ಅತಿ ದುಬಾರಿ ಹೋರಿ

ಹಾವೇರಿ :

         ನಾಲ್ಕೈದು ಲಕ್ಷ ಕೊಟ್ಟು ಕಾರ್ ಖರೀದಿಸಬಹುದು. ಎಂಟತ್ತು ಲಕ್ಷ ಕೊಟ್ಟು ಐಷಾರಾಮಿ ಕಾರ್ ಪರ್ಚೇಸ್ ಮಾಡಬಹುದು. ಆದರೆ ಇಲ್ಲೊಂದು ಹೋರಿ ಐಷಾರಾಮಿ ಕಾರಿನ ರೇಟನ್ನು ಮೀರಿಸುವಂತೆ ಭರ್ಜರಿ ಬೆಲೆಗೆ ಮಾರಾಟ ಆಗಿದೆ. ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಕಿಕ್ಕಿರಿದು ಸೇರಿದ್ದ ಜನರ ನಡುವೆ ಭರ್ಜರಿಯಾಗಿ ಓಟ ಕಿತ್ತುತ್ತಿದ್ದ ಹೋರಿ, ಈಗ ಅತ್ಯಧಿಕ ಬೆಲೆಗೆ ಮಾರಾಟ ಆಗಿದೆ. ಸಾಕಷ್ಟು ಬಂಗಾರ, ಬೈಕ್ ಗಳನ್ನು ಗೆದ್ದಿದ್ದ ಹೋರಿ ಈಗ ಲಕ್ಷ ಲಕ್ಷಕ್ಜೆ ಸೇಲ್ ಆಗಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

        ಜಿಲ್ಲೆಯ ಬ್ಯಾಡಗಿ ತಾಲೂಕಿನ ಖುರ್ದಕೋಡಿಹಳ್ಳಿ ಗ್ರಾಮದ ರೇವಣಸಿದ್ದಪ್ಪ ಮಾತನವರ ಮನೆಯಲ್ಲಿದ್ದ ಹೋರಿಯ ಕತೆಯಿದು. ಕಳೆದ ಎರಡು ವರ್ಷಗಳ ಹಿಂದೆ ರೈತ ರೇವಣಸಿದ್ದಪ್ಪ ತಮಿಳುನಾಡಿನಲ್ಲಿ ಅಮರಾವತಿ ತಳಿಯ ಹೋರಿಯನ್ನು ಎಂಬತ್ತು ಸಾವಿರ ರುಪಾಯಿ ರೂಪಾಯಿಗಳಿಗೆ ಖರೀದಿ ಮಾಡಿದ್ದರು. ನಂತರ ತಮ್ಮ ಮನೆಯಲ್ಲಿದ್ದ ಹೋರಿಗಳ ಜೊತೆಗೆ ಕೃಷಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಬಿಡುವಿನ ವೇಳೆಯಲ್ಲಿ ಹಾವೇರಿ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ನಡೆಯುವ ಕೊಬ್ಬರಿ ಹೋರಿ ಸ್ಪರ್ಧೆಗೆ ಒಯುತ್ತಿದ್ದರು. ನರಸಿಂಹ 144 ಹೆಸರಿನಿಂದ ತುಂಬಾ ಪೇಮಸ್ ಆಗಿರುವ ಈ ಹೋರಿ ಹೋದಲೆಲ್ಲಾ ಗೆಲುವಿನ ನಗೆ ಬೀರುತ್ತಿತ್ತು. ಹೀಗಾಗಿ ಹೋರಿಗೆ ಸಖತ್ ಡಿಮ್ಯಾಂಡ್ ಬಂದಿತ್ತು. ಈಗ ತಮಿಳುನಾಡಿನ ವೆಲ್ಲಂಪಾಡಿಯ ಸೆಲ್ವಂ ಎಂಬ ರೈತ ಹತ್ತು ಲಕ್ಷ ಒಂದು ಸಾವಿರದಾ ಒಂದು ನೂರಾ ನಾಲ್ವತ್ತು ನಾಲ್ಕು ರುಪಾಯಿ ಕೊಟ್ಟು ಹೋರಿ ಖರೀದಿಸಿ ತಮಿಳುನಾಡಿಗೆ ತೆಗೆದುಕೊಂಡು ಹೋಗಿದ್ದಾರೆ.

       ಜಿಲ್ಲೆ ಮತ್ತು ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆದ ಹೋರಿ ಬೆದರಿಸೋ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ನರಸಿಂಹ 144 ಹೆಸರಿನ ಹೋರಿ ಹೋದಲೆಲ್ಲ ಭರ್ಜರಿ ಬಹುಮಾನಗಳನ್ನ ಗಳಿಸಿತ್ತು. ಐದಾರು ಬೈಕ್ ಗಳು, ಬಂಗಾರದ ಉಂಗುರ ಸೇರಿದಂತೆ ಅನೇಕ ಬಹುಮಾನಗಳನ್ನು ಹೋರಿ ತನ್ನದಾಗಿಸಿಕೊಂಡಿತ್ತು. ಕೇವಲ ಏಳೆಂಟು ಸೆಕೆಂಡ್ ಗಳಲ್ಲಿ ಈ ಹೋರಿ ಯಾರ ಕೈಗೂ ಸಿಗದಂತೆ ಭರ್ಜರಿಯಾಗಿ ಓಟ ಕಿತ್ತುತ್ತಿತ್ತು. ಯಾರ ಕೈಗೂ ಸಿಗದಂತೆ ಓಡಿ ಗೆಲುವಿನ ಗುರಿ ದಾಟುತ್ತಿತ್ತು.

        ಈಗ ಈ ಹೋರಿ ಭರ್ಜರಿ ಬೆಲೆಗೆ ಮಾರಾಟವಾಗಿದೆ. ಐಷಾರಾಮಿ ಕಾರಿನ ಬೆಲೆಯನ್ನೂ ಮೀರಿಸುವಂತೆ ಹತ್ತು ಲಕ್ಷಕ್ಕೂ ಮಿಗಿಲಾಗಿ ಹೋರಿ ಮಾರಾಟವಾಗಿದೆ. ಒಂದೆಡೆ ದೊಡ್ಡ ಮೊತ್ತದ ಬೆಲೆಗೆ ಹೋರಿ ಮಾರಾಟ ಆಗಿವುದು ರೈತ ರೇವಣಸಿದ್ದಪ್ಪ ಕುಟುಂಬಸ್ಥರಲ್ಲಿ ಸಂತಸ ಮೂಡಿಸಿದರೆ, ಮತ್ತೊಂದೆಡೆ ಮನೆ ಮತ್ತು ಊರು ಹಾಗೂ ಜಿಲ್ಲೆಗೆ ಹೆಸರು ತಂದಿದ್ದ ಹೋರಿ ಮಾರಾಟ ಆಗಿರುವುದು ಕೊಂಚ ದುಃಖ ತಂದಿದೆ. ಸ್ಪರ್ಧೆಯಲ್ಲಿ ಸಖತ್ ಫೇಮಸ್ ಆಗಿದ್ದ ಹೋರಿಗೆ ದೊಡ್ಡ ಅಭಿಮಾನಿಗಳ ದಂಡೆ ಇತ್ತು. ಈಗ ಹೋರಿ ಮಾರಾಟ ಆಗಿರುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ ಎಂದು ಹೋರಿ ಅಭಿಮಾನಿ ಗಿರೀಶ ಕೊಪ್ಪದ ಹೋರಿ ಸಾಹಸದ ವಿಷಯವನ್ನು ಮಾಧ್ಯಮದ ಮುಂದೆ ಹೇಳಿದ್ದಾನೆ.

        ಕೇವಲ ಎಂಬತ್ತು ಸಾವಿರಕ್ಕೆ ತಂದಿದ್ದ ಹೋರಿ ಎರಡೇ ಎರಡು ವರ್ಷಗಳಲ್ಲಿ ಸಖತ್ ಫೇಮಸ್ ಆಗಿತ್ತು. ರೈತ ರೇವಣಸಿದ್ದಪ್ಪ ಮನೆಯಲ್ಲಿ ಕೃಷಿ ಕೆಲಸದ ಜೊತೆಗೆ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಸಖತ್ ಫೇಮಸ್ ಆಗಿತ್ತು. ಐಷಾರಾಮಿ ಕಾರಿನ ಬೆಲೆಗಿಂತಲೂ ಹೆಚ್ಚಿನ ಬೆಲೆಗೆ ಹೋರಿ ಮಾರಾಟ ಆಗಿರುವುದು ಒಂದು ವಿಶೇಷವೇ ಅನ್ನಬಹುದು.ಜಿಲ್ಲೆಯಲ್ಲಿ ಹೋರಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿಯೇ ಇದ್ದು, ಹೋರಿಗಳ ಮೇಯಿಸುವ ಕೆಲಸಕ್ಕೆ ಈ ಹೋರಿಯ ಮಾರಾಟದ ಘಟನೆ ಪ್ರೇರಣೆಯಾಗುವಂತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link