ಚೆಕ್ ಪೋಸ್ಟ್‍ಗಳಲ್ಲಿ ಮೂಲಸೌಕರ್ಯವಿಲ್ಲ

ಹುಳಿಯಾರು

       ಲೋಕಸಭಾ ಚುನಾಚಣೆಯ ಹಿನ್ನೆಲೆಯಲ್ಲಿ ಹುಳಿಯಾರು ಹೋಬಳಿಯ ಎರಡು ಕಡೆ ಚೆಕ್‍ಪೋಸ್ಟ್‍ಗಳನ್ನು ತೆರೆಯಲಾಗಿದ್ದು ಈ ಎರಡೂ ಚೆಕ್ ಪೋಸ್ಟ್‍ಗಳಲ್ಲಿ ಮೂಲ ಸೌಕರ್ಯಗಳ ಸಮಸ್ಯೆ ಎದ್ದು ಕಾಣುತ್ತಿದೆ.

       ಹೌದು ಹುಳಿಯಾರು ಹೋಬಳಿಯ ಯಳನಾಡು ಮತ್ತು ಕೋಡಿಪಾಳ್ಯದಲ್ಲಿ ಎರಡು ಚೆಕ್ ಪೋಸ್ಟ್‍ಗಳನ್ನು ತೆರೆದಿದ್ದು ಈ ಚೆಕ್‍ಪೋಸ್ಟ್‍ಗಳು 24*7 ಕಾರ್ಯನಿರ್ವಹಿಸುತ್ತವೆ. ಈ ಚೆಕ್‍ಪೋಸ್ಟ್‍ನಲ್ಲಿ ಪೊಲೀಸ್, ಅಬಕಾರಿ, ಕಂದಾಯ, ಕೃಷಿ ಇಲಾಖೆಗಳ ಸಿಬ್ಬಂಧಿ ಜೊತೆ ಒಬ್ಬರು ಉಪನ್ಯಾಸಕರನ್ನು ನಿಯೋಜಿಸಿರುತ್ತಾರೆ.

       ಇವರೆಲ್ಲರೂ ಈ ಮಾರ್ಗದಲ್ಲಿ ಬರುವ ವಾಹನಗಳನ್ನು ತಪಾಸಣೆ ಮಾಡುವುದು ನಿತ್ಯದ ಕೆಲಸವಾಗಿದ್ದು ಈ ಎರಡೂ ಮಾರ್ಗದಲ್ಲೂ ವಾಹನ ಸಂಚಾರ ವಿರಳವಾಗಿರುತ್ತದೆ. ಆದರೆ ವಾಹನಗಳು ಬಾರದಿದ್ದ ಸಂದರ್ಭದಲ್ಲಿಯಾಗಲೀ, ನಿಂತೂ ನಿಂತೂ ಸಾಕಾದಾಗ ಕುಳಿತುಕೊಳ್ಳುವುದಕ್ಕಾಗಲಿ ಆಸನಗಳ ವ್ಯವಸ್ಥೆಗಳಿಲ್ಲ. ಜೊತೆಗೆ ಬಿಸಿಲಿನ ಝಳ ಹೆಚ್ಚಿದ್ದು ಬಾಯಾರಿಕೆಯದಾಗ ಕುಡಿಯಲು ಶುದ್ಧ ನೀರಿನ ವ್ಯವಸ್ಥೆಯಿಲ್ಲ.

       ಇನ್ನೂ ಸಂಚಾರಿ ಶೌಚಾಲಯದ ವ್ಯವಸ್ಥೆ ಕಲ್ಪಿಸಬಹುದಾಗಿದ್ದರೂ ನಿರ್ಲಕ್ಷ್ಯಿಸಿದ್ದಾರೆ. ಹಾಗಾಗಿ ಮೂತ್ರ ಮತ್ತು ಶೌಚಕ್ಕೆ ಹೋಗಬೇಕಾದಾಗ ಬಯಲೇ ಗತಿಯಾಗಿದ್ದು ಸರ್ಕಾರಿ ನೌಕರರೇ ಸ್ವಚ್ಚ ಭಾರತ್ ಅಭಿಯಾನದ ವಿರುದ್ಧವಾಗಿ ಬಯಲಲ್ಲೇ ಮೂತ್ರ ಮತ್ತು ಶೌಚ ಮಾಡುವ ಅನಿವಾರ್ಯತೆ ಸೃಷ್ಠಿಯಾಗಿದೆ.

        ಈ ಚೆಕ್‍ಪೋಸ್ಟ್ ಇರುವ ಸ್ಥಳದಲ್ಲಿ ಸರ್ಕಾರಿ ಶಾಲೆಗಳಿದ್ದು ಇಲ್ಲಿನ ಶೌಚಾಲಯವನ್ನು 24 ಗಂಟೆಯೂ ಸಿಬ್ಬಂದಿ ಬಳಸುವ ವ್ಯವಸ್ಥೆ ಮಾಡಬಹುದಾಗಿದೆ. ಇನ್ನೂ ಒಂದು ತಿಂಗಳಿಗೂ ಹೆಚ್ಚು ಕಾಲ ಇಲ್ಲಿ ನಿತ್ಯ ಆರೇಳು ಮಂದಿ ಸಿಬ್ಬಂಧಿ ಕರ್ತವ್ಯ ನಿರ್ವಹಿಸಬಹಬೇಕಿದ್ದು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಚೆಕ್ ಪೋಸ್ಟ್‍ಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link