ಮಧುಗಿರಿ
ಸತವಾಗಿ ಪಟ್ಟಣದಲ್ಲಿ ಮಳೆ ಸುರಿಯುತ್ತಿರುವುದರಿಂದ 24 * 7 ವಾಹನಗಳು ಸಂಚರಿಸುವ ಪ್ರಮುಖ ರಸ್ತೆಯೊಂದರಲ್ಲಿ ವಿದ್ಯುತ್ ಕಂಬಗಳು ಸಡಿಲವಾಗಿ ಅದರಲ್ಲಿನ ತಂತಿಗಳು ನೆಲಕ್ಕೆ ಜೋತು ಬಿದ್ದಿವೆ. ಜನರಿಗೆ ಕೈಗೆಟುವ ರೀತಿಯಲ್ಲಿ ನೆಲಕ್ಕೆ ಬಾಗಿರುವ ವಿದ್ಯುತ್ ತಣತಿಗಳಿಂದ ಏನಾದರೂ ಅವಘಡ ಸಂಭವಿಸುವ ಮುನ್ನವೆ ಬೆಸ್ಕಾಂ ಇಲಾಖೆ ಎಚ್ಚೆತ್ತುಕೊಳ್ಳ ಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
ಪಟ್ಟಣದ ತುಮಕೂರು ಗೇಟ್ನ ಅಂಚೆ ಕಚೆÉೀರಿಯ ಸಮೀಪವಿರುವ ಕಂಬಗಳು ವಾಲುತ್ತಿದ್ದು, ಅದರಲ್ಲಿನ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದು, ಅಪಘಾತಕ್ಕೆ ಎಡೆ ಮಾಡಿಕೊಡುತ್ತಿರುವಂತಹ ವಾತಾವರಣ ಸೃಷ್ಟಿಯಾಗಿದೆ. ಪ್ರತಿ ನಿತ್ಯ ತುಮಕೂರು, ಗೌರಿಬಿದನೂರು, ಶಿರಾ ಮಾರ್ಗವನ್ನು ಸಂಪರ್ಕಿಸುವಂತಹ ರಸ್ತೆ ಇದಾಗಿರುವುದರಿಂದ, ಬೇರೆ ನಗರಗಳಿಗೆ ಸಂಚರಿಸಲು ಸಾವಿರಾರು ಪ್ರಯಾಣಿಕರು ಬಹಳ ಕಿರಿದಾಗಿರುವ ಈ ರಸ್ತೆಯಿಂದಲೆ ಬಸ್ಗಳನ್ನು ಹತ್ತುತ್ತಿದ್ದಾರೆ.
ಪ್ರತಿ ಬುಧವಾರ ಸಂತೆ ನಡೆಯುತ್ತಿದ್ದು, ಸಾರ್ವಜನಿಕರ ಹಾಗೂ ವಾಹನಗಳ ಸಂಚಾರವು 24*7 ಇದ್ದು, ಭಾರಿ ಸರಕು ತುಂಬಿದ ವಾಹನ ಚಲಾಯಿಸುವ ಚಾಲಕರಿಗೆ ಇದು ಗಮನಕ್ಕೆ ಬಾರದೆ ಇರುವುದು ಮುಂದಿನ ಅನಾಹುತಕ್ಕೆ ದಾರಿ ಮಾಡಿಕೊಟ್ಟ್ಟಂತಾಗಿದೆ. ಇಲಾಖೆಗೆ ಸಾರ್ವಜನಿಕರು ಹಲವಾರು ಬಾರಿ ದೂರವಾಣಿ ಮೂಲಕ ಸಂಪರ್ಕಿಸಿ ವಿಷಯ ತಿಳಿಸಿದರೂ, ಯಾವುದೇ ಅಧಿಕಾರಿಗಳಾಗಲಿ, ನೌಕರರರಾಗಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಸಂತೆ ದಿನದಂದು ಟ್ರಾಫಿಕ್ ಕಿರಿ ಕಿರಿ ಹೆಚ್ಚಿದ್ದು, ವಾಹನಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಲು ಹರಸಾಹಸ ಪಡಬೇಕಾಗಿದೆ. ವಾಹನಗಳು ಆಗಾಗ ಕೆಲ ಹೊತ್ತು ವಿದ್ಯುತ್ ತಂತಿಗಳ ಕೆಳಗೆ ನಿಲ್ಲುತ್ತಿದ್ದು, ವ್ಯಾಪಾರಕ್ಕಾಗಿ ಬರುವ ರೈತರು ವಾಹನಗಳ ಮೇಲಿಂದ ಸರಕು ಸಾಮಾನುಗಳನ್ನು ಇಳಿಸುವಾಗ ಎಚ್ಚರ ವಹಿಸಬೇಕಾಗಿದೆ. ಒಂದು ವೇಳೆ ಆಗಬಾರದಂತಹ ಅನಾಹುತಗಳು ನಡೆಯುವುದಕ್ಕೂ ಮುನ್ನ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ