ತುಮಕೂರು
ಎರಡು ವರ್ಷಗಳಾದರೂ ಕಾಮಗಾರಿ ಹಂತದಲ್ಲಿದ್ದ ಮನೆಗಳು ಪೂರ್ಣಗೊಳ್ಳದೆ ನಿವೇಶನಗಳಿಲ್ಲದೆ ಗುಡಿಸಲುಗಳನ್ನು ಹಾಕಿಕೊಂಡು ವಾಸ ಮಾಡುತ್ತಿದ್ದ ಜನರ ಪರಿಸ್ಥಿತಿಯನ್ನು ಸೆ.9ರಂದು ನಿವೇಶನಗಳಿಲ್ಲದೆ ಪರದಾಡುತ್ತಿರುವ ನಿವಾಸಿಗಳು ಎಂಬ ತಲೆಬರಹದಡಿ ವರದಿ ಪ್ರಕಟಗೊಂಡಿದ್ದು, ವರದಿಯಿಂದ ಎಚ್ಚೆತ್ತ ಕೊಳಚೆ ಮಂಡಳಿ ಎಂಜಿನಿಯರ್‍ಗಳು ಸೆ.16ರಿಂದ ಕೆಲಸ ಪ್ರಾರಂಭ ಮಾಡಿಸುತ್ತಿದ್ದಾರೆ.
ಕಳೆದ 2 ವರ್ಷಗಳಿಂದ ಮನೆಗಳ ನಿರ್ಮಾಣ ಕಾಮಗಾರಿ ಮಾಡಲಾಗುತ್ತಿತ್ತು. ಶೇ.75ರಷ್ಟು ಕಾಮಗಾರಿ ಪೂರ್ಣಗೊಂಡ ನಂತರ ಬಿಲ್‍ಗಳನ್ನು ನೀಡಿಲ್ಲ ಎಂಬ ಕಾರಣಕ್ಕೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಇದ್ದ ಮನೆಯನ್ನೂ ಕಳೆದುಕೊಂಡು, ಹೊಸ ಮನೆಯ ಕಾಮಗಾರಿಯೂ ಪೂರ್ಣವಾಗದೆ, ಅರ್ಹ ಫಲಾನುಭವಿಗಳು ಖಾಲಿ ಸ್ಥಳದಲ್ಲಿ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದರು.
ಅವರ ಸಮಸ್ಯೆ ಬಗ್ಗೆ ಸ್ಥಳೀಯ ಪಾಲಿಕೆ ಸದಸ್ಯರಿಗೆ ಕೇಳಿದರೆ ಸರಿಯಾದ ಉತ್ತರ ಸಿಗುತ್ತಿರಲಿಲ್ಲ. ಅಧಿಕಾರಿಗಳಿಗೆ ಕೇಳಿದರೂ ಯಾವುದೇ ಮಾಹಿತಿ ದೊರೆಯುತ್ತಿರಲಿಲ್ಲ. ಕೊನೆಗೆ ಮನೆಗಳನ್ನು ನಿರ್ಮಾಣ ಕೆಲಸ ನೋಡಿಕೊಳ್ಳುತ್ತಿದ್ದ ವ್ಯಕ್ತಿಗೆ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಗುತ್ತಿಗೆದಾರರು ಯಾರು ಎಂಬುದರ ಮಾಹಿತಿ ಅವರಿಗಿಲ್ಲ. ಹೀಗಿದ್ದಾಗ ಅವರ ಸಮಸ್ಯೆಗೆ ಪರಿಹಾರ ಸಿಗುವುದಾದರೂ ಹೇಗೆ ಎಂಬ ಆಯೋಮಯ ಪರಿಸ್ಥಿತಿಯಲ್ಲಿ ವಾಸ ಮಾಡುತ್ತಿದ್ದರು.
ಕೊನೆಗೆ ಸಮಸ್ಯೆ ಬಗ್ಗೆ ನಮ್ಮ ಪ್ರಜಾಪ್ರಗತಿ ಪತ್ರಿಕೆಗೆ ತಿಳಿಸಿದರು. ನಾವು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ಗುತ್ತಿಗೆದಾರರೊಂದಿಗೆ ಮಾತನಾಡಿ, ಸಮಸ್ಯೆಯ ತೀವ್ರತೆಯ ಬಗ್ಗೆ ವಿಸ್ತøತ ವರದಿ ಪ್ರಕಟ ಮಾಡಿದ್ದೆವು. ಈ ವರದಿಗೆ ಎಚ್ಚೆತ್ತ ಅಧಿಕಾರಿಗಳು, ಸಂಬಂಧಪಟ್ಟ ಎಂಜಿನಿಯರ್‍ಗಳು ಆದಷ್ಟು ಶೀಘ್ರದಲ್ಲಿ ಕೆಲಸ ಪ್ರಾರಂಭ ಮಾಡುವುದಾಗಿ ತಿಳಿಸಿದ್ದರು. ಅಂತೆಯೇ ಇದೀಗ ಸೆ.16ರಿಂದ ಕೆಲಸ ಪ್ರಾರಂಭ ಮಾಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪೂರ್ಣಗೊಳಿಸಲು ಎಲ್ಲಾ ತಯಾರಿಗಳನ್ನು ಮಾಡುತ್ತಿದ್ದಾರೆ. ಇದು ಪ್ರಜಾಪ್ರಗತಿ ವರದಿಗೆ ಫಲಶೃತಿಯಾಗಿದ್ದು ಇದಕ್ಕೆ ಸ್ಥಳೀಯ ನಿವಾಸಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ