ಹಂಪಿ
ಹಂಪಿಯ ಗತವೈಭವ ಸಾರುವ ಸಾರಾಂಶ, ಮತ್ತೊಂದೆಡೆ ಸ್ತ್ರೀ ಮೇಲಿನ ದಿಕ್ಕಾರ, ಹಾಳು ಹಂಪೆಯಲ್ಲ ಹಂಪಿಯಲ್ಲಿದೆ ಮುತ್ತು, ರತ್ನಕ್ಕೂ ಮಿಗಿಲಾದ ಅತ್ಯಮೂಲ್ಯ ರತ್ನಗಳು. ಇದು ಹಂಪಿಯ ವಿರೂಪಾಕ್ಷ ದೇಗುಲದಲ್ಲಿ ಶುಕ್ರವಾರ ನಡೆದ ಹಂಪಿ ಉತ್ಸವದ ಕವಿಗೋಷ್ಠಿ ಕವನಗಳ ಹೂಂಕಾರ.
ಸ್ತ್ರೀ ಮೇಲಿನ ದೌರ್ಜನ್ಯ, ಶೋಷಣೆ ಸರಿಯಲ್ಲ, ಇದಕ್ಕೆ ಮುಂದೊಂದು ದಿನ ತಕ್ಕ ಬೆಲೆ ತೆತ್ತಬೇಕಾದೀತು ಎಂದು ಹಗರಿಬೊಮ್ಮನಹಳ್ಳಿ ಕವಿಯತ್ರಿ ವಾಸಂತಿ ಸಾಲಿಮನಿ ವೇದಿಕೆ ಮೂಲಕ ಸಮಾಜಘಾತುಕರಿಗೆ, ಕಾಮಾಂಧರಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.
ಸಮಾಜದಲ್ಲಿ ದುಷ್ಕ ಕೂಟ, ಕೆಟ್ಟ ವಿಚಾರ, ವಿಷಯಗಳಲ್ಲಿ ಮಗ್ನರಾದವರಿಗೆ, ಅಧಿಕಾರ, ಅಂತಸ್ತುಕ್ಕಾಗಿ ನಿತ್ಯ ದೌರ್ಜನ್ಯ ದಬ್ಬಾಳಿಕೆ ಮಾಡುವವರು ಪ್ರಸ್ತುತ ಅರ್ಹರಾಗಿದ್ದು ನ್ಯಾಯ, ನೀತಿ, ಧರ್ಮದ ಮಾರ್ಗದಲ್ಲಿ ನಡೆಯುವವರಿಗೆ ಮಾನ್ಯತೆ ಇಲ್ಲ ಎಂದು ಹೊಸಪೇಟೆ ಕವಿ ಸೋ.ದ. ವಿರುಪಾಕ್ಷ ಗೌಡ ತಮ್ಮ ಮೋನಚಾದ ಮಾತುಗಳಿಂದ ರಾಜಕಾರಣಿಗಳನ್ನು ತಿವಿದರು.
ಮತ್ತೊಬ್ಬ ಕವಿ ದತ್ತಾತ್ರೇಯ ಕಾರ್ನಾಡ್ ಮಹಿಳೆ ಅಬಲೆಯಲ್ಲ, ಸಬಲೆಯಾಗಿದ್ದು ಅವಳಿಗೂ ನ್ಯಾಯಯುತ ಜೀವನ ನಡೆಸುವ ಎಲ್ಲ ಹಕ್ಕುಗಳಿವೆ, ಗಂಡ ಹೋದಮಾತ್ರಕ್ಕೆ ಹೆಣ್ಣಿನ ಜೀವನ ಮುಗಿಯುವುದಿಲ್ಲ, ಅವಳಿಗೂ ಒಂದು ಮನಸಿದ್ದು ಅದಕ್ಕೆ ಸಮಾಜದ ಪ್ರತಿಯೊಬ್ಬರು ಸೂಕ್ತ ರೀತಿಯಲ್ಲಿ ಸ್ಪಂದಿಸುವ ಮೂಲಕ ಸ್ಥಾನ, ಮಾನಗಳೆರೆಡನ್ನು ನೀಡುವ ಅಗತ್ಯವಿದೆ ಎಂದು ತಮ್ಮ ಕವನದ ಮೂಲಕ ಪ್ರಸ್ತುತ ಪಡಿಸಿದರು.
ಬಸರಕೋಡು ಕವಿ ಮೇಟಿ ಕೊಟ್ರಪ್ಪ ಹಂಪಿ ರಾಜವೈಭವ, ವೈಭೋಗ ಕಳೆದುಕೊಂಡಿದ್ದರು ಅದರ ಮೌಲ್ಯ ಎಂದಿಗೂ ಕಳೆದುಕೊಳ್ಳುವುದಿಲ್ಲ. ವಿಜಯನಗರಕ್ಕೆ ಸಾಟಿ ವಿಜಯಗರವೇ ಆಗಿದೆ ಎಂದು ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ಹೊಸಪೇಟೆ ಯುವ ಕವಿ ಅನಂತ ಪದ್ಮನಾಭ ರಾವ್ ಅವರ ಹಾಳು ಹಂಪೆಯಲ್ಲ ಎಂಬ ಶಿರ್ಷೀಕೆಯ ಕವನ ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿ ವಿಜಯನಗರ ಗತವೈಭವದ, ಅದರ ಮಹತ್ವದವನ್ನು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ