ಇದೇನು ಎಟಿಎಂ ಕೇಂದ್ರವೋ ಅಥವಾ ಕೆಸರು ಗದ್ದೆಯೋ…!

ತಿಪಟೂರು
    ತಾಲ್ಲೂಕಿನ ಮುಖ್ಯ ಕೇಂದ್ರವಾಗಿರುವ ಕಿಬ್ಬನಹಳ್ಳಿಯ ಭಾರತೀಯ ಸ್ಟೇಟ್ ಬ್ಯಾಂಕ್‍ನ ಎ.ಟಿ.ಎಂ ಕೇಂದ್ರವು ಸ್ವಚ್ಛತೆ ಇಲ್ಲದೆ ಗಬ್ಬು ನಾತವನ್ನು ಬೀರುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
     ತಾಲ್ಲೂಕಿನ ಕಿಬ್ಬನಹಳ್ಳಿ ಮುಖ್ಯವಾಗಿ ರಾಜ್ಯವನ್ನೇ ಸಂಪರ್ಕಿಸುವ ಮುಖ್ಯ ಕೊಂಡಿಯಾಗಿದ್ದು, ಪೂರ್ವಕ್ಕೆ ಬೆಂಗಳೂರು, ಪಶ್ಚಿಮಕ್ಕೆ ಶಿವಮೊಗ್ಗ, ಹಾಸನ, ಮಂಗಳೂರು, ಉತ್ತರಕ್ಕೆ ಬಳ್ಳಾರಿ, ಚಿತ್ರದುರ್ಗ ಮತ್ತು ದಕ್ಷಿಣಕ್ಕೆ ಮೈಸೂರು, ಮಂಡ್ಯವನ್ನು ಸಂಪರ್ಕಿಸುವ ಮುಖ್ಯವೃತ್ತವಾಗಿದೆ.  ಇಲ್ಲಿ ದಿನನಿತ್ಯ ಸಹಸ್ರಾರು ವಾಹನಗಳೂ ಸಂಚರಿಸುತ್ತವೆ.  ಹೆಚ್ಚಿನದಾಗಿ ಇದು ಕೆಎಸ್‍ಆರ್‍ಟಿಸಿ ಬಸ್‍ಗಳು ಊಟ-ತಿಂಡಿಗೆ ನಿಲ್ಲುವ ಕೇಂದ್ರವಾಗಿದೆ.
 
     ಇಲ್ಲಿನ ಎಟಿಎಂಗಳು ಇವರಿಗೆಲ್ಲಾ  ಉಪಯೋಗವಾಗ ಬೇಕು.  ಆದರೆ ಇಲ್ಲಿನ ಭಾರತೀಯ ಸ್ಟೇಟ್ ಬ್ಯಾಂಕ್‍ನ ಎಟಿಎಂ ಮಾತ್ರ ಎ.ಸಿ.ಯ ನೀರು, ಹರಿದ ಬಿಲ್‍ಗಳೂ ಮತ್ತು ಕೆಸರನ್ನು ಮೆತ್ತಿಕೊಂಡು ಒಳಗೆ ಹೋಗಲು ಅಸಹ್ಯವನ್ನುಂಟು ಮಾಡು ವಂತಿದೆ. ಆದರೂ ಸಹ ಸಂಬಂಧಿಸಿದವರು ತಲೆ ಕೆಡಿಸಿಕೊಳ್ಳುತ್ತಿಲ್ಲ್ಲ. ಮುಖ್ಯವಾಗಿ  ಸಾರ್ವಜನಿಕರ ಸ್ವತ್ತಾದ ಇದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಸಾರ್ವಜನಿಕರ ಕರ್ತವ್ಯವೂ ಆಗಿದ್ದು, ತಾವು ಬಳಸಿದ ನಂತರ ಬರುವ ರಸೀದಿಯನ್ನು ಎಲ್ಲೆಂದರಲ್ಲಿ ಹಾಕದೆ ನೇರವಾಗಿ  ಕಸದ ಬುಟ್ಟಿಗೆ ಹಾಕಿದರೂ ಸಹ ಸ್ವಲ್ಪಮಟ್ಟಿಗೆ ಸ್ವಚ್ಛವಾಗಿರುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link