ರಟ್ಟೀಹಳ್ಳಿ
ತಾಲ್ಲೂಕಿನ ತಿಪ್ಪಾಯಿಕೊಪ್ಪ ಗ್ರಾಮದ ಬಳಿ ಇರುವ ಕುಮದ್ವತಿ ನದಿ ಸೇತುವೆಯ ತಡೆ ಗೋಡೆಯು ಹಿಂದೆ ಸುರಿದ ಮಳೆಯಿಂದಾಗಿ ಪ್ರವಾಹದಲ್ಲಿ ಕೊಚ್ಚಿ ಕೊಂಡು ಬಿದ್ದಿದೆ.ಹೀಗಾಗಿ ಅಪಾಯ ಯಾವುದೇ ಕ್ಷಣದಲ್ಲಾದರು ಎದುರಾಗಬಹುದಾಗಿದೆ.ಈ ಮಾರ್ಗವು ರಾಣೆಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿಯಾಗಿದ್ದು ದಿನ ನಿತ್ಯ ಹಲವಾರು ವಾಹನಗಳು ಸಂಚರಿಸುತ್ತವೆ .
ರಸ್ತೆಯಲ್ಲಿ ತಗ್ಗು ಗುಂಡಿಗಳಿದ್ದು ಸಂಚಾರ ಕಷ್ಟವಾಗಿದೆ ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.ಅಲ್ಲದೆ ರಸ್ತೆ ಕಿರಿದಾಗಿರುವುದರಿಂದ ರಸ್ತೆ ಬಿಟ್ಟು ಕೆಳಗಿಳಿದ ವಾಹನ ಮತ್ತೆ ರಸ್ತೆಗೆ ಬರಬೇಕಾದರೆ ಸವಾರ ಹರಸಾಹಸ ಪಡಬೇಕಾಗಿದೆ.ಆದಷ್ಟು ಬೇಗ ಸಂಬಂಧಪಟ್ಟ ಇಲಾಖೆ ರಸ್ತೆ ಸರಿಪಡಿಸಿ ಸೇತುವೆಗೆ ತಡೆ ಗೋಡೆಯನ್ನು ನಿರ್ಮಾಣ ಮಾಡಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಯುವ ಮುಖಂಡ ಶಿವಾನಂದ ಪೂಜಾರ ಹಾಗೂ ಸ್ಥಳಿಯರು ಕೋರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








