ಹಾವೇರಿ
ವಿಧಾನಸಭಾ ಉಪ ಚುನಾವಣೆಯಲ್ಲಿ ಜಿಲ್ಲೆಯ ರಾಣೇಬೆನ್ನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಗುತ್ತೂರ ಅವರು ತಮ್ಮ ಸಮೀಪ ಸ್ಪರ್ಧಿ ಕಾಂಗ್ರೆಸ್‍ನ ಕೆ.ಬಿ.ಕೋಳಿವಾಡ ಅವರಿಗಿಂತ 23,222ಮತಗಳನ್ನು ಹೆಚ್ಚು ಪಡೆದು ಗೆಲುವು ಸಾಧಿಸಿದ್ದಾರೆ.
ಅರುಣಕುಮಾರ ಗುತ್ತೂರ (ಬಿಜೆಪಿ)95,438, ಕೆ.ಬಿ.ಕೋಳಿವಾಡ (ಕಾಂಗ್ರೆಸ್) 72,216, ಮಲ್ಲಿಕಾರ್ಜುನ ರುದ್ರಪ್ಪ ಹಲಗೇರಿ (ಜೆ.ಡಿ.ಎಸ್) 979, ಐ.ಎಚ್.ಪಾಟೀಲ(ಉ.ರಾ.ಪಾ.)349, ಗೌತಪ್ಪ ಶಿವಪ್ಪ ಕಾಂಬಳೆ(ಯು.ಕ.ಪ) 324, ನಾಗಪ್ಪ ನೀಲಪ್ಪ ಸಂಶಿ(ಕ.ಜ.ಪ) 104, ಡಾ.ಜಿ.ಎಂ.ಕಲ್ಲೇಶ್ವರಪ್ಪ(ಪಕ್ಷೇತರ) 104, ಪವನಕುಮಾರ ಎಂ.(ಪಕ್ಷೇತರ) 165, ಶಿವಯೋಗಿಸ್ವಾಮಿ ಮಹಾನುಭಾವಿ ಮಠ(ಪಕ್ಷೇತರ)624 ಮತಗಳನ್ನು ಪಡೆದಿದ್ದಾರೆ.
ಕ್ಷೇತ್ರದಲ್ಲಿ 2,33,137 ಮತದಾರ ಪೈಕಿ 1,70,303 ಮತಗಳು ಚಲಾವಣೆಯಾಗಿವೆ, 1,608 ಮತಗಳು ನೋಟಾ ಪರವಾಗಿ ಚಲಾವಣೆಯಾಗಿವೆ. 13 ಮತಗಳು ತಿರಸ್ಕೃತಗೊಂಡಿವೆ ಎಂದು ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಎ.ದೇವರಾಜ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ