ತುಮಕೂರು:-
ಮನೆಗೆ ಬರ್ತಿನಿ ಅಂತಾ ಜೆ.ಸಿ. ಮಾಧುಸ್ವಾಮಿಗೆ ಕರೆ ಮಾಡಿದ್ದೆ. ಆದರೆ ಅವರು ಮನೆಗೆ ಬರಬೇಡ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎಂದು ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಹೇಳಿದರು.
ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗಸ್ವಾಮೀಜಿ ಆಶೀರ್ವಾದ ಪಡೆದ ಬಳಿಕ ಮಾಧ್ಯಮಕ್ಕೆ ಮಾತನಾಡಿದ ಅವರು, ನಾನು ತಂಗಿ ಮಾತಾಡಿಸಿಕೊಂಡು ಹೋಗುತ್ತೇನೆ ಎಂದೆ. ಬರಬೇಡ ಅಂದರು. ಅವರಿಗೂ ದುಗುಡು ಕಡಿಮೆ ಆಗಲಿ, ಆಮೇಲೆ ಹೋಗ್ತಿನಿ. ದೂರುವಾಣಿ ಕರೆ ಮಾಡಿದಾಗ ಸ್ವಲ್ಪ ಅಸಮಾಧಾನ ವ್ಯಕ್ತಪಡಿಸಿದರು ಎಂದರು.
ತುಮಕೂರುಗೆ ಬರಬೇಕು ಅಂತ ಬಯಸಿರಲಿಲ್ಲ. ಪ್ರಕೃತಿ, ಜಿಲ್ಲೆಯ ಜನರ ಇಚ್ಛೆ. ಹೈಕಮಾಂಡ್ ಕಳುಹಿಸಿದ್ದಾರೆ. ಪರಮಪೂಜ್ಯ ಶ್ರೀಗಳ ಗದ್ದುಗೆ ದರ್ಶನ ಪಡೆದು ಆಶಿರ್ವಾದ ಪಡೆದಿದ್ದೇನೆ. ನಿನ್ನೆ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದೆ. ಯಡಿಯೂರಪ್ಪ ಅವರ ಮನೆಗೆ ಹೋಗಿದ್ದೆ ಎಂದರು.
ತುಮಕೂರು ಜಿಲ್ಲೆಗೆ ಬಂದಾಗ ಮುಖಂಡರು, ಶಾಸಕರು ನಾಯಕರು ಬಿಜೆಪಿ ಕಚೇರಿಗೆ ಹೋಗುವುದು ಸಂಪ್ರದಾಯ. ಅದರಂತೆ ಇಂದು ಬಿಜೆಪಿ ಕಚೇರಿಗೆ ಹೋಗುವ ಕಾರ್ಯ ಕ್ರಮ ಹಮ್ಮಿಕೊಂಡಿದ್ದೇನೆ.ನಾನು ಬರಬೇಕು ಅಂತಹ ಈ ಭಾಗದ ಜನರ ತೀರ್ಮಾನ ಮಾಡಿದ್ದಾರೆ.
ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ತುಮಕೂರು ಕೂಡ ಸೇರ್ಪಡೆಯಾಬೇಕು. ತುಮಕೂರು ಸಹ ವಾರಣಾಸಿಯಂತೆ ಶೇ.10ರಷ್ಟು ಬದಲಾವಣೆ ಆಗಬೇಕು
ತುಮಕೂರು ಅಭಿವೃದ್ಧಿಗೆ ಶ್ರಮಿಸುತ್ತೇನೆ. ತುಮಕೂರು ಟು ಬೆಂಗಳೂರು ಹೈವೆ ಮೇಲ್ಸೇತುವೆ ಮಾಡುವ ಸಂಕಲ್ಪ ಮಾಡಿದ್ದೇನೆ. ನಾನು ಬಂದಪುಟ್ಟ ಹೋದ ಪುಟ್ಟ ಅಲ್ಲ ಅಂತಾಗಬಾರದು ಎಂದರು.
ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಜೊತೆ ಒಂದು ಗಂಟೆ ಚರ್ಚೆ ಮಾಡಿದ್ದೇನೆ.
ಒಟ್ಟಾಗಿ ಸೇರಿ ಮೈತ್ರಿ ಕೆಲಸ ಮಾಡುತ್ತೇವೆ. ತುಮಕೂರು ನಾನು ಬಯಸಿದ್ದಲ್ಲ ವಿಧಿ ನಿಯಮ ಪ್ರಕೃತಿ ನಿಯಮ. ನನ್ನ ಆಸೆ ಬಂದಿದ್ದೇನೆ. ವಾರಾಣಾಸಿಯ 10 ಬದಲಾವಣೆ ಮಾಡುತ್ತೇವೆ. ಸ್ಮಾರ್ಟ್ ಸಿಟಿ ತುಮಕೂರು ಬೆಳೆಯುತ್ತಿದೆ. ಬೆಂಗಳೂರು ಅನುಕೂಲವಾದ ಜಿಲ್ಲೆ. ಗೋವಿಂದರಾಜ, ಚಾಮರಾಜನಗರ ಮೈಸೂರು ಹೀಗೆ ಕೆಲಸ ಮಾಡಿದ್ದೇನೆ. ಜಿಲ್ಲೆಯ ಆಶೀರ್ವಾದ ..ಇಲ್ಲಿಯೂ ಕೆಲಸ ಮಾಡಬೇಕೆಂಬುದು ಜನರ ಇಚ್ಛೆ. ಬಿಜೆಪಿ ಬುದ್ದಿ ಜೀವ ಪಕ್ಷ. ಜಿಲ್ಲೆಯಲ್ಲಿನ ಅಸಮಾಧಾನ ನಾವು ನಾವು ಸರಿಮಾಡಿಕೊಳ್ಳುತ್ತೇವೆ. ಮಾಧುಸ್ವಾಮಿ ಯಾವತ್ತು ಸಮಾಧಾನಕ್ಕೆ ಬರುತ್ತಾರೋ ಅಂದು ಹೋಗುತ್ತೇನೆ. ಇವತ್ತು ಮಾಧುಸ್ವಾಮಿ ಹೋಗುತ್ತಿಲ್ಲ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ