ಬೆಳಗಾವಿ
ರಾಜ್ಯಕ್ಕೆ ಕೇಂದ್ರದ ನೆರವಿನ ಅಗತ್ಯವಿಲ್ಲ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, “ತೇಜಸ್ವಿಸೂರ್ಯ ಇಮೆಚ್ಯೂರ್ಡ್ ಪಾಲಿಟಿಷಿಯನ್, ಅವನು ಎಲ್ಲಾದ್ರೂ ಸಿಕ್ರೆ ಸಂವಿಧಾನ ಓದ್ಕೊಳ್ಳೋಕೆ ಹೇಳಿ” ಎಂದು ವ್ಯಂಗ್ಯ ಮಾಡಿದ್ದಾರೆ.
ಬೆಳಗಾವಿಯಲ್ಲಿ ಕಾಂಗ್ರೆಸ್ ವತಿಯಿಂದ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಇಂದು ಬೃಹತ್ ಪ್ರತಿಭಟನೆ ನಡೆಯುತ್ತಿದ್ದು, ಬೆಳಗಾವಿಯ ರಾಯಣ್ಣ ಸರ್ಕಲ್ ಬಳಿ ಇರುವ ಕಾಂಗ್ರೆಸ್ ಕಚೇರಿಯತ್ತ ಕೈ ಕಾರ್ಯಕರ್ತರ ದಂಡು ಸೇರಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, “”ಯಡಿಯೂರಪ್ಪ ರಾಜ್ಯ ಕಂಡ ಅತ್ಯಂತ ದುರ್ಬಲ ಸಿಎಂ. ಮೋದಿ, ಶಾ ಮುಂದೆ ನಿಂತು ಮಾತಾಡೋ ಧೈರ್ಯ ಇಲ್ಲ. ಯಡಿಯೂರಪ್ಪ ನೋಡಿದ್ರೆ ಅಯ್ಯೋ ಪಾಪ ಅನ್ನಿಸ್ತಿದೆ. ಯಡಿಯೂರಪ್ಪ ದೆಹಲಿಗೆ ಹೋದರೆ ಮೋದಿ ಭೇಟಿಯಾಗಲ್ಲ, ಶಾ ಭೇಟಿಯಾಗಲ್ಲ. ಮೋದಿಗೆ ಕರ್ನಾಟಕದ ಬಗ್ಗೆ ಯಾಕೆ ಇಂಥ ನಿರ್ಲಕ್ಷ್ಯ” ಎಂದು ಪ್ರಶ್ನಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
