ಮಿಡಿಗೇಶಿ :
ಕಳೆದ ನಾಲ್ಕಾರು ವರ್ಷಗಳಿಂದಲೂ ಸರಿಯಾದ ಸಮಯಕ್ಕೆ ಮಳೆ ಬಾರದೆ, ಬೆಳೆ ಬೆಳೆಯದೆ, ದನಕರುಗಳಿಗೆ ಕುಡಿಯುವ ನೀರು, ಮೇವು ಸಿಗದೆ ರೈತ ಬಾಂಧವರು ಸಂಕಷ್ಟದಲ್ಲಿದ್ದರು. ರೈತರಿಗೆ ಜನಸಾಮಾನ್ಯರಿಗೆ ಈ ವರ್ಷದ ಮುಂಗಾರಿನಲ್ಲಿ ಅಲ್ಪ ಸ್ವಲ್ಪ ಮಳೆಯಾಗುತ್ತಿದ್ದು, ಭರಣಿ ಮಳೆ ಬಂದರೆ ಧರಣಿಯೆಲ್ಲ ಬೆಳೆ ಎನ್ನುವ ಗಾದೆಯಂತೆ ಭರಣಿ ಮಳೆಯು ಧರಣಿಗೆ ಸುರಿದಿದೆ.
ರೈತಾಪಿ ವರ್ಗದಲ್ಲಿ ದನಕರುಗಳನ್ನು ಹೊಂದಿದವರು ಭೂಮಿ ಉಳುಮೆ ಮಾಡಿಕೊಂಡಿದ್ದಾರೆ. ದನಕರುಗಳಿಲ್ಲದ ರೈತರು ಟ್ರ್ಯಾಕ್ಟರ್, ಟಿಲ್ಲರ್‍ಗಳ ಮೂಲಕ ಭೂಮಿಯ ಉಳುಮೆ ಮಾಡಿಕೊಂಡಿದ್ದು, ಇದೀಗ ಬೀಜ ಬಿತ್ತನೆ ಮಾಡಲು ಯೋಗ್ಯವಾದ ಸಮಯವಾಗಿದೆ. ಆರಿದ್ರಾ ಮಳೆಯು ಸ್ವಲ್ಪಮಟ್ಟಿಗೆ ಸುರಿದಿದ್ದು, ರೈತರು ಸಿರಿ ಧಾನ್ಯ ಬೆಳೆಗಳಾದ ಆರಕ, ಕೊರ್ಲೆ, ನವಣೆ, ಸಜ್ಜೆ ಮುಂತಾದ ಬೀಜವನ್ನು ಬಿತ್ತುತಿದ್ದಾರೆ.
ಕೆಲವು ರೈತರು ಸಬ್ಸಿಡಿ ದರದಲ್ಲಿ ಕೃಷಿ ಇಲಾಖೆಯಿಂದ ದೊರೆಯುವ ಬಿತ್ತನೆ ಬೀಜ ಪಡೆಯುತ್ತಿದ್ದಾರೆ. ಕಾಲಕಾ¯ಕ್ಕೆ ವರುಣ ಕೃಪೆ ತೋರಿಸಿದಲ್ಲಿ ಉತ್ತಮ ಬೆಳೆ ಬೆಳೆದು, ದನಕರುಗಳಲ್ಲದೆ, ಜನಸಾಮಾನ್ಯರು ನೆಮ್ಮದಿಯ ಜೀವನ ಸಾಗಿಸಲು ಅನುಕೂಲವಾಗಲಿದೆ ಎಂದು ರೈತಾಪಿ ವರ್ಗ ಆಶಾಭಾವ ಹೊಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
