ಬೆಂಗಳೂರು
ತುಮಕೂರು ಬಳಿ ನಿರ್ಮಾಣವಾಗಿರುವ ಜಪಾನ್ ಕೈಗಾರಿಕಾ ವಸಹಾತು ಕೇಂದ್ರದಲ್ಲಿ ಜಪಾನಿ ಮಾದರಿ ಗ್ರಾಮವನ್ನು ನಿರ್ಮಿಸುವ ಆಲೋಚನೆ ಇದೆ ಎಂದು ಜಪಾನ್ ರಾಯಬಾರಿ ಕಛೇರಿಯ ಕೌನ್ಸಿಲ್ ಜನರಲ್ ತಾಕ ಮಾಕಿ ಗಿಟ ಕಾವಾ ಹೇಳಿದ್ದಾರೆ. ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಜಪಾನಿ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ಇದರಿಂದ ಕರ್ನಾಟಕ ಜಪಾನ್ ನಡುವಣ ಜನರ ಸಂಬಂಧಗಳು ಮತ್ತಷ್ಟು ಬೆಸೆಯಲಿವೆ ಎಂದರು.
ಇನ್ನು ಒಂದು ತಿಂಗಳಲ್ಲಿ ಬೆಂಗಳೂರು ಮತ್ತು ಜಪಾನ್ ನಡುವೆ ನೇರ ವಿಮಾನ ಸಂಪರ್ಕ ಏರ್ಪಡಲಿದ್ದು, ಪರಿಣಾಮವಾಗಿ ಉಭಯ ದೇಶಗಳ ನಡುವೆ ವ್ಯಾಪಾರ ವಹಿವಾಟು ಮತ್ತಷ್ಟು ಹೆಚ್ಚಾಗುವುದಲ್ಲದೇ, ಪ್ರವಾಸೋದ್ಯಮ ಅಭಿವೃದ್ಧಿಗೂ ನೆರವಾಗಲಿದೆ ಎಂದರು. ಜಪಾನಿ ವಸ್ತುಗಳ ಪಾರಂಪರಿಕ ಪಾದಚಾರಿ ಮಾರ್ಗವನ್ನು ಬೆಂಗಳೂರು ನಗರದಲ್ಲಿ ನಿರ್ಮಾಣ ಮಾಡಬೇಕೆಂಬ ಸಲಹೆಯನ್ನು ಅವರು ನೀಡಿದರು.
ಭಾರತೀಯ ವಿಜ್ಞಾನ ಮಂದಿರದ ಪ್ರೊಫೆಸರ್ ಮೋಹನ್ ಮಾತನಾಡಿ ಜಪಾನಿಯರು ಶಿಸ್ತು ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿ ಯಾಗಿದ್ದಾರೆ , ವಿಜ್ಞಾನ ಮತ್ತು ತಂತ್ರಜ್ಞಾನದಲಿ ಅಸಾಧಾರಣ ಪ್ರಗತಿ ಸಾಧಿಸಿದ್ದಾರೆ. ಅದನ್ನು ಬೆಂಗಳೂರಿನ ಅಭಿವೃದ್ದಿಗೂ ಧಾರೆ ಎರೆಯಬೇಕೆಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಏರ್ಪಡಿಸಿರುವ ಜಪಾನೀಯರ ತಿಂಡಿ ತಿನಿಸುಗಳ ಮೇಳಕ್ಕೆ ಹೆಚ್ಚಿನ ಸಂಖ್ಯೆಯ ಜನರು ಆಗಮಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
