ, ವಾಣಿಜ್ಯ ಮಳಿಗೆಗಳ ಕಂದಾಯ, ಕೈಗಾರಿಕೆಗಳ ಕಂದಾಯ ಸೇರಿದಂತೆ ಕುಡಿಯುವ ನೀರಿನ ಕಂದಾಯ, ಕಟ್ಟಡ ಪರವಾನಗಿ ಶುಲ್ಕ ಹೀಗೆ ಪಂಚಾಯ್ತಿಯಿಂದ ಸಂಗ್ರಹಿಸುವ ಎಲ್ಲಾ ಕಂದಾಯಗಳನ್ನು ಪರಿಷ್ಕರಿಸಲಿದ್ದು ಇದಕ್ಕೆ ಸಾಮಾನ್ಯ ಸಭೆಯ ಅನುಮೋದನೆ ಸಹ ಸಿಕ್ಕಿದೆ.
ಮನೆ ಕಂದಾಯ ಹೆಚ್ಚು ಏರಿಕೆಯಾಗದಿದ್ದರೂ ನಿವೇಶನ ಕಂದಾಯ ಹಾಗೂ ನೀರಿನ ಕಂದಾಯ ದುಬಾರಿ ಎನ್ನುವಂತೆ ಹೆಚ್ಚಿಸಲಾಗುತ್ತಿದೆ.ಈ ಹಿಂದೆ ಕೆಂಪು ಹೆಂಚು, ಕರಿ ಹೆಂಚು ಹಾಗೂ ಶೀಟಿನ ಮನೆಗಳೆಲ್ಲದಕ್ಕೂ ಒಂದೇ ದರ ಎನ್ನುವಂತೆ ಚದುರ ಅಡಿಗೆ 15 ರೂನಂತೆ, ಮಾಳಿಗೆ ಮನೆಗಳಿಗೆ ಚದುರ ಅಡಿಗೆ 25 ರೂ.ನಂತೆ, ವಾಣಿಜ್ಯ ಮಳಿಗೆಗಳಿಗೆ ಚದುರ ಅಡಿಗೆ 30 ರೂ.ನಂತೆ, ಖಾಲಿ ನಿವೇಶನಕ್ಕೆ ಚದುರ ಅಡಿಗೆ 3 ರೂ. ನಂತೆ ಸಂಗ್ರಹಿಸಲಾಗುತ್ತಿತ್ತು.
ಈಗ ಪರಿಷ್ಕೃತ ದರವನ್ನು ಪುರಸಭೆ ಕಾಯ್ದೆ 1964 ರ ಕಲಂ 102 (ಎ) ರ ಪ್ರಕಾರ ಮೂಲ ತೆರಿಗೆಯ ಮೇಲೆ ಹೆಚ್ಚಿಸಿದ್ದು ಇದರ ಪ್ರಕಾರ ಖಾಲಿ ನಿವೇಶನ ಚದುರ ಅಡಿಗೆ 18 ರೂ. ಮನೆಗಳಿಗೆ ಚದುರ ಅಡಿಗೆ 40 ರೂ, ವಾಣಿಜ್ಯ ಮಳಿಗೆಗಳಿಗೆ ಚದುರ ಅಡಿಗೆ 55 ರೂ, ಕೈಗಾರಿಕೆಗಳಿಗೆ ಚದುರ ಅಡಿಗೆ 60 ರೂ. ಆಗಲಿದೆ.
ಕಂದಾಯ ಪರಿಷ್ಕರಣೆ ಜೊತೆಯಲ್ಲೇ ಏಪ್ರಿಲ್ ಮಾಹೆಯಿಂದ ಕಟ್ಟಡ ಪರವಾನಿಗೆ ಶುಲ್ಕ ಸಹ ಹೆಚ್ಚಾಗಲಿದ್ದು ಮನೆಗಳಿಗೆ ಚದುರ ಅಡಿಗೆ 150 ರೂನಂತೆಯೂ, ವಾಣಿಜ್ಯ ಕಟ್ಟಡಕ್ಕೆ ಚದುರ ಅಡಿ 600 ರೂಗಳಂತೆಯೂ, ಕೈಗಾರಿಕೆಗಳಿಗೆ ಚದುರ ಅಡಿಗೆ 800 ರೂನಂತೆಯೂ ನಿಗಧಿ ಪಡಿಸಿಸಲಾಗಿದೆ.
ಅಲ್ಲದೆ ನೀರಿನ ಕಂದಾಯವನ್ನು ಮಾಸಿಕ 25 ರೂಗಳಿಂದ ಈಗ 80 ರೂಗಳಿಗೆ ಏರಿಸಲಾಗಿದೆ. ಹೊಸ ನಲ್ಲಿ ಜೋಡಣೆಗೆ 1500 ರೂ. ನಿಗಧಿ ಮಾಡಲಾಗಿದೆ.ಆಸ್ತಿ ತೆರಿಗೆ ಹೆಚ್ಚಳ ಆಗುವುದರಿಂದ ಪಟ್ಟಣ ಪಂಚಾಯ್ತಿಗೆ ವಾರ್ಷಿಕ ಕೋಟಿ ರೂ,ಗಳಿಗೂ ಹೆಚ್ಚು ಆದಯ ಬರುವ ನಿರೀಕ್ಷೆಯಿದೆ. ಈ ಹಿಂದೆ ಗ್ರಾಮ ಪಂಚಾಯ್ತಿಯಲ್ಲಿ 4300 ಮನೆಗಳು, 1800 ನಿವೇಶನಗಳೂ ಸೇರಿ ಒಟ್ಟು 27.40 ಲಕ್ಷ ರೂ ವಾರ್ಷಿಕ ಕಂದಾಯ ಸಂಗ್ರಹವಾಗುತ್ತಿತ್ತು. ಈಗ ಪರಿಷ್ಕøತ ದರದ ಪ್ರಕಾರ ಮನೆ, ನಿವೇಶನ, ವಾಣಿಜ್ಯ, ಕೈಗಾರಿಕೆ, ನೀರು, ಕಟ್ಟಡ ಪರವಾನಗಿ ಸೇರಿಸಿ ಕೋಟಿ ರೂ.ಗಳಿಗೂ ಅಧಿಕ ಸಂಗ್ರಹವಾಗಲಿದೆ ಎನ್ನಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
