ಬಿರುಗಾಳಿ ಮಳೆ : ಧರೆಗುರುಳಿದ ಟಿ ಸಿ : ಕಡಿತವಾದ ವಿದ್ಯತ್ ಸಂಪರ್ಕ

ಹಗರಿಬೊಮ್ಮನಹಳ್ಳಿ:
 
    ತಾಲೂಕಿನಾಧ್ಯಂತ ಮಂಗಳವಾರ ಮಧ್ಯಾಹ್ನ 3.30ಕ್ಕೆ ಆರಂಭವಾದ ಬಾರಿ ಬಿರುಗಾಳಿಯಿಂದ ಕೂಡಿದ ಮಳೆಗೆ ಅಲ್ಲಲ್ಲಿ ಮರಗಳು, ವಿದ್ಯುತ್ ಪರಿವರ್ತಕ ಸೇರಿ ಕಂಬಗಳು ನೆಲಕ್ಕುರುಳಿದ ಘಟನೆ ಜರುಗಿದೆ.
     ಸಂಜೆ 7.30ರವರೆಗೂ ಸುರಿದ ಮಳೆ ತಾಲೂಕಿನ ಬಹುತೇಕ ಎಲ್ಲಾ ಕಡೆ ಉತ್ತಮವಾದ ಮಳೆಯಾಗಿದೆ. ಪಟ್ಟಣದ ತೇರುಬೀದಿಯಲ್ಲಿನ ಮರಗಳು ಸೇರಿ ಕೆಲ ಕಡೆ ನೆಲಕ್ಕುರುಳಿವೆ. ತಾಲೂಕಿನ ಕೆಲ ಗ್ರಾಮಗಳಲ್ಲಿ ಏಳೆಂಟು ಬಿರುಗಾಳಿಗೆ ಮನೆಗಳ ಮೇಲ್ಛಾವಣೆ ಕಿತ್ತು ಹೋಗಿವೆ, ಆದರೆ, ಯಾವುದೆ ಪ್ರಾಣಾಪಾಯವಾಗಿಲ್ಲವೆಂದು ತಹಸೀಲ್ದಾರ್ ಆಶಪ್ಪ ಪೂಜಾರ್ ಮಾಹಿತಿ ನೀಡಿದರು. 
      ತಾಲೂಕಿನ ಯಡ್ರಮ್ಮನಹಳ್ಳಿಯಲ್ಲಿ, ಕಿತ್ನೂರು, ಮುತ್ಕೂರ್ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಮುರುದು ಬಿದ್ದಿವೆ. ಅದರಂತೆ ಬಸರಕೋಡು ಗ್ರಾಮದ ಜಂಬುನಾಥರವರ ತೋಟದಲ್ಲಿ 100ಕೆ.ವಿ. ವಿದ್ಯುತ್ ಪರಿವರ್ತಕ, ವಿದ್ಯುತ್ ಕಂಬಗಳು ಸಮೇತವಾಗಿ ನೆಲಕ್ಕುರುಳಿರುವ ಘಟನೆ ಜರುಗಿವೆ. ಬಾರಿ ಬಿರುಗಾಳಿ ಮತ್ತು ಮಳೆಗೆ ಇನ್ನೂ ಅನಾಹುತವಾಗಿರುವ ಘಟನೆಗಳು ಜರುಗಿರಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link