ತಿಪಟೂರು :
ನಗರದ ಗುರಪ್ಪನಕಟ್ಟೆ ವಾರ್ಡ್‍ನಲ್ಲಿ ಚರಂಡಿ ಕಟ್ಟಿಕೊಂಡು, ಕೊಳೆತ ವಾಸನೆ ಬರುತ್ತಿದ್ದರೂ ಸಹ ನಗರಸಭೆ ಸದಸ್ಯರಾಗಲಿ, ನಗರಸಭೆಯವರಾಗಲಿ ನಮ್ಮ ಸಮಸ್ಯೆಗಳ ಬಗ್ಗೆ ಗಮನಿಸುತ್ತಿಲ್ಲವೆಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.
ಈ ಪ್ರದೇಶದಲ್ಲಿ ಚರಂಡಿಗಳು ತುಂಬಿ ಕೊಳಚೆನೀರು ರಸ್ತೆಯಲ್ಲಿ ಹರಿಯುತ್ತಿವೆ ಜೊತೆಗೆ ಕುಡಿಯುವ ನೀರನ ಪೈಪ್‍ಗಳು ಸಹ ಈ ಕೊಳಚೆ ನೀರಿನಲ್ಲಿ ಇದ್ದು ಕೊಳಚೆನೀರು ಕುಡಿಯುವ ನೀರಿನೊಂದಿಗೆ ಬೆರೆಕೆಯಾಗಿ ನೀರನ್ನು ಕುಡಿಯುವುದಿರಲಿ ಬಳಸಲು ಸಹ ಯೋಗ್ಯವಾಗಿಲ್ಲ. ಇನ್ನು ಈ ನೀರನ್ನು ಕುಡಿದರೆ ಇಲ್ಲದ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನಕೊಟ್ಟಂತಾಗುತ್ತದೆ ಎಂದ ಸ್ಥಳೀಯರು ಶಿಘ್ರವಾಗಿ ನಗರಭೆಯವರು ಕೊಳಕು ಚರಂಡಿಳನ್ನು ಶುದ್ದಗೊಳಿಸಿ ನಮ್ಮೆಲ್ಲರ ಆರೋಗ್ಯವನ್ನು ಕಾಪಾಡ ಬೇಕೆಂದು ಆಗ್ರಹಿಸಿದ್ದಾರೆ.