ಅಗರಬತ್ತಿ ಉದ್ಯಮಕ್ಕೆ ಉತ್ತಮ ಅವಕಾಶ

ದಾವಣಗೆರೆ:

       ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಡಿ ಶೇ.90ರಷ್ಟು ಸಹಾಯಧನ ಪಡೆಯಲು 36 ಉದ್ಯಮಿಗಳ ಕ್ಲಸ್ಟರ್ ರಚಿಸಬೇಕಿದ್ದು, ಶೇ.10ರಷ್ಟು ಹಣ ಹೂಡಿಕೆ ಮಾಡಬಲ್ಲ ಉದ್ಯಮಿಗಳು ಇದರ ಪ್ರಯೋಜನ ಪಡೆಯಬೇಕೆಂದು ಬಾಬಾ ಅಗರಬತ್ತಿ ಕಂಪನಿ ಮಾಲೀಕ ಶಿವಕುಮಾರ ಮನವಿ ಮಾಡಿದರು.

       ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಅಗರಬತ್ತಿ ಸೇರಿದಂತೆ ಸಣ್ಣ ಉದ್ಯಮಗಳಿಗೆ ಬೇಕಾಗುವ ಯಂತ್ರೋಪಕರಣ, ಕಚ್ಚಾವಸ್ತು, ಬಿಡಿ ಭಾಗಗಳಿಗೆ ಬೆಂಗಳೂರಿಗೆ ಹೋಗಿಬರಬೇಕಿದೆ. 36 ಜನರ ಕ್ಲಸ್ಟರ್ ಮಾಡಿಕೊಂಡಲ್ಲಿ ದಾವಣಗೆರೆ ಯಲ್ಲೇ ಅವೆಲ್ಲವೂ ಸಿಗುವ ಜೊತೆಗೆ ಉತ್ತರ

       ಕರ್ನಾಟಕ ಭಾಗಕ್ಕೂ ಪೂರೈಸಬಹುದಾಗಿದೆ. 20 ಕೋಟಿ ರೂ.ಗಳ ಸೌಲಭ್ಯ ಕೇಂದ್ರ ಸ್ಥಾಪಿಸಿದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ.90 ಸಹಾಯಧನ ನೀಡಲಿದ್ದು, ಇನ್ನುಳಿದ ಶೇ.10ರಷ್ಟು ಹಣವನ್ನು ಫಲಾನುಭವಿಗಳು ಭರಿಸಬೇಕು. ಅದ್ದರಿಂದ ಈಗಾಗಲೇ ಉದ್ಯಮದಲ್ಲಿ ತೊಡಗಿರುವವರು ಅಥವಾ ಹೊಸ ಉದ್ಯಮಿಗಳು ಮುಂದೆ ಬಂದಲ್ಲಿ ಕ್ಲಸ್ಟರ್ ರಚನೆ ಸಾಧ್ಯವಾಗಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂ:91088 40479 ಸಂಪರ್ಕಿಸುವಂತೆ ಕೋರಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap