ಬೆಂಗಳೂರು
ಬೀದಿ ದೀಪ ಆರಿಸಿ ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿ ದೇವರ ಆಭರಣಗಳನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ದೊಡ್ಡಬಳ್ಳಾಪುರ ನಗರದ ಗಾಂಧಿ ವೃತ್ತದಲ್ಲಿರುವ ಹೊಸ ಕರಗದ ದೇವಸ್ಥಾನಕ್ಕೆ ಭಾನುವಾರ ಮುಂಜಾನೆ ನುಗ್ಗಿರುವ ಕಳ್ಳರು ಕಳ್ಳತನ ಮಾಡಿ ಪರಾರಿಯಾಗಿದ್ದು, ಬೆಳಿಗ್ಗೆ ಎಂದಿನಂತೆ ದೇವರ ಪೂಜೆ ಮಾಡಲು ಅರ್ಚಕರು ದೇವಸ್ಥಾನಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ದೇವಸ್ಥಾನದ ಕಾಂಪೌಂಡ್ ಹಾರಿ ಬಂದ ಕಳ್ಳ ಎಡಬದಿಯ ಗೇಟಿನ ಬೀಗ ಒಡೆದು ಒಳ ನುಗ್ಗಿದ್ದಾನೆ. ಹುಂಡಿ ಒಡೆದು ಹಣ ದೋಚಿದ್ದಲ್ಲದೇ ಗರ್ಭಗುಡಿಯ ದೇವರ ಮೇಲಿರುವ ಎರಡು ತಾಳಿ, ಕಿರೀಟ, ಇನ್ನಿತರ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳ ದೋಚಿದ್ದಾನೆ.
ಕಳವು ಮಾಡುವ ಮುನ್ನ ಚಾಲಾಕಿ ಕಳ್ಳ ದೇವಸ್ಥಾನದ ಬೀದಿಗಳಲ್ಲಿರುವ ಬೀದಿ ದೀಪ ಆರಿಸಿದ್ದಾನೆ. ಈ ದೃಶ್ಯಗಳು ಅಲ್ಲಿನ ಕೇಬಲ್ ಬಾಬು ಎಂಬುವವರ ಮನೆ ಆಚೆ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿವೆ. ಇನ್ನು ಮಾಹಿತಿ ಪಡೆದ ದೊಡ್ಡಬಳ್ಳಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
