ಹರಪನಹಳ್ಳಿ
ಮತ್ತೊಮ್ಮೆ ಮೋದಿ’ಗಾಗಿ ಎಂಬ ಧ್ಯೇಯದೊಂದಿಗೆ ಹಾಗೂ ಪ್ರಧಾನ ಮಂತ್ರಿ ಮೋದಿ ಅವರ ಸಾಧನೆಗಳನ್ನು ಸಮಾಜದ ಎಲ್ಲ ವರ್ಗದವರಿಗೆ ತಲುಪಿಸುವ ನಿಟ್ಟಿನಲ್ಲಿ `ಟೀಮ್ ಮೋದಿ’ ಹರಪನಹಳ್ಳಿ ಘಟಕ ಭಾನುವಾರ ಪಟ್ಟಣದಲ್ಲಿ ಉದ್ಘಾಟನೆಗೊಂಡಿತು.
ಪಟ್ಟಣದ ಹರಿಹರ ರಸ್ತೆಯಿಂದ ಬೈಕ್ ರ್ಯಾಲಿ ನಡೆಸುವ ಮೂಲಕ ಟೀಮ್ ಮೋದಿ ಘಟಕಕ್ಕೆ ಚಾಲನೆ ನೀಡಲಾಯಿತು. ಪ್ರಧಾನಿ ಮೋದಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಸಾರುವ ಫಲಕಗಳನ್ನು ಹಿಡಿದು ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಹಿರೇಕೆರೆ ವೃತ್ತ, ಇಜಾರಿ ಶಿರಸಪ್ಪ, ಹಳೇ ಬಸ್ ನಿಲ್ದಾಣ, ಪ್ರವಾಸಿ ಮಂದಿರ ವೃತ್ತದ ಮೂಲಕ ಪಟ್ಟಣದ ವಿವಿಧೆಡೆ ಸಂಚರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಾಘವೇಂದ್ರ ಶೆಟ್ಟಿ, ಮಹೇಶ ಪೂಜಾರ, ಸಂತೋಷ, ಎಚ್.ಎಂ.ಶರಥ್, ರಾಹುಲ್ ಕೃಷ್ಣ, ವಿಜಯ, ಗಂಗಾಧರ, ಮಧು, ಬಸವರಾಜ, ಅಶೋಕ, ಕುಲದೀಪ್, ನರಸಿಂಹ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ