ಡಿ.ಎಸ್.ಎಸ್ ನಿಂದ ಸರ್ಕಾರಕ್ಕೆ ಹಕ್ಕೋತ್ತಾಯ ಪತ್ರ

ತಿಪಟೂರು :

    ವಿವಿದ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕದಲಿತ ಸಂಘರ್ಷ ಸಮಿತಿ (ದಾದಾಸಾಹೆಬ್‍ಎನ್ ಮೂರ್ತಿ ಸ್ಥಾಪಿತ) ಪ್ರತಿಭಟನೆ ನೆಡೆಸಿ ಮಾನ್ಯ ಉಪವಿಬಾಗಾದಿಕಾರಿಗಳ ಮೂಲಕ ಸರ್ಕಾರಕ್ಕೆ ಹಕ್ಕೋತ್ತಾಯ ಪತ್ರ ಸಲ್ಲಿಸಲಾಯಿತು.ತಿಪಟೂರು ಉಪವಿಭಾಗಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ಪ್ರತಿಭಟನಾನಿರತರನ್ನ ಉದೇಶಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್‍ರಾಮಯ್ಯ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಠ ಜಾತಿಗಳು ಸಾಮಾಜಿಕ ನ್ಯಾಯಕ್ಕಾಗಿ ಒಳ ಮೀಸಲಾತಿ ಜಾರಿಗೊಳಿಸಬೇಕು.

    ಪರಿಶಿಷ್ಠ ಜಾತಿ ಸಮುದಾಯದ ಸಹಜಸ್ಥಿತಿ ಅರಿಯದ ನ್ಯಾಯ ಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನ ಯಥಾವತ್ತಾಗಿ ಅಂಗೀಕರಿಸಿ ಒಳಮಿಸಲಾತಿ ನೀಡಿ ತುಳಿತಕ್ಕೆ ಒಳಾಗಾದ ಜಾತಿ ಜನಾಂಗಗಳಿಗೆ ನ್ಯಾಯ ನೀಡಬೇಕುಎಂದು ಹಲವಾರು ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಾ ಬಂದಿದ್ದು ವರದಿ ಜಾರಿಯಾಗದಿರುವುದು ಸರ್ಕಾರಗಳ ದಿವ್ಯ ನಿರ್ಲಕ್ಷ ಪ್ರತೀಕವಾಗಿದೆ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಒಳಮೀಸಲಾತಿ ಬಗ್ಗೆ ಚಿಂತಿಸುವ ಕಾಂಗ್ರೇಸ್, ಬಿ.ಜೆ.ಪಿ. ಜೆಡಿಎಸ್ ಪಕ್ಷದ ನಾಯಕರುಗಳು ಚುನಾವಣೆ ನಂತರ ದಲಿತರನ್ನ ಮರೆಯುತ್ತಾರೆ.ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರ್ಕಾರ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸಬೇಕು.ನಮ್ಮ ಹೋರಾಟವನ್ನು ನಿರ್ಲಕ್ಷ ಮಾಡಿದರೆ ನಮ್ಮ ಜನಾಂಗ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಿದೆ ಮತ್ತು ಚುನಾವಣೆಯ ಕಣದ ಹೊರಗೂ ಸಹ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

    ದ.ಸಂ.ಸ ತಾಲ್ಲೋಕು ಉಪಾಧ್ಯಕ್ಷ ಗೌಡನಕಟ್ಟೆ ಅಶೋಕ್ ಮಾತನಾಡಿ ತಿಪಟೂರು ನಗರದ ಹೃದಯ ಭಾಗವಾದ ಪ್ರವಾಸಿ ಮಂದಿರ ವೃತ್ತಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಹೆಸರು ನಾಮಕರಣ ಮಾಡಿ ಪುತ್ತಳಿ ಸ್ಥಾಪಿಸ ಬೇಕು ಎಂದು ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತ ಬಂದಿದ್ದು ತಾಲ್ಲೂಕಿನ ಅಧಿಕಾರಿಗಳ ನಿರ್ಲಕ್ಷ ಹಾಗು ಜನನಾಯಕರ ದಲಿತ ವಿರೋದಿ ಮನಸ್ಥಿಯ ಪರಿಣಾಮವಾಗಿ ನೆನೆಗುದಿಗೆ ಬಿದ್ದಿದ್ದು ಕೂಡಲೇ ಸಂವಿಧಾನ ಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ್ ವೃತ್ತಎಂದು ನಾಮಕರಣ ಮಾಡಬೇಕು ಹಾಗು ಪುತ್ತಳಿ ಸ್ಥಾಪಿಸ ಬೇಕು ಎಂದು ಆಗ್ರಹಿಸಿದರು.

   ತಾಲ್ಲೂಕಿಗೆ ಡಾ|| ಬಿ.ಆರ್ ಅಂಬೇಡ್ಕರ್ ಭವನ ಹಾಗು ಬಾಬು ಜಗಜೀವನ್‍ರಾಂ ಭವನ ಮಂಜೂರಾಗಿ ದಶಕಗಳೆ ಕಳೆಯುತ್ತಿದೆ ತಾಲ್ಲೂಕು ಆಡಳಿತ ಹಾಗೂ ಶಾಸಕರು ಸೂಕ್ತ ನಿವೇಶನ ನೀಡಿಕಾಮಗಾರಿ ಪ್ರಾರಂಬಿಸದೆಅನಗತ್ಯ ಕಾಲಹರಣ ಮಾಡುತ್ತಿರುವುದು ತೀವ್ರ ಖಂಡನೀಯ  ಕೂಡಲೇ ನಿವೇಶನ ನೀಡಿ ಎರಡು ಭವನಗಳ ಕಾಮಗಾರಿ ಪ್ರಾರಂಬಿಸಬೇಕು ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link