ಸಾದಿಲ್ವಾರು ವೆಚ್ಚದ ನಿಧಿ ಹೆಚ್ಚಳ..!

ಬೆಂಗಳೂರು

    ತುರ್ತು ಸಂದರ್ಭದಲ್ಲಿ ಖರ್ಚು ಮಾಡಲು ನಿಗದಿ ಮಾಡಲಾಗಿದ್ದ ಸಾದಿಲ್ವಾರು ವೆಚ್ಚದ ನಿಧಿಯನ್ನು 85 ರಿಂದ 500 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಕರ್ನಾಟಕ ಸಾದಿಲ್ವಾರು ನಿಧಿ ವಿಧೇಯಕವನ್ನು ಮುಖ್ಯಮಂತ್ರಿಯವರ ಪರವಾಗಿ ಸಚಿವ ಜೆ.ಸಿ.ಮಾಧುಸ್ವಾಮಿ ಮಂಡಿಸಿದರು. ಈ ವೇಳೆ ಮಾತನಾಡಿದ ಅವರು, ಸಾದಿಲ್ವಾರು ವೆಚ್ಚ 1985ರಲ್ಲಿ ನಿಗದಿಯಾಗಿತ್ತು. ಆಗ ಬಜೆಟ್‍ನ ಗಾತ್ರ 2380 ಕೋಟಿ ಇತ್ತು, ಈಗ ಬಜೆಟ್‍ನ ಗಾತ್ರ 2.44 ಲಕ್ಷ ಕೋಟಿ ಇದೆ. ಆದರೆ ಸಾದಿಲ್ವಾರು ವೆಚ್ಚದ ಗಾತ್ರ ಮೊದಲಿನಿಂದಲೂ 85 ಕೋಟಿ ರೂಪಾಯಿಗಳಿದೆ. ಅದನ್ನು 500 ಕೋಟಿಗೆ ಹೆಚ್ಚಿಸಲು ಅವಕಾಶ ಮಾಡಿಕೊಡಲು ವಿಧೇಯಕ ರೂಪಿಸಲಾಗಿದೆ ಎಂದರು.

    ಸದಸ್ಯರಾದ ಬಸವರಾಜ ಹೊರಟ್ಟಿ, ಎಸ್.ಆರ್.ಪಾಟೀಲ್ ವಿಧೇಯಕವನ್ನು ಬೆಂಬಲಿಸಿದರು. ಸಾದಿಲ್ವಾರು ವೆಚ್ಚದ ಠೇವಣಿ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸುವಂತೆ ಜೆಡಿಎಸ್‍ನ ತಿಪ್ಪೇಸ್ವಾಮಿ ಸಲಹೆ ನೀಡಿದರು.

    ವಿಧಾನಸಭೆಯಲ್ಲಿ ಅಂಗೀಕಾರಗೊಂಡ ನಾಲ್ಕು ಹಣಕಾಸು ಮಸೂದೆಗಳಿಗೆ ವಿಧಾನ ಪರಿಷತ್ ಅಂಗೀಕಾರ ನೀಡಿದರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಕರ್ನಾಟಕ ಧನವಿನಿಯೋಗ ವಿಧೇಯಕ, ಕರ್ನಾಟಕ ಸಾದಿಲ್ವಾರು ನಿಧಿ ವಿಧೇಯಕ, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ, ಕರ್ನಾಟಕ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕಗಳಿಗೆ ಅಂಗೀಕಾರ ನೀಡಲಾಗಿದೆ.

    ನಂತರ ಬೆಂಗಳೂರು ಅಭಿವೃದ್ಧೊ ಪ್ರಾಧಿಕಾರ ತಿದ್ದುಪಡಿ ವಿಧೇಯಕ ಮಂಡನೆಗೆ ಸಚಿವರು ಮುಂದಾದಾಗ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಆಕ್ಷೇಪ ವ್ಯಕ್ತ ಪಡಿಸಿ, ಕೊರೊನಾದಲ್ಲಿ ಚರ್ಚೆಗೆ ಅವಕಾಶ ನೀಡದೆ ಈ ಕಲಾಪದಲ್ಲಿ ಬರೀ ವಿಧೇಯಕಗಳನ್ನು ಮಂಡನೆ ಮಾಡಿ, ಅಂಗೀಕಾರ ನೀಡುವುದೇ ಆಗಿದೆ. ಕಳೆದ ಬಾರಿ ಅಧಿವೇಶನದ ವೇಳೆ ಕೊರೊನಾ ಸುರು ಆಯಿತು ಎಂದು ಮುಂದೂಡಿದರು. ಈಗಲೂ ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದು ಸಿಟ್ಟಾದರು. ಆಗ ಮಾಧುಸ್ವಾಮಿ ಅವರು ಬಿಡಿಎ ಮಸೂದೆ ಅಂಗೀಕಾರವನ್ನು ಕೈ ಬಿಟ್ಟರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap