ಚರಂಡಿಗಳಿಗೆ ಕ್ರಿಮಿನಾಶಕ ಸಿಂಪಡಣೆ

ಚಿಕ್ಕನಾಯಕನಹಳ್ಳಿ:

      ಮಧ್ಯಮ ವರ್ಗದವರು, ಕೆಳ ಮಧ್ಯಮ ವರ್ಗದವರು ಕರ್ಪ್ಯೂ ಪರಿಸ್ಥಿತಿಯನ್ನು ತಕ್ಕ ಮಟ್ಟಿಗೆ ಹೇಗೊ ನಿಭಾಯಿಸುತ್ತಿದ್ದಾರೆ ಆದರೆ ನಿರ್ಗತಿಕರು, ಕಡು ಬಡವರು, ಬಡವರು ಪ್ರತಿ ದಿನ ಕೂಲಿ ಮಾಡಿ ಅದರಿಂದ ಸಂಪಾದನೆಯಿಂದ  ಮನೆಗೆ ಜೀವನಾವಶ್ಯಕ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದವರಿಗೆ ಕೈಲಿ ಕೆಲಸವಿಲ್ಲದೆ, ಹಣ ಸಂಪಾದನೆಯ ಮಾರ್ಗವಿಲ್ಲದೆ ಪರಿತಪಿಸುವ ಸ್ಥಿತಿ ತಲುಪಿಸಿದೆ.

      ಜೀವನಾವಶ್ಯಕ ವಸ್ತುಗಳನ್ನು ಸರ್ಕಾರ ಒದಗಿಸುವುದಾಗಿ ಹೇಳಿದ್ದರಿಂದ ಜನರು ಸ್ವಲ್ಪ ಮಟ್ಟಿಗೆ ಬಡಜನರು ಸಮಾಧಾನದಿಂದ್ದರು ಆದರೆ ದಿನ ಕಳೆದಂತೆ ಹಣ ಗಳಿಕೆಯ ದಾರಿಗಳೆಲ್ಲಾ ಮುಚ್ಚಿದ್ದರಿಂದ ಹಾಗೂ ಮನೆಯಲ್ಲಿ ಆಹಾರ ಸಾಮಗ್ರಿಗಳು ಖಾಲಿಯಾದ್ದರಿಂದ ಸರ್ಕಾರ ಹೇಳಿದಂತೆ ಪಡಿತರ ವ್ಯವಸ್ಥೆ ಮನೆ ಬಾಗಿಲಿಗೆ ಬಾರದಿದ್ದರಿಂದ ಕಂಗಾಲಾಗಿದ್ದಾರೆ, ಸದ್ಯದ ಮಟ್ಟಿಗೆ ಇಂದಿರಾ ಕ್ಯಾಂಟೀನ್ ನಲ್ಲಿ ನಾವು ತಿಂದು ಮನೆಗೂ ತರುತ್ತಿದ್ದೇವೆ ಎನ್ನುತ್ತಿದ್ದಾರೆ. ಈ ಬಗ್ಗೆ ಇಂದಿರಾ ಕ್ಯಾಂಟೀನ್ ಮೇಲ್ವಿಚಾರಕರನ್ನು ಪತ್ರಿಕೆ ಮಾತನಾಡಿಸಿದ್ದು ಪ್ರತಿ ನಿತ್ಯ ಉಪಹಾರಕ್ಕೆ ಕನಿಷ್ಟ ಮುನ್ನೂರು ಜನ ಬರುತ್ತಾರೆ, ಬೆಳಗ್ಗೆ 7.30ರಿಂದ 8.30ರೊಳಗೆ ಈ ತಿಂಡಿ ಮುಕ್ತಾಯವಾಗುತ್ತಿದೆ ಎನ್ನುತ್ತಾರೆ.

ಪಡಿತರ ವಿತರಣೆಯ ಬಗ್ಗೆ ತಹಶೀಲ್ದಾರ್ ಹೇಳಿಕೆ:

    ಬಡವರ ಪಡಿತರ ಬಗ್ಗೆ ತಹಶೀಲ್ದಾರ್ ತೇಜಸ್ವಿನಿಯವರನ್ನು ಮಾತನಾಡಿಸಿದಾಗ ಅವರು, ತಾಲೂಕು ಆಹಾರ ಇಲಾಖೆಯ ಅಧಿಕಾರಿಗಳ  ಹಾಗೂ ಪಡಿತರ ವಿತರಕರ ಸಭೆಯನ್ನು ಶನಿವಾರ ಕರೆದಿದ್ದು, ಈ ಸಭೆಯಲ್ಲಿ ಸರ್ಕಾರದ ನಿರ್ದೇಶನದಂತೆ ಕುಟುಂಬವಾರು ಪಡಿತರ ವಿತರಿಸಲು ಅನುಸರಿಸಬೇಕಾದ ಕ್ರಮದ ಬಗ್ಗೆ ವಿವರವಾಗಿ ಚರ್ಚಿಸಿ ಆನಂತರ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು.

    ಇನ್ನು ವರ್ತರಕ ಸಂಘದ ಪದಾಧಿಕಾರಿಗಳು ಹಾಗೂ ದಿನಸಿ ಅಂಗಡಿ ವ್ಯಾಪಾರಿಗಳ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆಸಿದ್ದು ಪ್ರತಿ ಅಂಗಡಿಯವರು ತಮ್ಮ ನಿಶ್ವಿತ ಗ್ರಾಹಕರ ಮನೆಗಳಿಗೆ ಅವರ ಬೇಡಿಕೆಯಂತೆ ಸಾಮಾಗ್ರಿಗಳನ್ನು ತಲುಪಿಸಲು ಕ್ರಮವಹಿಸುವಂತೆ ಸೂಚಿಸಿದ್ದಾರೆ ಎಂದು ತಹಶೀಲ್ದಾರ್ ತಿಳಿಸಿದರು.

ಪಟ್ಟಣದ ಚರಂಡಿಗಳಿಗೆ ಕ್ರಿಮಿನಾಶಕ ಸಿಂಪಡಣೆ:

      ಶುಕ್ರವಾರ ಪುರಸಭೆ ವತಿಯಿಂದ ಪಟ್ಟಣದ ತಾಲೂಕು ಕಚೇರಿಯಿಂದ ನೆಹರು ವೃತ್ತದ ವರೆಗೆ ಬಿ.ಎಚ್.ರಸ್ತೆಯ ಎರಡೂ ಬದಿಯ ಚರಂಡಿಗಳಿಗೆ ಅಗ್ನಿ ಶಾಮಕ ವಾಹನದ ನೆರವಿನಿಂದ ಫಿನಾಯಿಲ್ ನ್ನು ಸಿಂಪಡಿಸಿದ್ದು, ಶನಿವಾರ ಈ ಕಾರ್ಯಾಚರಣೆ ಮುಂದುವರೆಯಲಿದೆ, ಅಗ್ನಿ ಶಾಮಕ ವಾಹನ ಸಂಚಿಸಲಾರದ ಬೀದಿಗಳಲ್ಲಿನ ಚರಂಡಿಗಳಿಗೆ ಮಿಥಿನಾಲ್ ನ್ನು ಸಿಂಪಡಿಸಲಾಗುತ್ತಿದೆ,  ಎರಡನೇ ಹಂತದ ಕಾರ್ಯಾಚರಣೆಯಾಗಿ ಹತ್ತು ದಿನಗಳ ನಂತರ ಎಲ್ಲಾ ವಾರ್ಡ್ ಗಳಿಗೂ ಹೈಪೊಕ್ಲೋರೈಡ್ ದ್ರಾವಣವನ್ನು ಸಿಂಪಡಿಸಲು ಸಿದ್ದತೆ ಮಾಡಿಕೊಳ್ಳುತ್ತಿರುವುದಾಗಿ ಪುರಸಭೆಯ ಮುಖ್ಯಾಧಿಕಾರಿ ಶ್ರೀನಿವಾಸ್ ಪತ್ರಿಕೆಗೆ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link