ಒಂದು ಕೈಯಿಂದ ಚೆಪ್ಪಾಳೆ ಹೊಡೆಯಲು ಸಾಧ್ಯವಿಲ್ಲ : ಹರ್ಷಿಕಾ ಪೊಣ್ಣಚ್ಚ

ಬೆಂಗಳೂರು

      ಮೀಟೂ ಹೆಸರಿನಲ್ಲಿ ಯಾರೊಬ್ಬರ ಹೆಸರಿಗೂ ಮಸಿ ಬಳಿಯಬಾರದು. ಒಂದು ಕೈಯಿಂದ ಚೆಪ್ಪಾಳೆ ಹೊಡೆಯಲು ಸಾಧ್ಯವಿಲ್ಲ ಎಂದು ಬಾಲಿವುಡ್ ನಟಿ ಹರ್ಷಿಕಾ ಪೊಣ್ಣಚ್ಚ ಇಂದಿಲ್ಲಿ ಮಾರ್ಮಿಕವಾಗಿ ಹೇಳಿದ್ದಾರೆ.

      ಭಾರತದ ಅತಿ ದೊಡ್ಡ ಜುವೆಲ್ಸ್ ಆಫ್ ಇಂಡಿಯಾ ಚಿಲ್ಲರೆ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸೆಂಟ್‍ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ ಚಾಲನೆ ನೀಡಿದ ಅವರು, ಒಂದು ಕೈಯಿಂದ ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ. ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ ಸಪ್ಪಳ ಕೇಳುತ್ತದೆ. ಆದರೆ ಪ್ರಚಾರಕ್ಕಾಗಿ ಯಾರೊಬ್ಬರ ಹೆಸರಿಗೂ ಮಸಿ ಬಳಿಯಬಾರದು ಎಂದರು.

       ಚಿತ್ರರಂಗದಲ್ಲಿ ತೊಂದರೆಯಾದರೆ ಚಿತ್ರೋದ್ಯಮ ಬಿಟ್ಟು ಹೋಗುವುದು ಸೂಕ್ತ. ಆದರೆ ಒಂದಂತೂ ಸತ್ಯ ಚಿತ್ರರಂದಲ್ಲಿ ಹೆಸರು ಮಾಡಲು ಕನಿಷ್ಠ 15 ವರ್ಷ ಬೇಕು. ಆದರೆ ಹೆಸರು ಹಾಳಾಗಲು ಒಂದು ಕ್ಷಣ ಸಾಕು ಎಂದು ಮಾರ್ಮಿಕವಾಗಿ ನುಡಿದರು.

       ನನಗೂ ಬಾಲಿವುಡ್ ಸಿನಿಮಾದಲ್ಲಿ ನಟಿಸಲು ಅವಕಾಶ ಬಂದಿತ್ತು. ಅದರಲ್ಲಿ ನನಗೂ ಮೀಟೂ ತರಹ ಆಫರ್ ಸಹ ಇತ್ತು. ಹೀಗಾಗಿ ನಾನು ಬಾಲಿವುಡ್ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಳ್ಳಲಿಲ್ಲ ಎಂದು ತಮಗಾದ ಕಹಿ ಅನುಭವವನ್ನು ಹರ್ಷಿಕಾ ಪೊಣ್ಣಚ್ಚ ವಿವರಿಸಿದರು.

       ನಾವು ಬೇಡ ಎಂದರೆ ಯಾರು ಚಿತ್ರರಂಗದಲ್ಲಿ ಬಲವಂತ ಮಾಡುವುದಿಲ್ಲ. ಕೆಲ ನಟಿಯರು ವಿದೇಶಕ್ಕೆ ಹೋಗಿ ಗಣ್ಯವ್ಯಕ್ತಿಗಳಿಂದ ಉಪಯೋಗ ಪಡೆದುಕೊಳ್ಳುತ್ತಾರೆ. ಸಿನಿಮಾನು ಬೇಕು, ಪ್ರಚಾರನೂ ಬೇಕು ಬಳಿಕ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟವರ ಬಗ್ಗೆಯೇ ಕೀಳಾಗಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

       ನನ್ನ ಹೇಳಿಕೆಯಿಂದ ನನಗೂ ಬೆದರಿಕೆ ಕರೆಗಳು ಬರಬಹುದು. ಆದರೆ ನಾನು ಅದಕ್ಕೆಲ್ಲಾ ಹೆದರುವುದಿಲ್ಲ. ನಾನು ಒಟ್ಟಾರೆ ಚಿತ್ರರಂಗದ ಪರ ಇರುವುದಾಗಿ ತಿಳಿಸಿದರು.

       ಇದಕ್ಕೂ ಮುನ್ನ ಅವರು ದೇಶದ ವಿವಿಧ ಭಾಗಗಳ ವೈವಿಧ್ಯಮಯ ಸಂಸ್ಕತಿಯ ಸೊಗಡನ್ನು ಪ್ರತಿಬಿಂಬಿಸುವ ವೈವಿಧ್ಯಮಯ ಆಭರಣಗಳ ಮೇಳದಲ್ಲಿ ಪಾಲ್ಗೊಂಡು ಮೆರಗು ಹೆಚ್ಚಿಸಿದರು. ದೇಶದ 125ಕ್ಕೂ ಹೆಚ್ಚು ಆಭರಣ ವ್ಯಾಪಾರಿಗಳು ತಮ್ಮ ವೈವಿಧ್ಯಮಯ ವಡೆವೆಗಳನ್ನು ಪ್ರದರ್ಶಿಸುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap