ಅಕ್ರಮ ಕಟ್ಟಡ ತೆರವು : ಶಾಸಕರ ಆದೇಶಕ್ಕೆ ಕವಡೆ ಕಾಸಿಗೆ ಕಿಮ್ಮತ್ತಿಲ್ಲ

ಹೊಸದುರ್ಗ :

    ಪಟ್ಟಣದಲ್ಲಿ ಯಾವುದೇ ಪರವಾನಗಿ ಇಲ್ಲದೇ ಮೂರು ನಾಲ್ಕು ಅಂತಸ್ತಿನ ಮನೆ ನಿರ್ಮಾಣ ಮಾಡಿಕೊಂಡಿರುವುದನ್ನು ಪರಿಶೀಲಿಸಿ ಅಂತವರಿಗೆ ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಪರವಾನಗಿ ಪಡೆಯದೇ ಕಟ್ಟಿರುವ ಕಟ್ಟಡಗಳನ್ನು ಮುಲಾಜಿಲ್ಲದೇ ಕೆಡವಿ ಹಾಕಿ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಕಳೆದ ವರ್ಷದ ನವೆಂಬರ್ ತಿಂಗಳಿನ 3 ನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಆದೇಶ ಹೊರಡಿಸಿದ್ದರು.

   ಆದರೆ ಶಾಸಕರ ನೀಡಿದ ಆದೇಶವನ್ನು ಪರಿಪಾಲನೆ ಮಾಡುತ್ತೇವೆಂದು ಆ ಸಮಯದಲ್ಲಿ ತಿಳಿಸಿದ ಪುರಸಭೆ ಅಧಿಕಾರಿಗಳು ಅದರ ಬಗ್ಗೆ ಎಳ್ಳಷ್ಟು ಕಾಳಜಿ ವಹಿಸದೇ ಶಾಸಕರ ಆದೇಶಕ್ಕೆ ಕವಡೆ ಖಾಸಿಗೆ ಕಿಮ್ಮತ್ತಿಲ್ಲವೆಂಬಂತೆ ಇಲ್ಲಿನ ಪುರಸಭೆ ಆಡಳಿತದ ಬೇಜವಾಬ್ದಾರಿ ತನ ಎದ್ದು ತೋರುವುಂತಾಗಿದೆ.

   ಪುರಸಭೆ ವ್ಯಾಪ್ತಿಯಲ್ಲಿ ಕೆಲವರು ಹೊಸ ಮನೆ ನಿರ್ಮಾಣ ಮಾಡುವಾಗ ಮತ್ತು ಹಳೆಯ ಮನೆಗಳ ಗೋಡೆಗಳನ್ನು ಕೆಡವಿ ಯಾವುದೇ ಪರವಾನಗಿ ಪಡೆಯದೇ ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದ ಪುರಸಭೆಗೆ ಸಾಕಷ್ಟು ನಷ್ಟ ಉಂಟಾಗುತ್ತಿದೆ. ಪಟ್ಟಣದ ಮುಖ್ಯರಸ್ತೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಒಂದು ಅಂತಸ್ತಿಗೆ ಲೈಸನ್ಸ್ ಪಡೆದು 3?4 ಅಂತಸ್ತು ಕಟ್ಟಿಸುತ್ತಿದ್ದಾರೆ. ಇದರ ಹಿಂದೆ ಕಾಣದ ಕೈಗಳು ಸಹಕರಿಸಿರುವ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಿದ್ದು ಪುರಸಭೆಯಿಂದ ಇದುವರೆಗೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿವೆ.

    ಮಾಲೀಕರು ಕಟ್ಟಡಗಳನ್ನು ನಿರ್ಮಿಸಲು ಅನುಮತಿ ಪಡೆದಿದ್ದಾರೆಯೇ? ಅಥವಾ ಪಡೆದಿಲ್ಲವಾ? ಎಂದು ಸೂಕ್ತ ತನಿಖೆ ಮಾಡಿ ಅಕ್ರಮವಾಗಿ ಮನೆ ನಿರ್ಮಿಸಿದವರ ವಿರುದ್ಧ ಇಲ್ಲಿನ ಪುರಸಭೆ ಮುಖ್ಯಾಧಿಕಾರಿಗಳು ಇನ್ನಾದರೂ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ?

    ಶಾಸಕರು ಮತ್ತು ಜಿಲ್ಲಾಧಿಕಾರಿ ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಟ್ಟ ಸರ್ಕಾರಿ ಜಮೀನುಗಳು, ನಿವೇಶನಗಳು , ಪಾರ್ಕ್ ಜಾಗ ಮತ್ತು ಪರವಾನಗಿ ಪಡೆಯದೇ ನಾಲ್ಕೈದು ಅಂತಸ್ತು ಕಟ್ಟಿರುವ ಕಟ್ಟಡಗಳನ್ನು ತೆರವು ಕಾರ್ಯಾಚರಣೆ ಮಾಡಿ ಎಂದು ಪತ್ರಿಕಾ ಹೇಳಿಕೆ ನೀಡಿದ್ದರೂ ಒತ್ತುವರಿದಾರರ ವಿರುದ್ದ ನೋಟಿಸ್ ನೀಡಲು ಪುರಸಭೆ ನಿರ್ಲಕ್ಷ್ಯ ವಹಿಸುತ್ತಿದೆ.

ಮೋಹನ್ ಗುಜ್ಜರ್, ಸಾಮಾಜಿಕ ಕಾರ್ಯಕರ್ತ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link