ಔಷಧ ತಜ್ಞರ ಬೇಡಿಕೆ ಈಡೇರುವ ತನಕ ವಿವಿಧ ಹಂತದಲ್ಲಿ ಪ್ರತಿಭಟನೆ

ಕುಣಿಗಲ್

    ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಮತ್ತು ಹಿರಿಯ ಔಷಧಿಯ ತಜ್ಞರುಗಳು ಪ್ರತಿಭಟನೆಯ ಮೊದಲ ಹಂತವಾಗಿ ಕೈಗೆ ಕಪ್ಪು ಪಟ್ಟಿಯನ್ನು ಕಟ್ಟಿಕೊಂಡು ಪ್ರತಿಭಟಿಸುವ ಮೂಲಕ ಕರ್ತವ್ಯ ನಿರ್ವಹಿಸಲಾಗುತ್ತದೆ ಎಂದು ರಾಜ್ಯ ಔಷಧ ತಜ್ಞರ ಸಂಘದ ಉಪಾಧ್ಯಕ್ಷ ಜಿ.ಎಲ್.ಸಣ್ಣವೀರಪ್ಪ ತಿಳಿಸಿದರು.

    ಅವರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ಕೆಲಸ ನಿರ್ವಹಿಸುವ ಮೂಲಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಔಷಧಿ ತಜ್ಞರುಗಳು ಮೊದಲ ಹಂತದ ಪ್ರತಿಭಟನೆಯಲ್ಲಿ ತಮ್ಮ ತಮ್ಮ ಕರ್ತವ್ಯದ ಸಮಯದಲ್ಲಿ ತಮ್ಮ ಕೈಗಳಿಗೆ ಕಪ್ಪುಪಟ್ಟಿ ಧರಿಸಿ ಕೆಲಸ ನಿರ್ವಹಿಸುತ್ತಿದ್ದಾರೆಂದ ಅವರು,

     ಮುಖ್ಯ ಬೇಡಿಕೆಗಳಾದ ಹುದ್ದೆಗಳಲ್ಲಿ ಪದೋನ್ನತಿ, ಹೊಸಹುದ್ದೆಗಳ ಸೃಷ್ಟಿ, ಖಾಲಿ ಇದ್ದ ಹುದ್ದೆಗಳನ್ನು ತುಂಬುವುದು, ಈಗಾಗಲೇ ವೇತನಭತ್ಯೆಗಳಲ್ಲಿ ವ್ಯತ್ಯಾಸ ಮಾಡಿರುವುದು, ಕೇಂದ್ರ ಸರ್ಕಾರ ನೀಡುತ್ತಿರುವಂತೆ ಹಾಗೂ ನೆರೆ ರಾಜ್ಯಗಳಲ್ಲಿ ವೇತನ ನೀಡುತ್ತಿರುವಂತೆ ಸಮಾನ ವೇತನವನ್ನು ಕೂಡಲೆ ರಾಜ್ಯ ಸರ್ಕಾರ ನೀಡಬೇಕೆಂದು ಆಗ್ರಹಿಸಿದರು. ಅಲ್ಲದೆ 23 ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಮೊದಲನೇ ಹಂತದ ಜ.12ರವರೆಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಲಾಗುವುದು.

    ಎರಡನೇ ಹಂತದಲ್ಲಿ ಜನವರಿ 30 ರಂದು ಬೆಂಗಳೂರಿನಲ್ಲಿ ಬೃಹತ್ ರ್ಯಾಲಿಯೊಂದಿಗೆ ಸರ್ಕಾರಕ್ಕೆ ಮನವಿ ನೀಡುವುದು. ಫೆ. 10 ರಿಂದ 17ರವರೆಗೆ ಆರೋಗ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ಆಸ್ಪತ್ರೆಗಳಲ್ಲಿ ತಮ್ಮ ಕರ್ತವ್ಯವನ್ನು ಸ್ಥಗಿತಗೊಳಿಸಿ ಪ್ರತಿಭಟಿಸುವುದು. ಐದನೇ ಹಂತದಲ್ಲಿ ಏ.10 ರಿಂದ ನಮ್ಮ ನೌಕರರ ಬೇಡಿಕೆಗಳು ಈಡೇರುವವರೆಗೂ ನಿರಂತರವಾಗಿ ಕರ್ತವ್ಯ ನಿರ್ವಹಿಸದೆ ಎಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಪ್ರತಿಭಟನೆಯನ್ನು ತೀವ್ರಗೊಳಿಸುವ ಮೂಲಕ ಸರ್ಕಾರದ ಗಮನವನ್ನು ಸೆಳೆಯಲಾಗುವುದೆಂದು ರಾಜ್ಯ ಉಪಾಧ್ಯಕ್ಷ ಜಿ.ಎಲ್.ಸಣ್ಣವೀರಪ್ಪ ತಿಳಿಸಿದರು. ಈ ಸಂದರ್ಭದಲ್ಲಿ ಔಷಧ ತಜ್ಞರಾದ ಗಿರಿಜಾದೇವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ