ಹೆಚ್ಚಿದ ಭತ್ತದ ಆವಕ: ಸಿಗದ ಹೆಚ್ಚಿನ ಬೆಲೆ

ದಾವಣಗೆರೆ:
     ಕರ್ನಾಟಕದಕೇಂದ್ರ ಬಿಂದುಆಗಿರುವದಾವಣಗೆರೆಯಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿಭತ್ತದ ಆವಕ ಜೋರಾಗಿದೆ. ಆದರೆ, ಕರೊನಾ ಸೋಂಕು ದೇಶದಲ್ಲಿರುದ್ರ ನರ್ತನ ಮುಂದು ವರೆಸಿರುವ ಹಿನ್ನೆಲೆಯಲ್ಲಿನೆರೆಯರಾಜ್ಯಕ್ಕೆ ಭತ್ತ ಹೋಗುವುದು ಸ್ಥಗಿತ ಆಗಿರುವುದರಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಹೀಗಾಗಿ ಭತ್ತ ಬೆಳೆಗಾರರು ಕಂಗಾಲಾಗಿದ್ದಾರೆ.
      ಲಾಕ್‍ಡೌನ್ ಹಿನ್ನೆಲೆಯಲ್ಲಿ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡಿಗೆ ಭತ್ತ ಹೋಗುವುದು ಸ್ಥಗಿತ ಗೊಂಡಿದ್ದರಿಂದ ಅಲ್ಲಿಗೆ ಹೋಗಬೇಕಾದ ಭತ್ತ ಸ್ಥಳೀಯವಾಗಿಯೇ ಉಳಿದುಕೊಂಡಿದೆ.ಅಲ್ಲದೇಲಾಕ್‍ಡೌನ್ ಹಿನ್ನೆಲೆಯಲ್ಲಿ ಪಡಿತರದಾರರಿಗೆಎರಡು ತಿಂಗಳ ಪಡಿತರವನ್ನು ನೀಡಿರುವುದರಿಂದ ಭತ್ತಕೊಂಡುಕೊಳ್ಳುವವರ ಪ್ರಮಾಣಕಡಿಮೆಯಾಗಿದೆಎಂಬುದು ವರ್ತಕರವಾದಆಗಿದೆ.
      ಕಳೆದ ವರ್ಷಕ್ಕೆ ಹೋಲಿಸಿದರೆ ಭತ್ತದ ಬೆಲೆ ಕಡಿಮೆಯಾಗಿದೆ.ಮಳೆಗಾಲವಾದ್ದರಿಂದ ಭತ್ತವನ್ನು ಸಂಗ್ರಹಿಸಿ ಇಟ್ಟುಕೊಂಡರೆ ಹಾಳಾಗುತ್ತದೆ ಎಂಬ ಭಯದಿಂದರೈತರು ಸಿಕ್ಕಷ್ಟು ಬೆಲೆಗೆ ಭತ್ತವನ್ನು ಮಾರಾಟ ಮಾಡಿ ಹೋಗುತ್ತಿದ್ದಾರೆ.ಸರ್ಕಾರದ ಬೆಂಬಲ ಬೆಲೆಯಲ್ಲಿಖರೀದಿಸುವುದಕ್ಕೆ ಮೇ 31ರವರೆಗೆ ಗಡುವು ನೀಡಿದೆ. ಸುಗ್ಗಿ ಶುರುವಾಗುವ ಮುನ್ನವೇ ಬೆಂಬಲ ಬೆಲೆ ಯೋಜನೆಯಡಿ  ಭತ್ತಖರೀದಿಸುವ ಅವಧಿಯು ಮುಕ್ತಾಯವಾಗಲಿದೆ.
     ಕಳೆದ ವರ್ಷಕ್ಕೆ ಹೋಲಿಸಿದರೆ ಒಂದುಕ್ವಿಂಟಲ್ ಭತ್ತಕ್ಕೆ200 ರೂ.ಕಡಿಮೆಇದೆ.ಬೆಂಬಲ ಬೆಲೆ, ಫ್ರೂಟ್‍ತಂತ್ರಾಂಶದಆಧಾರದ ಮೇಲೆ ಖರೀದಿ ಮಾಡಲಾಗುತ್ತಿದೆಯಾದರೂಅವರು ಶೇ 17ರಷ್ಟು ತೇವಾಂಶ ಕೇಳುತ್ತಿದ್ದಾರೆ.ಆದರೆರೈತರ ಬಳಿ ಶೇ 20ರಿಂದ 25 ಪ್ರಮಾಣದಲ್ಲಿತೇವಾಂಶಇರುವುದರಿಂದರೈತರ ಭತ್ತದಖರೀದಿ ಕಡಿಮೆಯಾಗಿದೆಎನ್ನುತ್ತಾರೆ ಎಪಿಎಂಸಿ ಅಧಿಕಾರಿಗಳು.
     ಎಪಿಎಂಸಿಯಲ್ಲಿ ಭತ್ತದ ಆವಕ ಹೆಚ್ಚಾಗುತ್ತಿದೆ.ಶನಿವಾರ 23,895 ಕ್ವಿಂಟಲ್‍ಆವಕವಾದರೆ ಕಳೆದ ಸೋಮವಾರ 49 ಸಾವಿರಕ್ವಿಂಟಲ್‍ಆವಕವಾಗಿದೆ.ಕೆಎಂಎಫ್‍ಗೆ 8 ಸಾವಿರ ಮೆಟ್ರಿಕ್‍ಟನ್ ಮಾರಾಟ ಮಾಡಲಾಗಿತ್ತು.5 ದಿನಗಳ ಹಿಂದೆಖರೀದಿ ಮುಗಿದಿದೆ.ಆಂಧ್ರಪ್ರದೇಶ ಹಾಗೂ ತಮಿಳುನಾಡಿಗೆ ಸ್ವಲ್ಪ ಪ್ರಮಾಣದಲ್ಲಿ ಭತ್ತ ಹೋಗುತ್ತಿದೆಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ ಪ್ರಭು.ಕೋವಿಡ್-19 ಹಿನ್ನೆಲೆಯಲ್ಲಿ ನೆರೆಯ ರಾಜ್ಯಗಳಿಗೆ ಹೋಗುತ್ತಿದ್ದ ಭತ್ತ ಶೇ 50ರಷ್ಟು ಕಡಿಮೆಯಾಗಿದೆ.ಸ್ಪಿರಿಟ್‍ಗಾಗಿ ಮಾತ್ರಜರೇಕಟ್ಟೆ ಹಾಗೂ ತ್ಯಾವಣಿಗೆ ಯಿಂದ ಸ್ವಲ್ಪ ಪ್ರಮಾಣದಲ್ಲಿ ಭತ್ತಆಂಧ್ರಕ್ಕೆ ಹೋಗುತ್ತಿದೆ.
     ಬೆಂಬಲ ಬೆಲೆಯಲ್ಲಿಒಬ್ಬರೈತರಿಂದ 45 ಚೀಲ ಮಾತ್ರ ಕೊಂಡುಕೊಳ್ಳುತ್ತಿದ್ದು, ಒಂದುಎಕರೆಗೆರೈತ ಇಷ್ಟು ಪ್ರಮಾಣದ ಭತ್ತ ಬೆಳೆಯುತ್ತಾನೆ. ಉಳಿದ ಭತ್ತವನ್ನುಎಲ್ಲಿ ಮಾರಾಟ ಮಾಡಬೇಕು?ರೈತರಿಗೆಒಂದುಎಕರೆಗೆ ಕನಿಷ್ಠ 10 ಸಾವಿರ ನಷ್ಟವಾಗುತ್ತಿದೆ’ ಎನ್ನುತ್ತಾರೆ ವರ್ತಕರೊಬ್ಬರು.

Recent Articles

spot_img

Related Stories

Share via
Copy link