ಮಿಡಿಗೇಶಿ
ಸಾರ್ವಜನಿಕರ ತೆರಿಗೆ ಹಣ ಲಕ್ಷಾಂತರ ರೂ. ವ್ಯಯಿಸಿ ನಿರ್ಮಿಸಿರುವ ಶೌಚಾಲಯ ಉಪಯೊಗಕ್ಕೆ ಬಾರದೆ ಮಿಡಿಗೇಶಿ ಬಸ್ ನಿಲ್ದಾಣದಲ್ಲಿ ಅನಾಥವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿ, ಕೆ-ಶಿಪ್ ನಿರ್ಮಿಸಿದ್ದ ಶೌಚಾಲಯ ಲೋಕಾರ್ಪಣೆಗೊಂಡು ನಾಲ್ಕಾರು ವರ್ಷಗಳು ಕಳೆದರೂ ಸಹ ಇದುವರೆವಿಗೂ ಜನ ಬಳಕೆಗೆ ಇದು ಲಭಿಸಿಲ್ಲ. ಜನ ಬಳಕೆಗೆ ಅನುವು ಮಾಡುವ ಸ್ಥಿತಿಯಲ್ಲೂ ಮಿಡಿಗೇಶಿ ಗ್ರಾಮ ಪಂಚಾಯಿತಿ ಇದ್ದಂತೆ ಕಾಣಬರುತ್ತಿಲ್ಲ. ಜನ ಪ್ರತಿನಿಧಿಗಳ ಕರ್ತವ್ಯ ಲೋಪದಿಂದ ಶೌಚಾಲಯದ ಬಾಗಿಲು ಬಂದಾಗಿದೆ.
ಈ ಶೌಚಾಲಯದ ಹಿಂಬದಿಯಲ್ಲೆ ಪೋಲೀಸ್ ಠಾಣೆ, ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಅದರ ಪಕ್ಕದ್ಲಲೇ ಎಸ್.ವಿ.ಎಂ ಕಾನ್ವೆಂಟ್ ಶಾಲೆ, ಇನ್ನು ಸ್ವಲ್ಪ ದೂರದಲ್ಲಿ ಕೆ.ಪಿ.ಟಿ.ಸಿ.ಎಲ್ ಕಚೆರಿ ಹಾಗೂ ವಿದ್ಯುತ್ ಉಪ ಸ್ಥಾವರ ಕಚೆರಿ, ಪಶು ಆರೋಗ್ಯ ಇಲಾಖೆ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ನಾಡಕಛೇರಿ ಇನ್ನೂ ಮುಂತಾದ ಸಾರ್ವಜನಿಕ ಕಚೇರಿಗಳಿವೆ. ಪ್ರತಿನಿತ್ಯ ನೂರಾರು ಪುರುಷರು, ಮಹಿಳೆಯರು ಬಂದು ಹೋಗುತಿದ್ದಾರೆ. ಆದರೆ ಅವರಿಗೆ ದೇಹಬಾಧೆ ತೀರಿಸಲು ಶೌಚಾಲಯ ಮಾತ್ರ ಉಪಯೋಗವಾಗದೆ, ಅವರು ಹಿಡಿ ಶಾಪ ಹಾಕುತ್ತಲೆ ಇದ್ದಾರೆ. ಗ್ರಾಮ ಪಂಚಾಯಿತಿಯವರು ಈಗಲಾದರೂ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡಲಿ ಎಂಬುದೆ ಸಾರ್ವಜನಿಕರ ಆಶಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ