ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾದ ಶಾಸಕರ ಆಹಾರ ಧಾನ್ಯ ವಿತರಣೆ

ಪಾವಗಡ

   ಕೊರೊನ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಣೆಯಾಗಿ ಒಂದು ತಿಂಗಳಿನಿಂದ ಯಾವುದೇ ಕೆಲಸ ಮತ್ತು ಆದಾಯವಿಲ್ಲದೆ ನರಳುತ್ತಿದ್ದ ಬಡಕುಟುಂಬಗಳಿಗೆ ಶಾಸಕ ವೆಂಕಟರಮಣಪ್ಪ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿದರು.

    ಪಟ್ಟಣದ ಪುರಸಭೆಯ ಆವರಣದಲ್ಲಿ ಮಂಗಳವಾರ ಪೌರಕಾರ್ಮಿಕರಿಗೆ ಐದು ಕೆ.ಜಿ ಅಕ್ಕಿ, 1 ಕೆಜಿ ಸಕ್ಕರೆ, 1 ಕೆಜಿ ಅಡಿಗೆ ಎಣ್ಣೆ ಹಾಗೂ ಇತರೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ಕೊರೊನ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಲಾಕ್‍ಡೌನ್ ಘೋಷಿಸಿದ ಬಳಿಕ ಅಸಂಘಟಿತ ವರ್ಗದ ಬದುಕು ನೆಲಕಚ್ಚಿದೆ. ಇಂತಹ ಸಂದರ್ಭದಲ್ಲಿ ಇವರ ನೆರವಿಗೆ ಧಾವಿಸಬೇಕೆಂಬ ಮಹದಾಸೆಯಿಂದ ವೈಯಕ್ತಿಕವಾಗಿ ಸುಮಾರು 4 ಸಾವಿರ ಜನರಿಗೆ ಆಹಾರ ಪದಾರ್ಥಗಳ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು

   ಶಾಸಕ ವೆಂಕಟರವಣಪ್ಪ 4 ಬಾರಿ ಕ್ಷೇತ್ರದ ಶಾಸಕರು ಹಾಗೂ ಎರಡು ಬಾರಿ ಸಚಿವರಾಗಿದ್ದಾರೆ. ಆದರೆ ಇಂದು ಅವರಿಗೆ ಮತ ನೀಡಿದ ಜನತೆ ಸಂಕಷ್ಟದಲ್ಲಿರುವ ವೇಳೆ ಹಾಲಿ ಶಾಸಕರಾಗಿ 5 ಕೆಜಿ ಅಕ್ಕಿ, ಇತರೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿರುವುದು ದುರಂತ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಒಗ್ಗಟಿನ ಪ್ರದರ್ಶನ ಮಾಡಿ, ಕಾರ್ಯಕರ್ತರು ಸಹಕಾರ ನೀಡಬೇಕೆಂದು ಕೈಗಳನ್ನು ಕುಲುಕಿಸಿಕೊಂಡು ಹಾಲಿ ಮತ್ತು ಮಾಜಿ ಶಾಸಕರು ಚುನಾವಣಾ ಪ್ರಚಾರ ಮಾಡಿದ್ದರು. ಆದರೆ ಇಂದು ತಾಲ್ಲೂಕು ಜನತೆ ಕೊರೊನಾ ವೈರಸ್‍ನಿಂದ ಜೀವನ ನಡೆಸಲು ಪರದಾಡುತ್ತಿದ್ದಾರೆ. ಪಕ್ಷ ರಹಿತವಾಗಿ ಬಡವರ ಜೀವನ ಮಟ್ಟ ಸುಧಾರಿಸಲು ಜನಪ್ರತಿನಿಧಿಗಳು ಯಾಕೆ ಕೆಲಸ ಮಾಡಬಾರದು? ಪಟ್ಟಣದ ಜನತೆಗೆ 5 ಕೆ.ಜಿ ಅಕ್ಕಿ, 1 ಕೆ.ಜಿ.ಎಣ್ಣೆ, 1 ಕೆ.ಜಿ.ಬೇಳೆ, 1 ಕೆ.ಜಿ.ಸಕ್ಕರೆಯನ್ನು ಕಿಟ್ ಮೂಲಕ ನೀಡಿದ್ದು, ಒಂದು ವಾರ ಮಾತ್ರ ಬಳಸಬಹುದಾದ ಆಹಾರ ಪದಾರ್ಥಗಳಾಗಿವೆ. ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಶಾಸಕರು ಈ ಕೆಲಸ ಮಾಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap