ಬೆಂಗಳೂರು
ಜೆಡಿಎಸ್ ಪಕ್ಷದ ಎರಡು ಕಾಂಗ್ರೆಸ್ ನ ಹತ್ತು ಸಂಸದರಿರುವ ಕ್ಷೇತ್ರಗಳನ್ನು ಹೊರತು ಪಡಿಸಿ ಉಳಿದ ಕ್ಷೇತ್ರಗಳ ಹಂಚಿಕೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.
ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಬಳಿಕ ಮಾತನಾಡಿದ ಅವರು, ಹಾಲಿ ಸಂಸದರಿರುವ ಕ್ಷೇತ್ರಗಳ ಬಗ್ಗೆ ಸಭೆಯಲ್ಲಿ ಚರ್ಚೆನಡೆಸಿಲ್ಲ. ಟಿಕೇಟ್ ಹಂಚಿಕೆ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ದೇವೇಗೌಡರು ಹಾಗೂ ರಾಹುಲ್ ಗಾಂಧಿ ಚರ್ಚಿಸಿ ಕ್ಷೇತ್ರ ಹಂಚಿಕೆಯನ್ನು ಅಂತಿಮಗೊಳಿಸಲಿದ್ದಾರೆ ಎಂದರು.
ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಛಿಸಿದ್ದೀರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಹರಿಪ್ರಸಾದ್, ಶಾಸಕಾಂಗ ಸಭೆ ನಾಯಕರು ಹಾಗೂ ಕೆಪಿಸಿಸಿ ಅಧ್ಯಕ್ಷರು ಈಗಾಗಲೇ ಕ್ಷೇತ್ರಗಳನ್ನು ನಿರ್ಧಾರ ಮಾಡಿದ್ದಾರೆ. ಆದರೆ ಅವರು ಎಂದುಕೊಂಡಂತೆ ನಡೆಯುವುದಿಲ್ಲ. ಸದ್ಯದ ವಾತಾವರಣ ಏನಿದೆ ಅನ್ನುವುದನ್ನು ನೋಡಿ ಟಿಕೇಟ್ ತೀರ್ಮಾನ ಮಾಡಬೇಕು. ಸಭೆ ಒಂದು ತರಹ ಕಣ್ಣೋರೆಸುವ ತಂತ್ರ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಸೈನಿಕರ ಶವದ ಮೇಲೆ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದೆ. ಪ್ರಧಾನಿ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನಡುವೆ ಮ್ಯಾಚ್‌ಫಿಕ್ಸಿಂಗ್ ನಡೆದಿದೆ. ಎರಡು ಕೆ.ಜಿ.ದನದ ಮಾಂಸ ಪತ್ತೆ ಹಚ್ಚುವವರಿಗೆ ಆರ್.ಡಿ.ಎಕ್ಸ್ ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂದರೆ ಇದು ಭಧ್ರತಾ ವೈಫಲ್ಯ ಎಂದು ಆರೋಪಿಸಿದರು.ರಕ್ಷಣಾ ಇಲಾಖೆ ಕಡತಗಳಿಗೆ ಬೆಂಕಿಬಿದ್ದ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ರಕ್ಷಣಾ ಇಲಾಖೆಯ ಕಡತಗಳನ್ನೇ ರಕ್ಷಿಸಲು ಸಾಧ್ಯವಾಗದೇ ಇರುವವರು ದೇಶದ ರಕ್ಷಣೆ ಹೇಗೆ ಮಾಡುತ್ತಾರೆ ಎಂದು ಅವರು ಪ್ರಶ್ನಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
