ದೇಶದ ಏಳ್ಗೆಗೆ ದುಡಿಯುವವನೇ ನಿಜವಾದ ಸೈನಿಕ

ತಿಪಟೂರು:

    ದೇಶದ ಏಳ್ಗೆಗೆ ದುಡಿಯುವವನೇ ನಿಜವಾದ ಸೈನಿಕ, ಇಂತಹ ಸೈನಿಕರಲ್ಲಿ ನರೆಂದ್ರ ಮೋದಿಯಿಂದ ಹಿಡಿದುಕಾರ್ಯಕರ್ತರೆಲ್ಲರೂ ಸೈನಿಕರ ಹಾಗೆ ದುಡಿದುದೇಶವನ್ನು ವಿಶ್ವಗುರುವನ್ನಾಗಿ ಮಾಡೋಣಎಂದು ಶಾಸಕ ಬಿ.ಸಿ.ನಾಗೇಶ್ ಕರೆನೀಡಿದರು.

   ಪ್ರದಾನಿ ನರೇಂದ್ರ ಮೋದಿ ಅವರಜನ್ಮದಿನದಬಿ.ಜೆ.ಪಿ ಪಕ್ಷದಿಂದಏರ್ಪಡಿದಿದ್ದ ಸೇವಾ ಸಪ್ತಾಹದಲ್ಲಿಇಮದುರಕ್ತದಾನಕಾರ್ಯಕ್ರಮದಲ್ಲಿ ಮಾತನಾಡಿದಅವರುಎಲ್ಲಾರಾಜಕೀಯ ಪಕ್ಷಗಳು ಅಧಿಕಾರದಆಸೆಯಿಂದದೇಶದಲ್ಲಿಅಧಿಕಾರಕ್ಕೆಬರುತ್ತಾರೆ.ಇನ್ನುತಮ್ಮ ಪಕ್ಷದ ನಾಯಕರ ಹುಟ್ಟುಹಬ್ಬವನ್ನು ಸಾವಿರಾರುಕೆ.ಜಿ ಬೃಹತ್ ಸೇಬಿನ ಹಾರ, ದೊಡ್ಡ ಹಾರಗಳನ್ನು ಹಾಕಿಕೊಂಡು ಹುಟ್ಟುಹಬ್ಬ ಆಚರಿಸುತ್ತಾರೆ ಆದರೆ ನಮ್ಮ ಪಕ್ಷದ ಪ್ರದಾನಿ ಹುಟ್ಟುಹಬ್ಬವನ್ನು ಸೆಪ್ಟಂಬರ್ 17 ರಿಂದ ಅಕ್ಟೋಬರ್ 02ರ ಗಾಂಧಿ ಜಂಯತಿಯವರೆಗೆ ಸಪ್ತಾಹವಾಗಿ ಆಚರಿಸುತ್ತಿದ್ದು ಇದರಲ್ಲಿ ರಕ್ತದಾನ, ಸಸಿ ನೆಟ್ಟು ಪ್ರಕೃತಿಯ ರಕ್ಷಣೆ ಮಾಡುವ ಜವಾಬ್ದಾರಿಯನ್ನು ತಿಳಿಸುವುದು ಮತ್ತು ಸ್ವಚ್ಚ ಭಾರತ ಅಭಿಯಾನವನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದ್ದು ಮತ್ತೆ ಭಾತರವನ್ನು ವಿಶ್ವಗುರುವನ್ನಾಗಿ ಮಾಡಲು ಪಣ ತೊಡೋಣವೆಂದು ಕರೆ ನೀಡಿದರು.

    ನಾವು ಅಂದು ಕೊಟ್ಟ ಮಟ್ಟಿಗೆ ರಕ್ತ ಸಂಗ್ರಹವಾಗಿಲ್ಲ ಇದಕ್ಕೆ ಹಲವಾರು ಕಾರಣಗಳಿವೆ ಒಂದು ಕೊರೋನಾ, ಸಕ್ಕರೆ ಕಾಯಿಲೆ ಇವುಗಳ ಮದ್ಯದಲ್ಲೂ 48 ಯೂನಿಟ್‍ ರಕ್ತ ಸಂಗ್ರಹವಾಗಿದೆ ಎಂದು ತಿಳಿಸಿದರು.

ನಗರದಲ್ಲಿ ರಕ್ತ ನಿಧಿ ಸ್ಥಾಪನೆ 

    ನಮ್ಮ ತಾಲ್ಲೂಕು ಕೇಂದ್ರಕ್ಕೆ ರಕ್ತ ನಿಧಿಯ ಅವಶ್ಯಕತೆ ತುಂಬಾ ಇದೆ, ಅದರಲ್ಲೂ ರಕ್ತದ ಕಾಂಪೋನೆಂಟ್‍ಗಳನ್ನು ಬೇರ್ಪಡಿಸುವ ಯಂತ್ರಗಳ ಅವಶ್ಯಕತೆ ತುಂಬಾ ಇದೆ ಆನಿಟ್ಟಿನಲ್ಲಿ ಕೆಲಸವನ್ನು ಮಾಡಲಾಗುತ್ತಿದೆ ಎಂದು ತಿಪಟೂರು ತಾಲ್ಲೂಕು ವೈದ್ಯಾಧಿಕಾರಿ ರವಿ ತಿಳಿಸಿದರು.

      ಕಾರ್ಯಕ್ರಮದಲ್ಲಿ ತಾಲ್ಲೋಕು ಬಿಜೆಪಿ ಅಧ್ಯಕ್ಷ ಸುರೇಶ್, ನಗರ ಅಧ್ಯಕ್ಷ ಗುಲಾಬಿ ಸುರೇಶ್, ವಿಭಾಗ ಸಹ ಸಂಘಟನಾ ಕಾರ್ಯದರ್ಶಿ ಜಯಪ್ರಕಾಶ್, ಎ.ಪಿ.ಎಂ.ಸಿ ಅಧ್ಯಕ್ಷ ಹೆಚ್.ಬಿ.ದಿವಾಕರ್, ಜಿಲ್ಲಾ ಕಾರ್ಯದರ್ಶಿ ಜಗದೀಶ್ ಬಿಸ್ಲೇಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ಎ.ಪಿ.ಎಂ.ಸಿ ಚುನಾವಣೆಯಲ್ಲಿ ಒಂದಾಗಿದ್ದು ಶಾಸಕ ಬಿ.ಸಿ.ನಾಗೇಶ್ ಮತ್ತು ಬಿ.ಜೆ.ಪಿ.ಮುಖಂಡ ಲೋಕೇಶ್ವರ್ ಮೋದಿ ಹುಟ್ಟು ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಸೇವಾ ಸಪ್ತಾಹದ ರಕ್ತದಾನ ಶಿಬಿರದ ಕಾರ್ಯಕ್ರಮಕ್ಕೆ ಲೋಕೇಶ್ವರ್ ಅನುಪಸ್ತಿತಿಯಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link