ಚಿತ್ರದುರ್ಗ:
ಟೇಕ್ವಾಂಡೋ ಕಲೆಯನ್ನು ಪ್ರತಿಯೊಬ್ಬರು ಕರಗತ ಮಾಡಿಕೊಂಡರೆ ಅಪಾಯದ ಸಂದರ್ಭ ಎದುರಾದಾಗ ಆತ್ಮರಕ್ಷಣೆ ಮಾಡಿಕೊಂಡು ಸ್ವಯಂ ತನ್ನನ್ನು ತಾನು ರಕ್ಷಿಸಿಕೊಳ್ಳಬಹುದು ಎಂದು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಪಿ.ವೈ.ದೇವರಾಜ್ಪ್ರಸಾದ್ ತಿಳಿಸಿದರು.
ನಗರದ ಸರಸ್ವತಿ ಟೇಕ್ವಾಂಡೋ ಅಕಾಡೆಮಿ ವತಿಯಿಂದ ಸರಸ್ವತಿ ಕಾನೂನು ಕಾಲೇಜು ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಲರ್ ಬೆಲ್ಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಮಾತನಾಡಿದರು.
ಸುಮಾರು ವರ್ಷಗಳಿಂದಲೂ ಸಿ.ಆರ್.ಕನಕದಾಸ್ರವರು ಆತ್ಮರಕ್ಷಣೆ ಕಲೆ ಟೇಕ್ವಾಂಡೋ ಬಗ್ಗೆ ಶಿಸ್ತುಬದ್ದ ಹಾಗೂ ಅಚ್ಚುಕಟ್ಟಾಗಿ ಉಚಿತ ತರಬೇತಿ ನೀಡುತ್ತಿದ್ದಾರೆ. ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಿ. ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಂತಾಗಿರಬಹುದಲ್ಲದೆ ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬಹುದು ಎಂದು ಹೇಳಿದರು.
ಅಂತರಾಷ್ಟ್ರೀಯ ತೀರ್ಪುಗಾರರು ಹಾಗೂ ತರಬೇತುದಾರರಾದ ಮಾಸ್ಟರ್ ಸಿ.ಆರ್.ಕನಕದಾಸ್ ಮಾತನಾಡುತ್ತ ನಾಲ್ಕು ವರ್ಷ ಮೇಲ್ಪಟ್ಟ ಬಾಲಕ-ಬಾಲಕಿಯರು ಟೇಕ್ವಾಂಡೋ ತರಬೇತಿಯನ್ನು ಪಡೆಯಬಹುದಾಗಿದೆ ಎಂದರು.ಹದಿನೆಂಟು ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು. ವಿನಯ್ ಮತ್ತು ಶಫಿ ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ