ಹೊಸದುರ್ಗ:
ತಾಲ್ಲೂಕಿನ ವೇದಾವತಿ ನದಿ ಬರಿದಾಗಿದ್ದು, ಈಗ ಕುಡಿಯುವ ನೀರು ಎಲ್ಲಿಂದ ಪೂರೈಕೆ ಮಾಡುತ್ತಾರೆ ಎಂದು ಪಟ್ಟಣದ ಜನರು ಹಾಗೂ ರೈತರು ಕಂಗಾಲಾಗಿದ್ದಾರೆ.ಕಳೆದ ಒಂದು ವಾರದಿಂದ ಬಂದ ಭೀಕರ ಚಿತ್ತೆ ಮಳೆಯಿಂದ ಜಿಲ್ಲೆಯ ಜೀವನದಿ ಎಂದೇ ಖ್ಯಾತಿ ಪಡೆದಿರುವ ವೇದಾವತಿ ನದಿ ಮೈದುಂಬಿ ಹರಿಯುತ್ತಿದ್ದವಳು ಈಗ ಅಧಿಕಾರಿಗಳ ನಿರ್ಲಕ್ಷ್ಯ ತನದಿಂದ ಹಠಾತ್ ಬರಿದಾಗಿದ್ದಾಳೆ. ಇದಕ್ಕೆ ಪರಿಹಾರ ಹೇಗೆ ರೂಪಿಸಬೇಕು ಎಂಬ ತಳಮಳದಲ್ಲಿ ಅಧಿಕಾರಿಗಳು ಕಾಲ ಕಳೆಯುತ್ತಿದ್ದಾರೆ.
ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬ್ಯಾರೇಜ್ ನಿರ್ಮಿಸಲಾಗಿದ್ದು, ಅಲ್ಲಿಂದಲೇ ಪಟ್ಟಣಕ್ಕೆ ನೀರು ಸರಬರಾಜು ಆಗುತ್ತಿತ್ತು. ಬ್ಯಾರೇಜ್ ಮಳೆಗೆ ಕೊಚ್ಚಿ ಹೋದ ಪರಿಣಾಮ ಮುಂದೇನು ಎಂಬ ಚಿಂತೆ ಮನೆ ಮಾಡಿದೆ.
ಕಳೆದ ಒಂದು ವರೆ ತಿಂಗಳಿನಿಂದ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಪಣವಾಗಿತ್ತು. ಪಟ್ಟಣದಲ್ಲಿ ಅನೇಕ ವಾರ್ಡ್‍ಗಳಲ್ಲಿ ಮನೆಗಳ ಬೋರ್‍ವೆಲ್‍ಗಳು ಸಹ ಬತ್ತಿ ಹೋಗಿದ್ದವು. ಜನತೆ ನೀರಿಗಾಗಿ ಹಾಹಾಕಾರ ಪಡುವ ಸ್ಥಿತಿ ಒಂದು ಕಾಲದಲ್ಲಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಮೊನ್ನೆ ಬಂದ ಭೀಕರ ಚಿತ್ತೆ ಮಳೆಗೆ ಕೆಲ್ಲೋಡು ಧುಮುಕಿ ಹರಿಯುತ್ತಿದ್ದವಳು 55 ಸಾವಿರ ಕೋಟಿ ಲೀಟರ್ ನೀರು ಸಂಗ್ರಹಾ ಸಾಮರ್ಥ್ಯದ ಬ್ಯಾರೇಜ್ ಬರಿದಾಗುತ್ತಿರುವುದು ರೈತರ ಮುಖದಲ್ಲಿ ಬೇಸರವುಂಟುಮಾಡಿದೆ.
ವೇದಾವತಿ ತುಂಬಲು ಭದ್ರೆ ಹರಿದು ಬರಬೇಕಿತ್ತು, ಆದರೆ ಭೀಕರ ಮಳೆಯಿಂದಲೇ ವೇದಾವತಿ ಒಡಲು ತುಂಬಿತ್ತು. ಆದರೆ ಬ್ಯಾರೇಜ್ ಹೊಡೆದಿರುವುದರಿಂದ ಬ್ಯಾರೇಜ್ ಕಾಮಗಾರಿ ಮುಗಿದ ನಂತರವೇ ಭದ್ರೆಯನ್ನು ಹರಿಸಲಾಗುವುದು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದೆ, ಆದರೆ ಸೇತುವೆ ರಾಜ್ಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದೆ ಹೊಸದಾಗಿ ಸೇತುವೆ ನಿರ್ಮಾಣದ ಕಾಮಗಾರಿಯು ಹಳೇ ಸೇತುವೆ ಪಕ್ಕದಲ್ಲೇ ನಡೆಯುತ್ತಿತ್ತು ಅದೂ ಕೂಡ ಪೂರ್ತಿಯಾಗಿಲ್ಲ. ಈ ರೀತಿ ಕಾಮಗಾರಿ ನಡೆಯುವಾಗ ನದಿ ದಡದಲ್ಲಿ ಸಡಿಲಿಕೆಯಾಗಿತ್ತು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನದಿ ದಡಗಳನ್ನು ಕುಸಿಯದಂತೆ ಮಂಜಾಗೃತಿ ವಹಿಸಬೇಕಾಗಿತ್ತು, ಆದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ರೀತಿ ಅನಾಹುತ ಸಂಭವಿಸಲು ಕಾರಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ