ಫಲಿಸದ ಮುಜರಾಯಿ ಇಲಾಖೆ ಪ್ರಯತ್ನ ..!

ತಿಪಟೂರು
    ನಗರದ ಮತ್ತು ಸುತ್ತಮುತ್ತಲಿನ ಗ್ರಾಮಗಳ ಆರಾಧ್ಯದೈವವಾದ ಶ್ರೀ ಕಲ್ಲೇಶ್ವರ ಸ್ವಾಮಿಯ ದೇವಾಲಯದ ಜೀರ್ಣೋದ್ಧಾರ ಕಾರ್ಯವು ಮುಗಿದು ಉದ್ಘಾಟನೆಯಾಗುವ ವೇಳೆಯಲ್ಲಿ ರಾತ್ರೋರಾತ್ರಿ ಆಹ್ವಾನಪತ್ರಿಕೆಯನ್ನು ಮುದ್ರಿಸಿ ಗುರುವಾರ ಬೆಳಗ್ಗೆ ದೇವಸ್ಥಾನದ ಉದ್ಘಾಟನೆಯನ್ನು ನಡೆಸಿದ ಘಟನೆಗೆ ತಿಪಟೂರು ಸಾಕ್ಷಿಯಾಗಿದೆ.
    ನಗರದಲ್ಲಿರುವ ಶ್ರೀ ಕಲ್ಲೇಶ್ವರಸ್ವಾಮಿ ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದ ಪುರಾತನ ದೇವಾಲಯವನ್ನು ಜೀರ್ಣೋದ್ದಾರ ಮಾಡುವ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದ್ದುದನ್ನು ನೋಡಿದ ಭಕ್ತರು ಕೊನೆಗೆ ಹೇಗಾದರು ಮುಗಿದರೆ ಸಾಕೆಂಬ ಮಟ್ಟಿಗೆ ರೋಸಿ ಹೋಗಿದ್ದರು.
 
    ಅಂತು ಇಂತು ಮುಗಿದ ಕಾರ್ಯವನ್ನು ಕಂಡು ಕಳೆದ ಒಂದುವಾರದಿಂದ ಉದ್ಘಾಟನೆಗೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿತ್ತು. ಇದನ್ನು ತಿಳಿದ ತಾಲ್ಲೂಕು ಆಡಳಿತವು ಯಾವುದೇ ಮುನ್ಸೂಚನೆಯಿಲ್ಲದೆ ಗ್ರಾಮಸ್ಥರು ಉದ್ಘಾಟನೆ ಮಾಡಿದರೆ ಎಲ್ಲಾದರು ತಪ್ಪಿಗೆ ಸಿಕ್ಕಿಕೊಳ್ಳುತ್ತೇವೋ ಎಂಬ ಭಯದಿಂದ ಬುಧವಾರ ಸಂಜೆ ಶಿಷ್ಟಾಚಾರದ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವರನ್ನೊಳಗೊಂಡಂತೆ ಸ್ಥಳೀಯ ಜನಪ್ರತಿನಿಧಿಗಳನ್ನು ಸೇರಿಸಿ ಪತ್ರಿಕೆಯನ್ನು ಮುದ್ರಿಸಿ ಗುರುವಾರ ಬೆಳಗ್ಗೆ ತರಾತುರಿಯಲ್ಲಿ ಉಪವಿಭಾಗಾಧಿಕಾರಿ ಮತ್ತು ತಹಸೀಲ್ದಾರರು ದೇವಾಲಯವನ್ನು ಉದ್ಘಾಟಿಸಿದರು.
    ಪತ್ರಿಕೆಯಲ್ಲಿದ್ದ ಜನಪತ್ರಿನಿಧಿಗಳಲ್ಲಿ ಒಬ್ಬರೂ ಇಲ್ಲದೇ ದೇವಾಲಯದ ಉದ್ಘಾಟನೆ : ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕೊಳ್ಳಬೇಕಾಗಿದ್ದ ಶಾಸಕ ನಾಗೇಶ್, ಮುಖ್ಯ ಅತಿಥಿಗಳಾಗಿದ್ದ ಜಿ.ಪಂ ಅಧ್ಯಕ್ಷರು, ಲೋಕಸಭಾ ಸದಸ್ಯರು, ತಾ.ಪಂ ಅಧ್ಯಕ್ಷರ ಉಪಾಧ್ಯಕ್ಷ, ಮಾಜಿಶಾಸಕ, ಎ.ಪಿ.ಎಂ.ಸಿ ಅಧ್ಯಕ್ಷ ಉಪಾಧ್ಯಕ್ಷರಾಗಲಿ ಕಾರ್ಯಕ್ರಮಕ್ಕೆ ಬರದೆ ಇರುವುದೇ ಒಮ್ಮತದಿಂದ ಮಾಡಿದ ಕಾರ್ಯಕ್ರಮವಲ್ಲದೇ ತರಾತುರಿಯಲ್ಲಿ ಮಾಡಿದ ಕಾರ್ಯಕ್ರಮವೆಂಬುದಕ್ಕೆ ಸಾಕ್ಷಿಯಾಗಿತ್ತು.
    ಶಾಸಕರು ಏಕೆ ಕಾರ್ಯಕ್ರಮಕ್ಕೆ ಬಂದಿಲ್ಲವೆಂದು ಪ್ರಶ್ನೆಗೆ ಉತ್ತರಿಸಿದ ತಹಸೀಲ್ದಾರ್ ಆರತಿ ಶಾಸಕರು ಬೇರೆ ಕಾರ್ಯಕ್ರಮದ ನಿಮಿತ್ತ ನಗರದಿಂದ ಹೊರಗಿದ್ದು ಕಾರ್ಯಕ್ರಮಕ್ಕೆ ಆಗಮಿಸಿಲ್ಲವೆಂದರು.ಉಪವಿಭಾಗಾಧಿಕಾರಿ ನಂದಿನಿಯವರನ್ನು ಗುರುವಾರ ಮಧ್ಯಾಹ್ನ ನಾಳೆ ಇರುವ ದೇವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ನೀವು ಬರುತ್ತೀರ ಎಂದು ಪ್ರಶ್ನಿಸಿದ್ದಕ್ಕೆ ಹೌದು ಸಮಯ ಸಿಕ್ಕರೆ ಬರುವೆನೆಂದು ಉತ್ತರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap