ಬೆಂಗಳೂರು
ರಾಜ್ಯದಲ್ಲಿ ಬೆಳಕಿಗೆ ಬಂದಿರುವ ಮಾಜಿ ಸಚಿವರು ಶಾಸಕರು ಹನಿಟ್ರ್ಯಾಪ್ ಜಾಲದಲ್ಲಿ ಮಾಜಿ ಸಚಿವರು,ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಸೇರಿ 20ಕ್ಕೂ ಅಧಿಕ ಮಂದಿ ಸಿಲುಕಿರುವುದು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೆÇಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಬಂಧಿತ ಆರೋಪಿ ರಾಘವೇಂದ್ರ ಮನೆಯಲ್ಲಿ ಸಿಕ್ಕಿರುವ ಪೆನ್‍ಡ್ರೈವ್,ಹಾರ್ಡ್‍ಡಿಸ್ಕ್‍ನಲ್ಲಿ ಪ್ರಮುಖ ರಾಜಕಾರಣಿಗಳು ಸೇರಿ ಹಲವು ಗಣ್ಯರ ಖಾಸಗಿ ವಿಡಿಯೋಗಳು ಪತ್ತೆಯಾಗಿವೆ ಅದನ್ನು ಇಟ್ಟುಕೊಂಡೇ ಬ್ಲ್ಯಾಕ್‍ಮೆಲ್ ಮಾಡಿ ಕೋಟ್ಯಂತರ ರೂ. ಸುಲಿಗೆ ಮಾಡುತ್ತಿದ್ದರು.
ಹಲವು ಸಿಮ್ ಕಾರ್ಡ್‍ಗಳನ್ನು ಬಳಸಿ ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ.ಹಾರ್ಡ್‍ಡಿಸ್ಕ್‍ಗಳಲ್ಲಿ ಹನಿಟ್ರ್ಯಾಪ್ ಗೆ ಬಿದ್ದವರ ಖಾಸಗಿ ದೃಶ್ಯಗಳು ಪತ್ತೆಯಾಗಿದ್ದು, ಅದನ್ನು ಆಧರಿಸಿ ಆರೋಪಿಗಳನ್ನು ವಿಚಾರಣೆಗೊಳಪಡಿಸಿ ದ್ದಾರೆ. ಹಲವು ಜನರ ತಂಡ ಕೃತ್ಯ ಎಸಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಕಳೆದ ಆಗಸ್ಟ್‍ನಿಂದಲೇ ನಡೆಯುತ್ತಿದ್ದ ಹನಿಟ್ರ್ಯಾಪ್‍ಗೆ ಮಾಜಿ ಸಚಿವರು ಹಾಗೂ ಶಾಸಕರ ರಾಜಕೀಯ ಎದುರಾಳಿಗಳು ಲಕ್ಷ ಗಟ್ಟಲೆ ಹಣ ನೀಡಿ ಸಹಕಾರ ನೀಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಆರೋಪಿಗಳಿಂದ ಜಪ್ತಿ ಮಾಡಿಕೊಂಡಿರುವ ಎಲೆಕ್ಟ್ರಾನಿಕ್ಸ್ ಸಾಧನಗಳಲ್ಲಿ ಹತ್ತಕ್ಕೂ ಅಧಿಕ ಮಂದಿ ಜನಪ್ರತಿನಿಧಿಗಳು ಸೇರಿ 20 ಮಂದಿ ಪ್ರಭಾವಿಗಳ ವಿಡಿಯೋಗಳು ಸಿಕ್ಕಿವೆ ಜತೆಗೆ ಆರೋಪಿತರೂ ಇನ್ನೂ ಹಲವು ಮಂದಿಯನ್ನು ಹನಿಟ್ರ್ಯಾಪ್ ಖೆಡ್ಡಾಗೆ ಬೀಳಿಸಿ ಹಣ ಸುಲಿಗೆ ಮಾಡಿರುವುದು ತನಿಖೆಯಲ್ಲಿ ಕಂಡು ಬಂದಿದೆ.
ಹನಿಟ್ರ್ಯಾಪ್ ನೆಪದಲ್ಲಿ ಶಾಸಕರು, ಅಧಿಕಾರಿಗಳನ್ನು ಬ್ಲ್ಯಾಕ್‍ಮೇಲ್ ಮಾಡಿದ ಮಹಿಳೆಯರು, ರಾತ್ರಿ 10 ಗಂಟೆ ಬಳಿಕ ಮೊಬೈಲ್‍ಗೆ ಕರೆ ಮಾಡಿ ನಡುರಾತ್ರಿವರೆಗೂ ಸಂಭಾಷಣೆ ನಡೆಸುತ್ತಿದ್ದು ಶಾಸಕರು ಪಾನಮತ್ತರಾಗಿರುವುದನ್ನು ಖಚಿತಪಡಿಸಿಕೊಂಡು ಮಹಿಳೆಯರು ಮಾತಿಗೆಳೆಯುತ್ತಿದ್ದರು. ಮಾತು ದೈಹಿಕ ಸಂಬಂಧಗಳತ್ತ ಹೊರಳುತ್ತಿತ್ತು. ಒಬ್ಬರು ಮೊಬೈಲ್‍ನಲ್ಲಿ ಮಾತನಾಡಿ ವ್ಯವಹಾರ ಕುದುರಿಸುತ್ತಿದ್ದರು.ಮತ್ತೊಬ್ಬರು ಹನಿಟ್ರ್ಯಾಪ್ ಕಾರ್ಯಾಚರಣೆಗೆ ಇಳಿಯುತ್ತಿದ್ದರು ಎಂದು ಗೊತ್ತಾಗಿದೆ.
ಮತ್ತೊಂದೆಡೆ ಹನಿಟ್ರ್ಯಾಪ್‍ಗೆ ಬಿದ್ದಿರುವ ಶಾಸಕರು, ಯುವತಿಯರನ್ನು ತಾವೇ ಖುದ್ದಾಗಿ ಬೇಡಿಕೆ ಇಟ್ಟು ಕರೆಸಿಕೊಳ್ಳುತ್ತಿದ್ದರು. ಈ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡಿದ್ದ ವಂಚಕ ಜಾಲ, ಅವರ ವಿಡಿಯೋ ಮಾಡಿ ಹಣ ಸುಲಿಗೆ ಮಾಡುವ ಯೋಜನೆಗೆ ಕೈ ಹಾಕಿತ್ತು ಎಂದು ಹೇಳಲಾಗುತ್ತಿದೆ. ಪ್ರಮುಖ ಆರೋಪಿ ರಘು ಬಳಿ ಏಳಕ್ಕೂ ಅಧಿಕ ಮೊಬೈಲ್‍ಗಳು, ಹದಿನೈದು ಸಿಮ್ ಕಾರ್ಡ್‍ಗಳನ್ನು ಜಪ್ತಿ ಮಾಡಿಕೊಂಡಿರುವ ಪೆÇಲೀಸರು ಅವುಗಳಿಂದಲೂ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ.
ರಾಜ್ಯಾದ್ಯಂತ ವಿಸ್ತರಿಸಿಕೊಂಡಿರುವ ಈ ಹನಿಟ್ರ್ಯಾಪ್ ಜಾಲದಲ್ಲಿ ಸಕ್ರಿಯಗೊಂಡಿರುವ ಹಲವು ತಂಡಗಳ ಪ್ರಮುಖ ಆರೋಪಿಗಳು ಬಂಧನವಾಗುತ್ತಿದ್ದಂತೆ ಕೆಲವರು ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ವಿಶೇಷ ತಂಡ ಕಾರ್ಯಾಚರಣೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದ ಕೆಲವು ಅಧಿಕಾರಿಗಳೂ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿದ್ದು, ಆರೋಪಿಗಳು ವಿಡಿಯೊ ರೆಕಾರ್ಡಿಂಗ್, ಮೊಬೈಲ್‍ಕರೆ ವಿವರ ಮತ್ತು ಸಂಭಾಷಣೆಗಳನ್ನು ನಾಶಪಡಿಸಿದ್ದಾರೆ.ಡಿಜಿಟಲ್ ಸಾಕ್ಷ್ಯಗಳನ್ನು ಮರಳಿ ಪಡೆಯಲು ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಇವು ಮರಳಿ ಸಿಕ್ಕರೆ ಇನ್ನಷ್ಟು ಮಂದಿ ಮುಜುಗರಕ್ಕೆ ಒಳಗಾಗುವ ಸಾಧ್ಯತೆಯಿದೆ.
ಇತ್ಯರ್ಥಕ್ಕೆ ಯತ್ನ
ಈ ಬೆಳವಣಿಗೆಗಳ ನಡುವೆಯೇ ಹನಿಟ್ರ್ಯಾಪ್‍ನೊಳಗೆ ಸಿಲುಕಿರುವ ಹಲವು ಜನಪ್ರತಿನಿಧಿಗಳು ಹಾಗೂ ಪ್ರಭಾವಿಗಳು ದಿಕ್ಕುತೋಚದೆ ಒದ್ದಾಡುತ್ತಿದ್ದಾರೆ. ದೂರು ದಾಖಲಿಸದೇ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ಪೆÇಲೀಸ್ ಇಲಾಖೆ ಮೊರೆಹೋಗುತ್ತಿದ್ದಾರೆ.ಹಿರಿಯ ಪೆÇಲೀಸ್ ಅಧಿಕಾರಿಗಳ ಬಳಿ ಮಾತುಕತೆ ನಡೆಸಿ ಗೌಪ್ಯವಾಗಿ ಪ್ರಕರಣ ಇತ್ಯರ್ಥಮಾಡಿಸುವಂತೆ ಕೇಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹನಿಟ್ರ್ಯಾಪ್‍ಗೆ ಒಳಗಾಗಿರುವ ಯಾರೇ ಇದ್ದರೂ ಮಾಹಿತಿ ಹಂಚಿಕೊಂಡು ತನಿಖೆಗೆ ಸಹಕರಿಸುವಂತೆ ಪೆÇಲೀಸ್ ಇಲಾಖೆ ಕೋರಿದೆ. ದೂರುದಾರರ ಮಾಹಿತಿಯನ್ನು ಗೌಪ್ಯವಾಗಿ ಇಟ್ಟು ತನಿಖೆ ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿದೆ? ಎಂದು ಮೂಲಗಳು ತಿಳಿಸಿವೆ.
ಮೂವರಿಗೆ ರಿಲೀಫ್
ಹನಿಟ್ರ್ಯಾಪ್ ಸುಳಿಯಿಂದ ಕಂಗಾಲಾಗಿರುವ ಹಲವು ಮಂದಿ ಶಾಸಕರು ಇದೀಗ ಕೋರ್ಟ್ ಮೊರೆಹೋಗುತ್ತಿದ್ದಾರೆ. ಸುದ್ದಿ ಹಾಗೂ ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ನೀಡುವಂತೆ ಕೋರಿ ಕೆಲ ಶಾಸಕರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಮೂವರಿಗೆ ನ್ಯಾಯಾಲಯದಲ್ಲಿ ರಿಲೀಫ್ ಸಿಕ್ಕಿದೆ ಎಂದು ಮೂಲಗಳು ಹೇಳಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
