ಪ್ರಥಮ ಜಂಟಿ ಸಮಾಲೋಚನಾ ಸಭೆ; ಸರ್ಕಾರಿ ನೌಕರರ ಸಮಸ್ಯೆ ಪರಿಹಾರ;ಕವಿತಾ ಮಣ್ಣಿಕೇರಿ

ಚಿತ್ರದುರ್ಗ;

    ಜಿಲ್ಲಾ ಸರ್ಕಾರಿ ನೌಕರರ ಸಂಘದವತಿಯಿಂದ ಸರ್ಕಾರಿ ನೌಕರರ ಸಮಸ್ಯೆಗಳ ಕುರಿತುಚರ್ಚಿಸುವ ಸಂಬಂಧ ಜಿಲ್ಲಾಧಿಕಾರಿ ಕವಿತಾ ಎಸ್.ಮಣ್ಣಿಕೇರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಪ್ರಥಮ ಜಂಟಿ ಸಮಾಲೋಚನಾ ಸಭೆ ಜರುಗಿತು

    ವಿವಿಧ ಇಲಾಖೆಗಳ ನೌಕರರ ಕುಂದು ಕೊರತೆಗಳು ಹಾಗೂ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಜಂಟಿ ಸಮಾಲೋಚನಾ ಸಭೆ ನಡೆಸಲು ನೀಡಿರುವ ಆದೇಶದಂತೆ ಶುಕ್ರವಾರ ಚಿತ್ರದುರ್ಗದಲ್ಲಿ ಈ ಸಭೆ ನಡೆಯಿತು

   ಸಭೆಯ ಆರಂಭದಲ್ಲಿ ಮಾತನಾಡಿದ ಚಿತ್ರದುರ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಮಂಜುನಾಥ್‍ ಅವರು, ಚಿತ್ರದುರ್ಗ ಜಿಲ್ಲೆಯಲ್ಲಿ ಸರ್ಕಾರಿ ನೌಕರರ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರದ ಅನೇಕ ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವುದರಲ್ಲಿ ಹೆಚ್ಚಿನ ಪಾತ್ರವಹಿಸುತ್ತಿದ್ದು, ಸಾರ್ವಜನಿಕರ ಜೊತೆಗೂ ಉತ್ತಮ ಭಾಂಧವ್ಯವಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆಂದು ಹೇಳಿದರು

     ಕೆಲವೊಮ್ಮ ಸರ್ಕಾರಿ ನೌಕರರು ನಾನಾ ಬಗೆಯ ತೊಂದರೆಗಳನ್ನು ಅನುಭಿಸುವಂತಹ ಪ್ರಕರಣಗಳು ನಡೆಯತ್ತಿವೆ. ಹೀಗಾಗಿ ಸಮಸ್ಯೆಗಳು ಎದುರಾದಾಗ ಅವುಗಳನ್ನು ಬಗೆಹರಿಸಲು ಜಿಲ್ಲಾಡಳಿತ ಮುಂದಾಗಬೇಕುಎನ್ನುವ ಪ್ರಸ್ತಾವನೆ ಸಲ್ಲಿಸಿದರು
ಜಿಲ್ಲಾಧಿಕಾರಿ ಕವಿತಾ ಎಸ್.ಮಣ್ಣಿಕೇರಿ ಅವರು ಸಕಾರಾತ್ಮವಾಗಿ ಸ್ಪಂದಿಸಿ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು

    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೆ.ರವಿಶಂಕರ್‍ರೆಡ್ಡಿ,ಡಿ.ವೈ.ಎಸ್.ಪಿ ಶ್ರೀ ಎಸ್.ಪಾಂಡುರಂಗಜಿಲ್ಲಾಪಂಚಾಯತ್ ಸಹಾಯಕ ಕಾರ್ಯದರ್ಶಿಯಾದ ಈಶ್ವರ ಪ್ರಸಾದ್ ಇವರುಗಳು ಉಪಸ್ಥಿತರಿದ್ದರು
ಜಿಲ್ಲಾ ಸರ್ಕಾರಿ ನೌಕರರ ಸಂಘದಅಧ್ಯಕ್ಷ ಕೆ.ಮಂಜುನಾಥ್, ರಾಜ್ಯ ಪರಿಷತ್ ಸದಸ್ಯಕೆ.ಟಿ.ತಿಮ್ಮಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಜಿ.ಆರ್.ಪ್ರದೀಪ್, ಸರ್ಕಾರಿ ನೌಕರರ ಸಂಘದ ಹೊಳಲ್ಕೆರೆ ಘಟಕದಅಧ್ಯಕ್ಷ ಲೋಕೇಶ್, ಹಿರಿಯೂರುಅಧ್ಯಕ್ಷಆರ್,ಬಿ.ಮಧುರಿ, ಚಳ್ಳಕೆರೆ ಘಟಕದಅಧ್ಯಕ್ಷಜಗನ್ನಾಥ ಹೊಸದುರ್ಗಅಧ್ಯಕ್ಷ ಎಂ.ಆರ್.ಶಾಂತಪ್ಪ, ಮೊಳಕಾಲ್ಮೂರು ಅಧ್ಯಕ್ಷಚಿದಾನಂದಪ್ಪ ಹಾಗೂ ಇತರೆ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link