ಕೊರಟಗೆರೆ
ಈ ದೇಶಕ್ಕೆ ಅತ್ತುತ್ತಮ ಸಂವಿಧಾನ ನೀಡಿದ ಬಿ.ಆರ್.ಅಂಬೇಡ್ಕರ್‍ರವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಿದರೆ ಅದೇ ಅವರಿಗೆ ನೀಡುವ ಉಡುಗೊರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಅಧ್ಯಕ್ಷ ಎಚ್.ಸಿ. ದೊಡ್ಡಯ್ಯ ತಿಳಿಸಿದರು.
ಅವರು ಪಟ್ಟಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ್ದ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಧಾರಾವಾಹಿಯ ಪೋಸ್ಟರ್ ಬಿಡುಗಡೆ ಗೊಳಿಸಿ ಮಾತನಾಡಿದರು. ಅಂಬೇಡ್ಕರ್‍ರವರ ಕುರಿತಾದ ಜೀವನ ಚರಿತ್ರೆಯನ್ನು ಧಾರಾವಾಹಿ ರೂಪದಲ್ಲಿ ಝೀ ಕನ್ನಡ ವಾಹಿನಿ ಪ್ರಸಾರ ಮಾಡುತ್ತಿದೆ. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಈ ಧಾರಾವಾಹಿಯನ್ನು ತೋರಿಸಿ, ಅಂಬೇಡ್ಕರ್‍ರವರ ತತ್ವಾದರ್ಶಗಳನ್ನು, ಜೀವನ ಮೌಲ್ಯಗಳನ್ನು ಮಕ್ಕಳು ಜೀವನದಲ್ಲಿ ಅಳವಡಿಸಿಕೊಂಡು ಅವರಂತೆ ಸಾಧನೆ ಮಾಡುವಂತಾಗಬೇಕು ಎಂದು ಹೇಳಿದರು.
ದಲಿತ ಮುಖಂಡ ದಾಡಿ ವೆಂಕಟೇಶ್ ಮಾತನಾಡಿ, ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್‍ರವರು ದೇಶ-ವಿದೇಶಗಳು ಒಪ್ಪುವಂತ ಸಂವಿಧಾನ ನೀಡಿದ್ದಾರೆ. ಸಂವಿಧಾನ ಶಿಲ್ಪಿಯ ಜೀವನಾಧಾರಿತ ಮಹಾನಾಯಕ ಧಾರಾವಾಹಿಗೆ ನಾಡಿನೆಲ್ಲೆಡೆ ಅಭೂತಪೂರ್ವ ಜನಬೆಂಬಲ ಸಿಗುತ್ತಿದೆ. ಇಂತಹ ಮಹಾನ್ ನಾಯಕನ ಧಾರಾವಾಹಿಯನ್ನು ಝೀ ವಾಹಿನಿ ಪ್ರಸಾರ ಮಾಡುತ್ತಿರುವುದಕ್ಕೆ ಧನ್ಯವಾದ ಎಂದರು.
ದಲಿತ ಮುಖಂಡ ಚಿಕ್ಕಪ್ಪಯ್ಯ ಮಾತನಾಡಿ, ಇಡೀ ಪ್ರಪಂಚದ 26 ದೇಶಗಳ ಸಂವಿಧಾನವನ್ನು ಮನನ ಮಾಡಿ, ಸುಮಾರು ವರ್ಷಗಳು ಇದರ ಬಗ್ಗೆ ಅಧ್ಯಯನ ಮಾಡಿ ರಚಿಸಿದ್ದಾರೆ. ಈ ದೇಶದಲ್ಲಿ ಸುಮಾರು 25 ಎಕರೆ ಭೂಮಿ ಉಳ್ಳವರು ಮಾತ್ರ ಮತದಾನ ಮಾಡುವ ಹಕ್ಕು ಹೊಂದಿದ್ದರು. ಆದರೆ ಡಾ.ಬಿ.ಆರ್.ಅಂಬೇಡ್ಕರ್ ಈ ದೇಶದ ಪ್ರತಿಯೊಬ್ಬರು ಮತದಾನ ಮಾಡುವ ಹಕ್ಕು ನೀಡಿದ ಮಹಾನ್ ನಾಯಕ ಎಂದರು.
ಇದೇ ಸಂದರ್ಭದಲ್ಲಿ ಡಿಎಸ್‍ಎಸ್ ಜಿಲ್ಲಾಧ್ಯಕ್ಷ ರಾಮಾಂಜಿನಯ್ಯ, ದಲಿತ ಮುಖಂಡರಾದ ಶಿವರಾಮ್, ದೊಡ್ಡಯ್ಯ, ಜಟ್ಟಿಅಗ್ರಹಾರ ನಾಗರಾಜು, ಅನಿಲ್, ಮಂಜುನಾಥ್, ನಾಗರಾಜು, ಗಂಗಣ್ಣ, ಗೋವಿಂದರಾಜು, ಗಂಗರಾಜು, ತಿಮ್ಮಣ್ಣ, ಅಶ್ವತ್ಥಯ್ಯ, ನಾಗೇಶ್, ವೀರಕ್ಯಾತಯ್ಯ, ಚಿಕ್ಕಹನುಮಯ್ಯ, ಕೆಂಪರಾಜು, ಪುಟ್ಟರಾಜು, ಭೀಮರಾಜು, ನಾಗೇಶ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
