ಬಳ್ಳಾರಿ:
ಜಿಎಸ್‍ಟಿಯಲ್ಲಿ ಮೂಲದಲ್ಲಿ ತೆರಿಗೆ ಕಡಿತ(ಟಿಡಿಎಸ್)ವನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು ಮತ್ತು 2018 ಅ.1ರಿಂದ ಪ್ರತಿ ಮಾಹೆಯಂತೆ ಟಿಡಿಎಸ್ ಫೈಲ್ ಮಾಡಬೇಕು. ಸರಿಯಾಗಿ ಟಿಡಿಎಸ್ ಅನುಷ್ಠಾನಗೊಳಿಸದಿದ್ದರೇ ಡಿಡಿಒಗಳೇ ನೇರಹೊಣೆ ಎಂದು ಬಳ್ಳಾರಿಯ ವಾಣಿಜ್ಯ ತೆರಿಗೆ ಇಲಾಖೆಯ ಎನ್ಪೋರ್ಸ್‍ಮೆಂಟ್ ಕೇಂದ್ರ ವಲಯದ ಜಂಟಿ ಆಯುಕ್ತ ಟಿ.ರಾಜು ಅವರು ಹೇಳಿದರು.
ಜಿಎಸ್‍ಟಿಯಲ್ಲಿ ಮೂಲದಲ್ಲಿ ತೆರಿಗೆ ಕಡಿತ(ಟಿಡಿಎಸ್) ಕುರಿತು ಬಳ್ಳಾರಿ ನಗರ, ಸಿರಗುಪ್ಪ, ಕುರುಗೋಡು ತಾಲೂಕು ವ್ಯಾಪ್ತಿಯ ಡಿಡಿಒಗಳಿಗೆ ನಗರದ ಹೊರವಲಯದ ಬಿಐಟಿಎಂ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸರಕು ಮತ್ತು ಸಾಮಗ್ರಿಗಳಿಗೆ ಸಂಬಂಧಿಸಿದ 2.50ಲಕ್ಷ ರೂ.ಗಳಿಗಿಂತ ಹೆಚ್ಚಿನ ಮೊತ್ತದ ವೋಚರ್‍ಗಳಿದ್ದಲ್ಲಿ ಅದನ್ನು ಕೆ2 ಬಿಲ್ ಮಾಡುವುದರಲ್ಲಿಯೇ ಜಿಎಸ್‍ಟಿಯ ಟಿಡಿಎಸ್ ಕಡಿತಗೊಳಿಸಬೇಕು ಎಂದು ಹೇಳಿದ ಅವರು, ಜಿಎಸ್‍ಟಿಯಲ್ಲಿ ಟಿಡಿಎಸ್ ಪ್ರಾಮುಖ್ಯತೆ ಹಾಗೂ ಅದನ್ನು ಅನುಷ್ಠಾನಗೊಳಿಸದಿದ್ದರೇ ಡಿಡಿಒಗಳು ಎದುರಿಸಬೇಕಾದ ಸಮಸ್ಯೆಗಳ ಕುರಿತು ತರಬೇತಿಯಲ್ಲಿ ವಿವರಿಸಿದರು.
ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ ಕೆ.ಇ.ಮಲ್ಲಿಕಾರ್ಜುನ ಅವರು ಜಿಎಸ್‍ಟಿ ಟಿಡಿಎಸ್ ಅಂದರೇನು?,ಕಾನೂನಾತ್ಮಕ ಸೌಲಭ್ಯಗಳು, ಟಿಡಿಎಸ್ ರಿಟನ್ರ್ಸ್, ಟಿಡಿಎಸ್ ಅಪರಾಧಗಳು, ಟಿಡಿಎಸ್ ಪ್ರಮಾಣಪತ್ರ ಡೌನ್‍ಲೋಡ್ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿವರಿಸಿದರು.
ಜಿಲ್ಲಾ ಖಜಾನೆಯ ಲೆಕ್ಕಪರಿವೀಕ್ಷಕ ಡಿ.ಎಂ.ವಾಗೀಶ ಅವರು ಟಿಡಿಎಸ್ ಪ್ರೊಸಿಡಿಂಗ್ಸ್, ಕೆ2ನಲ್ಲಿ ಕಡಿತ ಮತ್ತು ಪೇಮೆಂಟ್ ಮಾಡುವ ಪ್ರಕ್ರಿಯೆ,ಜಿಎಸ್‍ಟಿ ಚಾಲನ್ ಪ್ರಕ್ರಿಯೆ ಸೇರಿದಂತೆ ಇನ್ನೀತರ ವಿಷಯಗಳ ಕುರಿತು ವಿವರಿಸಿದರು.
ಜಿಲ್ಲಾ ಖಜನಾಧಿಕಾರಿಗಳಾದ ರವೀಂದ್ರ ಹಕಾರಿ, ಸಹಾಯಕ ಖಜಾನಾಧಿಕಾರಿ ಅಮರೇಗೌಡ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಂಜುನಾಥಗೌಡ ಮತ್ತಿತರರು ಮಾತನಾಡಿದರು.ಜಿಎಸ್‍ಟಿಯಲ್ಲಿನ ಟಿಡಿಎಸ್ ಕಡಿತಗೊಳಿಸುವಿಕೆ ಸೇರಿದಂತೆ ಇನ್ನೀತರ ವಿಷಯಗಳ ಕುರಿತು ಸಂವಾದ ನಡೆಯಿತು. ವಿವಿಧ ಇಲಾಖೆಗಳ ಅಧಿಕಾರಿಗಳು(ಡಿಡಿಒಗಳು) ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ