ಹೊಳಲ್ಕೆರೆ:
ಬಡವರ ಅನ್ನಭಾಗ್ಯ ಎಂದೇ ಕರೆಯುವ ಇಂದಿರಾ ಕ್ಯಾಂಟೀನ್‍ನ್ನು 15ದಿನದೊಳಗೆ ಉದ್ಘಾಟನೆ ಮಾಡಬೇಕೆಂದು ಜಿಲ್ಲಾಧಿಕಾರಿ ವಿನೂತ್ ಪ್ರಿಯಾ ನವಂಬರ್ ತಿಂಗಳಿನಲ್ಲಿ ಹೊಳಲ್ಕೆರೆ ಪಟ್ಟಣಕ್ಕೆ ಭೇಟಿ ನೀಡಿದಾಗ ಪ.ಪಂಚಾಯಿತ ಮುಖ್ಯಾಧಿಕಾರಿಗೆ ಆದೇಶ ಮಾಡಿ 2 ತಿಂಗಳು ಕಳೆದರು ಇಂದಿರಾ ಕ್ಯಾಂಟೀನ್ ಭಾಗ್ಯ ಬಡವರಿಗೆ ಕೂಲಿಕಾರ್ಮಿಕರಿಗೆ ಇನ್ನು ಕನಸಾಗಿ ಉಳಿದಿದೆ.
ಜಿಲ್ಲಾಧಿಕಾರಿಗಳು ನೀಡಿದ ಆದೇಶವನ್ನು ಪರಿಪಾಲನೆ ಮಾಡುತ್ತೇವೆ ಎಂದು ಆ ಸಮಯದಲ್ಲಿ ತಿಳಿಸಿದ ಅಧಿಕಾರಿಗಳು ಅದರ ಬಗ್ಗೆ ಎಳ್ಳೆಷ್ಟು ಕಾಳಜಿ ವಹಿಸಿಲ್ಲ. ಜಿಲ್ಲಾಧಿಕಾರಿ ಆದೇಶಕ್ಕೆ ಕವಡೆ ಕಾಸು ಕಿಮ್ಮತಿಲ್ಲ ಎಂಬಂತಾಗಿದೆ.ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ರಾಜ್ಯದಲ್ಲಿ ಪ್ರಾರಂಭವಾದ ಇಂದಿರಾ ಕ್ಯಾಂಟೀನ್ ಬಹುತೇಕ ಎಲ್ಲಾ ಮಹಾನಗರ ಸೇರಿದಂತೆ ಜಿಲ್ಲಾ ಮತ್ತು ತಾಲ್ಲುಕು ಕೇಂದ್ರಗಳಲ್ಲಿ ತನ್ನ ಕಾರ್ಯಚಟು ವಟಿಕೆಯನ್ನು ಮುಂದುವರಿಸುತ್ತಿದೆ. ಆದರೆ ಹೊಳಲ್ಕೆರೆ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡ ಜರೂರಾಗಿ ನಿರ್ಮಾಣವಾಗಿ ಒಂದು ವರ್ಷ ಕಳೆದರು ಯಾವಾ ಅಧಿಕಾರಿಯು ಇದರ ಬಗ್ಗೆ ಗಮನ ನೀಡಿಲ್ಲ.
ಇಂದಿರಾ ಕ್ಯಾಂಟೀನ್ ಕಟ್ಟಡ ಮಾತ್ರ ತಾಲ್ಲುಕು ಕಚೇರಿಯ ಮುಂಭಾಗದಲ್ಲಿ ರಾರಾಜಿಸುತ್ತಿದೆ. ಆದರೆ ಬಡವರಿಗೆ ರಿಯಾಯಿತಿ ದರದಲ್ಲಿ ಊಟ ತಿಂಡಿ ವ್ಯವಸ್ಥೆ ಇನ್ನು ಮರಿಚಿಕೆಯಾಗಿದೆ. ಇಂದಿರಾ ಕ್ಯಾಂಟೀನ್ ಎಲ್ಲಾ ಕಡೆ ಪ್ರಾರಂಭವಾಗಿ ಆ ಭಾಗದ ಸಾರ್ವಜನಿಕರು ಅದರ ಉಪಯೋಗವನ್ನು ಪಡೆಯುತ್ತಿದ್ದಾರೆ. ಆದರೆ ಹೊಳಲ್ಕೆರೆ ತಾಲ್ಲುಕಿನ ನಾಗರೀಕರಿಗೆ ಇನ್ನು ಲಭಿಸಿಲ್ಲ ಮತ್ತು ಅಕ್ರಮ ಚಟುವಟಿಕೆಗಳ ತಾಣವಾಗುತ್ತ ದಾಪುಗಾಲಿಟ್ಟಿದೆ.
ಈ ಬಗ್ಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅವರನ್ನು ಕೇಳಿದರೆ ಇಂದಿರಾ ಕ್ಯಾಂಟೀನ್ ಸುತ್ತ ಕಾಂಪೌಂಡ್ ಕಟ್ಟಡ ಪ್ರಕ್ರಿಯೇ ಈಗಾಗಲೆ ಮುಗಿದಿದೆ ಜನವರಿ ಅಂತ್ಯದೊಳಗೆ ಕ್ಯಾಂಟೀನ್ ಪ್ರಾರಂಭ ಮಾಡುತ್ತೇವೆ ಎಂದು ಭರವಸೆ ನೀಡುತ್ತಾರೆ. ಆ ದಿನವನ್ನು ಬಡವರು ಕೂಲಿಕಾರ್ಮಿಕರು ರೈತರು ಕಾದು ನೋಡು ಸ್ಥಿತಿ ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ