ಬೆಂಗಳೂರು:
ಟಿಇಟಿ ಮತ್ತು ಕೆಸೆಟ್ ಎರಡೂ ಪರೀಕ್ಷೆಗಳು ಏಪ್ರಿಲ್ 14 ರಂದೇ ಬಂದಿರುವುದರಿಂದ, ಸಹಸ್ರಾರು ಅಭ್ಯರ್ಥಿಗಳ ಮನವಿಯ ಮೇರೆಗೆ ಟಿಇಟಿ ಪರೀಕ್ಷೆಗಳನ್ನು ಏಪ್ರಿಲ್ 11ರಂದು(ಎರಡನೇ ಶನಿವಾರ) ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಜ.24ರಂದು ನೋಟಿಫಿಕೇಶನ್ ಪ್ರಕಟಿಸಿತ್ತು. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆ.25 ಕೊನೆಯ ದಿನವಾಗಿತ್ತು. ಮಾರ್ಚ್ 15ರಂದು ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ನಂತರ ಕಾರಣಾಂತರಗಳಿಂದ ಪರೀಕ್ಷೆಯನ್ನು ಏಪ್ರಿಲ್ 14ಕ್ಕೆ ಮುಂದೂಡಿತು. ಆದರೆ ಅದೇ ದಿನ ಕೆಸೆಟ್ ಮತ್ತು ಟಿಇಟಿ ಎರಡೂ ಪರೀಕ್ಷೆಗಳು ಬಂದಿರುವ ಕಾರಣ ಮತ್ತೆ ಏಪ್ರಿಲ್ 11ರಂದು ಎರಡನೇ ಶನಿವಾರದಂದೇ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.
