ತಿಪಟೂರು :
ನಗರದಲ್ಲಿ ರಸ್ತೆಯಲ್ಲಿ ಇರುವ ಗುಂಡಿಗಳಲ್ಲೇ ಹೇಗೋ ತಮ್ಮ ಬಂಡಿಗಳನ್ನು ಸಾಗಿಸಿ ಜೀವನ ಸಾಗಿಸುತ್ತಿರುವ ನಗರದ ಮತ್ತು ಅಕ್ಕಪಕ್ಕದ ನಾಗರೀಕರಿಗೆ ಇಂದು ದುತ್ತನೆ ಸಮಸ್ಯೆಯೊಂದು ಉದ್ಬವಿಸಿತ್ತು.ತಿಪಟೂರಿನಿಂದ ತುರುವೇಕೆರೆ, ಮೈಸೂರು ರಸ್ತೆಯುಲ್ಲಿ ಇಂದು ಸೇತುವೆ ವಿಸ್ತರಿಸಲು ತೆಗೆದ ಗುಂಡಿಯಿಂದ ರಸ್ತೆ ಸಂಪೂರ್ಣ ಬಂದ್ ಆಗಿದ್ದು ಬೆಳಗ್ಗೆ ಮಾರುಕಟ್ಟೆಗೆ ಬರುವ ರೈತರಿಗೆ ಮತ್ತು ಟ್ಯೂಷನ್‍ಗೆ ಹೋಗುವ ವಿದ್ಯಾರ್ಥಿಗಳಿಗೆ ದಿಕ್ಕೂತೋಚದೆ ಕಂಗಾಲಾಗಿದ್ದರು ಇವರ ಜೊತೆಗೆ ವಾಹನಗಳ ಚಾಲಕರು ತಮ್ಮ ವಾಹನಗಳನ್ನು ರಸ್ತೆಯ ಕೆಸರಿನಲ್ಲಿ ಸಿಕ್ಕೊಂಡು ಅಕ್ಕಪಕ್ಕದ ವಾಹನಗಳ ಚಾಲಕರು ಮತ್ತು ಸಾರ್ವಜನಿಕರ ಮನವನ್ನು ಕಲಕುವಂತಿತ್ತು.
ನಗರದ ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯಿಂದ ಹಿಡಿದು ತುರುವೇಕೆರೆ ಯಡಿಯೂರು ಮಾಯಸಂದ್ರ ಮೈಸೂರು ಕೆ.ಆರ್ ಪೇಟೆ ಮಂಡ್ಯ ಈ ಭಾಗಕ್ಕೆ ಸಂಚರಿಸುವ ನೂರಾರು ವಾಹನಗಳು ಸಾಲುಗಟ್ಟಿ ನಿಂತು ಬೆಳ್ಳಂಬೆಳಗ್ಗೆ ನಗರಕ್ಕೆ ಆಗಮಿಸುವ ದಿನಪತ್ರಿಕೆ ವಾಹನಗಳು ತರಕಾರಿ ಗಡಿಗಳು ಹಾಲಿನ ಗಾಡಿಗಳು ವಿದ್ಯಾರ್ಥಿಗಳು ಹಾಗೂ ಎಪಿಎಂಸಿ ಮಾರುಕಟ್ಟೆಗೆ ಬರುವ ವಾಹನಗಳು ಬೆಳ್ಳಂಬೆಳಗಿನ ಟ್ರಾಫಿಕ್ ನಲ್ಲಿ ಸಿಲುಕಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜೊತೆಗೆ ಈ ಭಾಗದಲ್ಲಿ ಸಂಚರಿಸುವ ರಸ್ತೆಗೆ ಯಾವುದೇ ಪರ್ಯಾಯ ರಸ್ತೆಯೂ ಇಲ್ಲದಿರುವುದು ಈ ಭಾಗದ ಜನಗಳ ಬಹುದಿನದ ಬೇಡಿಕೆಯನ್ನು ಯಾವ ಸರ್ಕಾರಗಳೂ ಕೂಡ ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.ಹಾಲ್ಕುರಿಕೆ ರಸ್ತೆ ಸಂಪರ್ಣ ಬಂದ್ : ಇನ್ನು ನಗರದಲ್ಲಿ ರಸ್ತೆ ಎಲ್ಲಿದೆ ಎಂದು ಹುಡುಕುವ ಸಾರ್ವಜನಿಕರಿಗೆ ಹಾಲ್ಕುರಿಕೆ ರಸ್ತೆಯಲ್ಲಿರು 24/7 ನೀರಿನ ಕಾಮಗಾರಿಗಾಗಿ ಜೆ.ಸಿ.ಬಿ ತಂದು ರಸ್ತೆಯನ್ನು ಅಗೆದು ಸಾರ್ವಜನಿಕರಿಗೆ ಇಲ್ಲಸಲ್ಲದ ತೊಂದರೆ ಕೊಡುತ್ತಿದ್ದು ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ, ತಾಲ್ಲೂಕು ಆಡಳಿತ ಹಾಗೂ ಲೋಕೋಪಯೋಗಿ ಇಲಾಖೆಯೂ ಕೂಡ ಇತ್ತ ಗಮನ ಹರಿಸದೆ ಜನರ ಜೀವನದಲ್ಲಿ ಚೆಲ್ಲಾಟ ಮಾಡುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ.
ಬೆಳ್ಳಂ ಬೆಳಿಗ್ಗೆ ಬರುವ ವಿದ್ಯಾರ್ಥಿಗಳು ಪಾಠ ಪ್ರವಚನಕ್ಕಾಗಿ ಪರಿತಪಿಸುವಂತಹ ಪರಿಸ್ಥಿತಿ ಮುಂದುವರಿದಿದ್ದು ನೂರಾರು ವಿದ್ಯಾರ್ಥಿಗಳು ಬೆಳಗ್ಗೆ ನಗರಕ್ಕೆ ಆಗಮಿಸಿದರೂ ತರಗತಿಗೆ ಹಾಜರಾಗದೆ ಗೈರಾಗಿರುವುದು ಕಂಡು ಬರುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
