ನವದೆಹಲಿ:
ಇಷ್ಟು ದಿನ ಶ್ರಿಮಂತಿಕೆಗೆ ಹೆಸರುವಾಸಿಯಾಗಿದ್ದ ಬಿಸಿಸಿಐ ಈಗ ಆಟಗಾರರ ಸಂಚಿನ ಮೂಲಕ ಸುದ್ದಿಯಲ್ಲಿದೆ.
ಹೇಗೆಂದರೆ ನಮ್ಮ ಟೀಂ ಇಂಡಿಯಾದ ಪ್ರಧಾನ ಕೋಚ್ ಆಗಿದ್ದ ತಂಡದ ಮಾಜಿ ನಾಯಕ ಹಾಗು ಅದ್ಭುತ ಸ್ಪಿನ್ನರ್ ಮತ್ತು ಜಂಬೊ ಎಂದೇ ಖ್ಯಾತರಾದ ಶ್ರೀ ಅನಿಲ್ ಕುಂಬ್ಳೆ ಅವರನ್ನು ಆ ಹುದ್ದೆಯಿಂದ ಕೆಳಗಿಳಿಸಲು ಕ್ಯಾಪ್ಟನ್ ಕೊಹ್ಲಿ ರೂಪಿಸಿದ್ದ ಸಂಚು ಬಯಲಾಗಿದೆ. ಬಿಸಿಸಿಐಗೆ ಕೊಹ್ಲಿ ರವಾನೆಯಾಗಿದ್ದ ರಹಸ್ಯ ಇ-ಮೇಲ್ ಗಳು ಸತ್ಯವನ್ನು ಬಹಿರಂಗ ಪಡಿಸಿವೆ ಎಂದು ಮೂಲಗಳು ತಿಳಿಸಿವೆ.
ಅನಿಲ್ ಕುಂಬ್ಳೆ ಟೀಂ ಇಂಡಿಯಾದ ಕೋಚ್ ಹುದ್ದೆಗೆ ರಾಜೀನಾಮೆ ನೀಡಲು ವಿರಾಟ್ ಕೊಹ್ಲಿ ಬಿಸಿಸಿಐಗೆ ಕಳುಹಿಸಿದ ಇಮೇಲ್ ಕಾರಣ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಕೊಹ್ಲಿ ಬಿಸಿಸಿಐ ಸಮಿತಿಗೆ ಕಳುಹಿಸಿದ್ದ ಇ-ಮೇಲ್ ಹಾಗೂ ಕೆಲವು ಸಂದೇಶಗಳು ಲಿಕ್ ಆಗಿವೆ ಎಂದು ವರದಿಯಲ್ಲಿ ಹೇಳಲಾಗಿದ್ದು, ಕುಂಬ್ಳೆ ಕುರಿತು ನಾಯಕ ವಿರಾಟ್ ಕೊಹ್ಲಿ ಸತತವಾಗಿ ಬಿಸಿಸಿಐ ಮುಖ್ಯ ಕಾರ್ಯದರ್ಶಿ ರಾಹುಲ್ ಜೋಹ್ರಿ ಅವರಿಗೆ ನಿರಂತರ ಇ-ಮೇಲ್ ಸಂದೇಶ ರವಾನಿಸುತ್ತಿದ್ದರು ಎಂದು ಹೇಳಲಾಗಿದೆ.