18 ರಿಂದ 3 ದಿನಗಳ ತಂತ್ರಜ್ಞಾನ ಶೃಂಗ ಸಭೆ

ಬೆಂಗಳೂರು

     ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಶಯದಂತೆ ನವೀನ ಆವಿಷ್ಕಾರಗಳಿಗೆ ಕರ್ನಾಟಕ ಹೆಚ್ಚಿನ ಒತ್ತು ನೀಡಿದ್ದು, ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನವೆಂಬರ್ 18 ರಿಂದ 3 ದಿನಗಳ ತಂತ್ರಜ್ಞಾನ ಶೃಂಗ ಸಭೆ ನಡೆಯ ಲಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ಕರ್ನಾಟಕ ಸರ್ಕಾರದ ಐಟಿ,ಬಿಟಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಅತ್ಯಂತ ಪ್ರಮುಖ ಕಾರ್ಯಕ್ರಮವಾಗಿದ್ದು,ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿದೆ.ಉದ್ಯಮದ ಹಿರಿಯ ನಾಯಕರನ್ನೊಳ ಗೊಂಡ ವಿಷನ್ ಗ್ರೂಪ್ ನಮ್ಮೊಂದಿಗಿದೆ. ಹಿಂದೆಂದಿಗಿಂತಲೂ ಈ ಶೃಂಗಸಭೆ ವಿಭಿನ್ನ ಹಾಗೂ ದೊಡ್ಡ ಮಟ್ಟದಲ್ಲಿ ನಡೆಯಲಿದ್ದು, ಐಟಿ-ಬಿಟಿ ಸೇರಿದಂತೆ ಹೊಸ ಮತ್ತು ನವೀನ ತಂತ್ರಜ್ಞಾನ, ಅನ್ವೇಷಣೆಗಳ ಕುರಿತ ಚರ್ಚೆಗೆ ಸೂಕ್ತ ವೇದಿಕೆಯಾಗಲಿದೆ.ಈ ಬಾರಿ 20 ರಾಷ್ಟ್ರ ಗಳ ಅತಿ ದೊಡ್ಡ ಅಂತಾರಾಷ್ಟ್ರೀಯ ಸಮೂಹ ಸಭೆಯಲ್ಲಿ ಭಾಗಿಯಾಗಲಿದೆ. ಸಭೆಯಲ್ಲಿ ಹಲವು ಅಂತಾರಾಷ್ಟ್ರೀಯ ಒಪ್ಪಂದಗಳು ಏರ್ಪಡುವ ನಿರೀಕ್ಷೆಯೂ ಇದೆ ಎಂದು ಅವರು ತಿಳಿಸಿದರು.

     ಆರ್ 2-ರೋಬೊಟಿಕ್ ಪ್ರೀಮಿಯರ್ ಲೀಗ್ ಈ ವರ್ಷದ ಹೊಸ ಸೇರ್ಪಡೆ. ದೇಶದ ಅತಿ ದೊಡ್ಡ ರೊಬಾಟಿಕ್ಸ್ ಸ್ಫರ್ಧೆಯಲ್ಲಿ ರಾಜ್ಯದ ಎಲ್ಲ ಭಾಗಗಳ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ಇತರ ವಿದ್ಯಾರ್ಥಿಗಳ ಜತೆ ವಿಚಾರ ವಿನಿಮಯಕ್ಕೆ ವೇದಿಕೆ ಕಲ್ಪಿಸುವುದಲ್ಲದೇ, ಖ್ಯಾತ ಶಿಕ್ಷಣ ತಜ್ಞರು ಹಾಗೂ ಉದ್ದಿಮೆಯ ಪರಿಣಿತರಿಂದ ಮಾರ್ಗ ದರ್ಶನ ಪಡೆಯಲು ಸಭೆ ಅಪೂರ್ವ ಅವಕಾಶ ಒದಗಿಸುವುದು ಎಂದು ಅವರು ತಿಳಿಸಿದ್ದಾರೆ.

     ಎಸ್‍ಟಿಪಿಐ ಐಟಿ ಎಕ್ಸ್‍ಪೊರ್ಟ್ ಅವಾರ್ಡ್ ಹಾಗೂ ಸ್ಮಾರ್ಟ್ ಬಯೋ ಅವಾರ್ಡ್ ಅಲ್ಲದೇ, ಉದ್ದಿಮೆ ಪ್ರಶಸ್ತಿ ವಿಭಾಗಕ್ಕೆ ಈ ಬಾರಿ ಹೊಸದಾಗಿ ಬೆಂಗಳೂರು ಇಂಪ್ಯಾ ಕ್ಟ್ ಅವಾರ್ಡ್ ಸೇರ ಲಿದೆ.ಉದ್ಯಮದಲ್ಲಿ ಯಶಸ್ಸು ಕಂಡಿ ರುವ ಸಾಧಕರು ಜಾಗತಿಕ ನಕ್ಷೆಯಲ್ಲಿ ಬೆಂಗಳೂರಿಗೆ ವಿಶಿಷ್ಟ ಸ್ಥಾನ ತಂದುಕೊಟ್ಟಿದ್ದಾರೆ.ಇವರ ಸಾಧನೆಯನ್ನು ಗುರುತಿಸಿ,ಉತ್ತೇಜಿಸುವ ಉದ್ದೇಶ ದಿಂದ ಪ್ರಪ್ರಥ ಮ ಬಾರಿಗೆ ಬೆಂಗಳೂರು ಇಂಪ್ಯಾಕ್ಟ್ ಅವಾರ್ಡ್’ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

    ಜಾಗತಿಕ ಮಟ್ಟದಲ್ಲಿ ದೇಶದ ಘನತೆಯನ್ನು ಹೆಚ್ಚಿಸುವಲ್ಲಿ ಜೈವಿಕ ತಂತ್ರಜ್ಞಾನದ ಪಾತ್ರ ದೊಡ್ಡದು. ಬೆಂಗಳೂರು ಟೆಕ್ ಶೃಂಗ ಸಭೆಯ ಇಂಡಿಯಾ ಬಯೋ-“ಸ್ಮಾರ್ಟ್ ಬಯೋ ಪಿಚ್ ಟೂನಿಂಗ್ ಸೆಷನ್‍ಗೆ ಸಾಕ್ಷಿ ಆಗಲಿದೆ.ಆರಂಭಿಕ ಹಂತದ ಜೈವಿಕ ತಂತ್ರಜ್ಞಾನ ಸ್ಟಾರ್ಟ್ ಅಪ್‍ಗಳಿಗೆ ಕ್ಷೇತ್ರದ ಹಿರಿಯರ ಮಾರ್ಗದರ್ಶನ ದೊರೆಯಲಿದೆ.ಬಯೋ ಸ್ಟಾರ್ಟ್ ಅಪ್‍ಗಳಿ ಗಾಗಿ ಆಯೋಜಿಸಿರುವ ಮೊದಲ ಸಭೆ ಇದಾಗಿದ್ದು,20ಕ್ಕೂ ಹೆಚ್ಚು ಬಯೋಟೆಕ್ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಖಚಿತಪಡಿಸಿವೆ.ಬಯೋಟೆಕ್, ಮೆಡ್‍ಟೆಕ್,ಅಗ್ರಿಟೆಕ್ ಹಾಗೂ ಡಯಾಗ್ನೆಸ್ಟಿಕ್ ವಲಯದ ನವೋದ್ಯಮಗಳಿಗೆ ಬೆಂಬಲ ನೀಡುವುದೇ ಈ ಕಾರ್ಯ ಕ್ರಮದ ಮೂಲ ಉದ್ದೇಶ ಎಂದು ಸಚಿವರು ತಿಳಿಸಿದರು.

   ಸ್ಮಾರ್ಟ್ ಬಯೋಟೆಕ್ನಾಲಜಿ ಅದರಲ್ಲೂ ವಿಶೇಷವಾಗಿ ಕೈಗೆಟಕುವ ದರದ ಔಷಧ ಅಭಿವೃ ದ್ಧಿ,ಸಿಂಥಟೆಕ್ ಬಯಾಲಿಜಿ, ಬಯೋ ಎಂಜಿನಿಯರಿಂಗ್ ಮುಂತಾದ ಉದಯೋನ್ಮುಖ ವಲಯದ ಕುರಿತು ಜೈವಿಕ ತಂತ್ರ ಜ್ಞಾನ ಉದ್ಯಮದ ದಿಗ್ಗಜರು,ಜೈವಿಕ-ತಾಂತ್ರಿಕ ತಜ್ಞರು, ವಿಜ್ಞಾನಿಗಳು ಚರ್ಚಿಸಲು “ಇಂಡಿಯಾ ಬಯೋ’’ ಉತ್ತಮ ವೇದಿಕೆ ಆಗಲಿದೆ ಎಂದು ಅವರು ವಿವರಿಸಿದರು.

   ಅಸಾಧಾರಣ ಬುದ್ಧಿವಂತಿಕೆ ಹೊಂದಿರುವ ಶಾಲಾ ಮಕ್ಕಳು ಹಾಗೂ ಅವರಿಗೆ ಸೂಕ್ತ ಮಾರ್ಗ ದರ್ಶನ ಒದಗಿಸಬಲ್ಲ ಮಾರ್ಗದರ್ಶಕರು ಅಥವಾ ಸಂಸ್ಥೆಗಳನ್ನು ಒಂದುಗೂಡಿಸುವ ಕಾರ್ಯತಂತ್ರವನ್ನು ಗುರುತಿಸುವ ಪ್ರಕ್ರಿಯೆ ನಡೆದಿದೆ.ತಂತ್ರಜ್ಞಾನ ವಲಯದಲ್ಲಿ ಕನ್ನಡಿ ಗರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುವುದೇ ಈ ಯೋಜನೆಯ ಮೂಲ ಉದ್ದೇಶ ಎಂದು ಐಟಿ ಬಿಟಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಎಂದರು.

   ಅನ್ವೇಷಣೆ,ತಂತ್ರಜ್ಞಾನ,ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ನಮ್ಮ ರಾಜ್ಯ ಅಗ್ರಸ್ಥಾನ ಪಡೆದಿದೆ.ಬೆಂಗಳೂರು ವಿಶ್ವದ 4ನೇ ಅತಿ ದೊಡ್ಡ ತಾಂತ್ರಿಕ ಕ್ಲಸ್ಟರ್.ಜಾಗತಿಕ ಮಟ್ಟದ ತಾಂತ್ರಿಕ ಕೇಂದ್ರ ಎಂಬ ಹೆಗ್ಗೆಳಿಕೆ ಯೂ ನಗರಕ್ಕೆ ಇದೆ.ನ್ಯೂಯಾರ್ಕ್, ಟೊಕಿಯೋ,ಲಂಡ ನ್,ಬೀಜಿಂಗ್,ಟೆಲ್ ಅವಿವ್ ಮುಂತಾದ ನಗರಗಳ ಸಾಲಿನಲ್ಲಿ ಬೆಂಗಳೂರಿಗೂ ಸ್ಥಾನ ಇದೆ ಎಂಬುದು ಹೆಮ್ಮೆಯ ಸಂಗತಿ.ನುರಿತ ಕಾರ್ಯಪಡೆ ಹಾಗೂ ಸುಧಾರಿತ ತಂತ್ರಜ್ಞಾನ ಪರಿಣಿತಿ,ನಾವೀನ್ಯತೆ ಮತ್ತು ಉದ್ಯಮಕ್ಕೆ ಪೂರಕ ವಾತಾವರಣದ ವಿಶಿಷ್ಟ ಸಂಯೋಜನೆ ಬೆಂಗಳೂರು ಎಂದರೆ ತಪ್ಪಾಗದು ಎಂದು ತಿಳಿಸಿದರು.

    ಕೌಶಲ್ಯ ವರ್ಧನೆ,ನವೋದ್ಯಮಕ್ಕೆ ಪೂರಕ ಬೆಂಬಲ,ಜಾಗತಿಕ ಒಪ್ಪಂದ,ಎರಡನೇ ಹಂತದ ನಗರಗಳ ಅಭಿವೃದ್ಧಿಗೆ ಆದ್ಯತೆ,ಆವಿಷ್ಕಾರಗಳಿಗೆ ಪೂರಕ ನಿಯಮಾವಳಿಗಳ ರೂಪಿಸುವುದು ಸೇರಿದಂತೆ ಅನ್ವೇಷಣಾ ಕ್ಷೇತ್ರದಲ್ಲಿ ಕರ್ನಾಟಕ ರಾಷ್ಟ್ರದಲ್ಲಿ ಅಗ್ರ ಸ್ಥಾನ ಕಾಯ್ದುಕೊಳ್ಳುವ ಜತೆಗೆ ಜಾಗತಿಕ ಆರ್ಥಿಕತೆಯಲ್ಲಿ ತನ್ನ ಸ್ಥಾನ ಉತ್ತಮಪಡಿಸಿಕೊಳ್ಳಲು ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.

   ಹೊಸ ತಲೆಮಾರಿನ ಅನ್ವೇಷಣಾ ಜಾಲದ ಮೂಲಕ 2 ಮತ್ತು 3 ಹಂತದ ನಗರಗಳಲ್ಲಿರುವ ವಿಶ್ವವಿದ್ಯಾಲಯಗಳನ್ನು ತೊಡಗಿಸಿಕೊಳ್ಳಲು ಸರ್ಕಾರ ಒತ್ತು ನೀಡುವುದು.30 ಎಂಜಿನಿಯ ರಿಂಗ್ ಸಂಸ್ಥೆಗಳು,293 ಯೋಜನೆ ಗಳಿಗೆ ಹಣ ಹಾಗೂ 100ಕ್ಕೂ ಹೆಚ್ಚು ಮೂಲ ಮಾದರಿ ಗಳನ್ನು ಗುರುತಿಸಲಾಗಿದೆ.ಇಂಥ ವಿಶ್ವವಿದ್ಯಾಲಯಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳಿಂದ ಮತ್ತುಷ್ಟು ಅನ್ವೇಷಣೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಗಳನ್ನು ನೋಡ ಬಯಸುತ್ತೇ ವೆ ಎಂದರು

   ಮುಂದಿನ ಹಂತದ ಅನ್ವೇಷಣೆ ಹಾಗೂ ಉದ್ಯೋಗಾವ ಕಾಶಗಳ ಸೃಷ್ಟಿಯಲ್ಲಿ ಸ್ಟಾರ್ಟ್‍ಅಪ್ ಗಳ ಪಾತ್ರ ದೊಡ್ಡದು.ಹಣಕಾಸು ನೆರವು ಹಾಗೂ ಪೂರಕ ಬೆಂಬಲ ಕಲ್ಪಿಸುವ ಮೂಲಕ ರಾಜ್ಯ ಸರ್ಕಾರ ಅನ್ವೇಷಣೆ ಹಾಗೂ ಸ್ಟಾರ್ಟ್‍ಅಪ್‍ಗಳಿಗೆ ನಿರಂತರ ಉತ್ತೇಜನ ನೀಡಿದೆ. ಸ್ಟಾರ್ಟ್‍ಅಪ್‍ಗಳ ಬೆಳವಣಿಗೆಗೆ ನಮ್ಮ ಸರ್ಕಾರ ಅಗತ್ಯ ಸ್ಥಳಾವಕಾಶ ಕಲ್ಪಿಸಿದೆ.ಜತೆಗೆ ಉನ್ನತೀಕರಣ ಹಾಗೂ ನವೋದ್ಯಮ ಬಂಡವಾಳ ನಿಧಿಗೆ ಸರ್ಕಾರ ಅನುದಾನ ನೀಡುತ್ತಿದೆ ಎಂದು ಅವರು ವಿವರಿಸಿದರು.

    ಜಾಗತಿಕ ಸಹಯೋಗದಲ್ಲಿ ನಡೆಸುವ ಅನ್ವೇಷಣೆ ಪ್ರಮುಖವಾದುದರಿಂದ ಜಾಗತಿಕ ಜಾಲದ ವಿಸ್ತರಣೆಗೆ ನಾವು ಹೆಚ್ಚಿನ ಗಮನ ಹರಿಸಿದ್ದೇವೆ.ಅಮೆರಿಕ,ಜರ್ಮನಿ,ಫ್ರಾನ್ಸ್,ಜಪಾನ್,ಇಸ್ರೇಲ್ ,ಬ್ರಿಟನ್,ಫಿನ್‍ಲ್ಯಾಂಡ್, ನೆದರ್ಲ್ಯಾಂಡ್,ಆಸ್ಟ್ರೇಲಿಯಾ ಮುಂತಾದ ವಿಶ್ವದ ಪ್ರಮುಖ ಅನ್ವೇಷಣಾ ಕೇಂದ್ರಗಳೊಂದಿಗೆ ಜಾಗತಿಕ ಅನ್ವೇಷಣಾ ಮೈತ್ರಿಗೆ ರಾಜ್ಯ ಸರ್ಕಾರ ಮುಂದಾಗಿ ದೆ.ನಾಗರಿಕರ ಅನುಕೂಲಕ್ಕಾಗಿ ನವೀನ ಸೇವೆಗಳು ಮತ್ತು ಉತ್ಪನ್ನಗಳ ಅಭಿವೃದ್ಧಿಗಾಗಿ ಉದ್ಯಮ,ನವೋದ್ಯಮ ಹಾಗೂ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಗಳ ನಡುವೆ ಪ್ರಬಲ ಸಹಭಾಗಿತ್ವ ಏರ್ಪಡಲಿದೆ ಎಂದು ಅವರು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap