ಸಂವಿಧಾನವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳುವುದು ಅವಶ್ಯಕ

ಹಾವೇರಿ :

        ಭಾರತ ದೇಶದ ಮಾರ್ಗಸೂಚಿ,ಕಾನೂನುಗಳ ಸಂಗ್ರಹವಾಗಿರುವ ಪ್ರಜಾಪ್ರಭುತ್ವದ ದಾರಿದ್ವೀಪವಾದ ಸಂವಿಧಾನವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳುವುದು ಅವಶ್ಯಕ ಎಂದು ಯುವ ಲೇಖಕ ಲಿಂಗರಾಜ ಸೊಟ್ಟಪ್ಪನವರ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಸಂವಿಧಾನ ಓದು ಅಭಿಯಾನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಹಾಗೂ ಪತ್ರಿಕಾಗೋಷ್ಠಿ ಉದ್ದೇಶಿಸಿ ಮತನಾಡಿದ ಅವರು ವಿಶ್ವದ ದೊಡ್ಡ ಪ್ರಜಾಪ್ರಭುತ್ವಕ್ಕೆ ನಾದಿಯಾದ ಭಾರತದ ಸಂವಿಧಾನ ಎಲ್ಲರಿಗೂ ಸಮ ಅವಕಾಶ ನೀಡಿದ ಎಲ್ಲ ವರ್ಗದ ಜನರ ಪ್ರಗತಿಗೆ ಉದ್ದೇಶಿತ ಕಾನೂನುಗಳನ್ನು ಹೊಂದಿದ್ದು, ಭಾರತದ ಸಂವಿಧಾನವನ್ನು ಸರ್ವರೂ ಅರ್ಥ ಮಾಡಿಕೊಂಡು ಅದರ ಅನುಷ್ಠಾನಕ್ಕೆ ನಾವೇಲ್ಲರೂ ಬದ್ದರಾಗಬೇಕಾಗಿದೆ.

           ಕಾಲ ಕಳೆದಂತೆ ಹಲವಾರು ತಿದ್ದುಪಡೆಗೆ ಒಳಗಾಗಿರುವ ಸಂವಿಧಾನವನ್ನು ಓದಿಕೊಳ್ಳುವುದು ಅವಶ್ಯಕವಾಗಿರುವುದರಿಂದ ಸಮಮನಸ್ಕರು ಹಾಗೂ ವಿವಿಧ ಸಂಘಟನೆಗಳ ಸಂಯೋಗದೊಂದಿಗೆ ಸಂವಿಧಾನ ಓದು ಅಭಿಯಾನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಉದ್ಘಾಟನೆ ಹಾಗೂ ಪುಸ್ತಕ ಬಿಡುಗಡೆಯನ್ನು ಡಿ,11 ರಂದು ಮಂಗಳವಾರ ನಗರದ ಹುಕ್ಕೇರಿಮಠ ಆವರಣದಲ್ಲಿರುವ ಶ್ರೀ ರಾಚೋಟೇಶ್ವರ ಪ.ಪೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬೆಳಿಗ್ಗೆ 10 ಘಂಟೆಗೆ ಆಯೋಜಿಸಲಾಗಿದೆ ಜಿಲ್ಲೆಯ ಎಲ್ಲ ಜನರು ಇದರ ಸದುಪಯೋಗ ಪಡೆದುಕೊಳ್ಳುವಂತಾಗಬೇಕು ಎಂದರು.

           ಭಾರತ ಪ್ರಜಾಸತ್ತಾತ್ಮಕ ಯುವಜನ ಪೆಡರೇಷನ್ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ ಇಂದು ದೇಶಕ್ಕೆ ಪೂರಕವಾದ ಸಂವಿಧಾನವನ್ನು ಹಲವರು ಬದಲಾಯಿಸಬೇಕು ಎಂದು ಹೇಳುವ ಈ ಸಮಯದಲ್ಲಿ ಅದನ್ನು ಓದುವ ಮೂಲಕ ಅವರ ಅರ್ಥ ಮಾಡಿಸಬೇಕು ಎಂಬ ಉದ್ದೇಶದಿಂದ ವಿದ್ಯಾರ್ಥಿ,ಯುವಜನ ಹಾಗೂ ಭಾರತೀಯ ಎಲ್ಲರಿಗೂ ಸಂವಿಧಾನ ಓದು ಅಭಿಯಾನದ ಮೂಲಕ ದೇಶದ ಅಖಂಡತೆ ಹಾಗೂ ಭಾತೃತ್ವದ ಭಾವನೆಯನ್ನು ಎಲ್ಲರಲ್ಲಿಯೂ ಬೆಳಸಬೇಕಾಗಿದೆ ಎಂದರು. ಅಭಿಯಾನದ ಉದ್ಘಾಟನೆಯನ್ನು ನಿವೃತ್ತ ನ್ಯಾಯಮೂರ್ತಿಗಳಾದ ಎಚ್‍ಎನ್ ನಾಗಮೋಹನದಾಸ್ ನೆರವೆರಿಸುವರು.ಜಿಲ್ಲಾಧಿಕಾರಿಗಳಾದ ಡಾ. ವೇಂಕಟೇಶ ಎಂವ್ಹಿಯವರು ಪುಸ್ತಕ ಬಿಡುಗಡೆ ಮಾಡುವರು.

          ಸಾಹಿತಿ ಸತೀಶ ಕುಲಕರ್ಣಿ ಅಧ್ಯಕ್ಷತೆ ವಹಿಸುವರು.ಸಂವಿಧಾನ ಓದು ಅಭಿಯಾನದ ರಾಜ್ಯ ಸಂಚಾಲಕ ಡಾ. ವಿಠ್ಠಲ ಭಂಡಾರಿ ಪ್ರಾಸ್ತಾವಿಕ ಮಾತನಾಡುವರು.ಮುಖ್ಯ ಅಥಿತಿಗಳಾಗಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಶ್ರೀಮತಿ ಡಾ.ಬಿವ್ಹಿ ಚೈತ್ರಾ.ವಕೀಲರ ಸಂಘದ ಜಿಲ್ಲಾಧ್ಯಕ್ಷ ಕೆಸಿ ಪಾವಲಿ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕರ್ತರು ವಿವಿಧ ಸಂಘಟನೆಯ ಮುಖಂಡರು ವಕೀಲರು ಭಾಗವಹಿಸುವರು.ಈ ಸಂವಿಧಾನ ಓದು ಅಭಿಯಾನ ಉಚಿತವಾಗಿದ್ದು, ಇದರಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳುವಂತಾಗಬೇಕೆಂದು ಹೇಳಿದರು.

          ಈ ಸಂದರ್ಭದಲ್ಲಿ ವಕೀಲರ ಸಂಘದ ಜಿಲ್ಲಾ ಕಾರ್ಯದರ್ಶಿ ಪಿಎಂ ಬೆನ್ನೂರ.ವಕೀಲರಾದ ನಾರಾಯಣ ಕಾಳೆ.ಸಾಮಾಜಿಕ ಕಾರ್ಯಕರ್ತರಾದ ಇಸ್ಮಾಯಿಲ್ ಬುಡಂದಿ.ಹೊನ್ನಪ್ಪ ಮರೆಮ್ಮನವರ.ಹಶೀನಾ,ಪರಿಮಳಾ ಜೈನ್ ಎಸ್‍ಎಫ್‍ಐ ಬಸವರಾಜ ಭೋವಿ ಅನೇಕರು ಇದ್ದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link